
ತಿರುವನಂತಪುಂ: ಶಬರಿಮಲೆ ದೇಗುಲದ ಚಿನ್ನಕ್ಕೆ ಕನ್ನ ಪ್ರಕರಣದಲ್ಲಿ ಪ್ರಸ್ತುತ ತಿಳಿದಿರುವುದಕ್ಕಿಂತ ಅಧಿಕ ಪ್ರಮಾಣದ ಹೊನ್ನು ಕಳುವಾಗಿದೆ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ. 3 ಆರೋಪಿಗಳ ಕಸ್ಟಡಿಗೆ ಕೋರಿ ಕೊಲ್ಲಂ ವಿಚಕ್ಷಣಾ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ.ಈ ಮೊಲದು ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳು ಮತ್ತು ಬಾಗಿಲಿನ ಚೌಕಟ್ಟಿನ ತಾಮ್ರ ಲೇಪಿತ ಕವಚದಿಂದ ಚಿನ್ನದಲ್ಲಿ ಗೋಲ್ಮಾಲ್ ಮಾಡಿದ ಬಗ್ಗೆ ವರದಿಯಾಗಿತ್ತು. ಆದರೀಗ ಎಸ್‌ಐಟಿ, ಅದರೊಂದಿಗೆ ದೇಗುಲದ ಪ್ರಭಾ ಮಂಡಲದ 7 ತಾಮ್ರದ ಕವಚಗಳಿಂದಲೂ ಚಿನ್ನವನ್ನು ಕದಿಯಲಾಗಿದೆ ಎಂದು ಹೇಳಿದೆ.
ಅರ್ಜಿಯ ಪ್ರಕಾರ, ಆರೋಪಿಯಾಗಿರುವ ಚೆನ್ನೈನ ಪಂಕಜ್ ಭಂಡಾರಿಯವರ ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ವಿಶೇಷ ರಾಸಾಯನಿಕವೊಂದನ್ನು ಬಳಸಿ ಚಿನ್ನವನ್ನು ಕವಚಗಳಿಂದ ತೆಗೆಯಲಾಗಿತ್ತು. ಹೀಗೆ ತೆಗೆಯಲಾದ ಲೋಹವೀಗ ಬಳ್ಳಾರಿಯ ಆಭರಣ ವ್ಯಾಪಾರಿ ಗೋವರ್ಧನ್ ರೊಡ್ಡಂ ಮತ್ತು ಭಂಡಾರಿಯ ಬಳಿಯಿದೆ.ಪ್ರಸ್ತುತ ಈ ಚಿನ್ನಕ್ಕೆ ಕನ್ನ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ತಾಮ್ರ ಕವಚಗಳ ಮೇಲಿನ ಲೇಪಿತ ಚಿನ್ನದ ಮಾದರಿಗಳನ್ನು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ(ವಿಎಸ್‌ಎಸ್‌ಸಿ) ಕಳುಹಿಸಲಾಗಿದ್ದು, ಅದರ ವೈಜ್ಞಾನಿಕ ವಿಶ್ಲೇಷಣಾ ವರದಿ ಬರುವುದು ಬಾಕಿ ಇದೆ.
ಈ ಮೊದಲು, 1998ರಲ್ಲಿ ಉದ್ಯಮಿ ವಿಜಯ್ ಅವರು ಶಬರಿಮಲೆ ಮುಖ್ಯ ದೇಗುಲದ ಆವರಣದಲ್ಲಿರುವ ಅನ್ಯ ದೇವಸ್ಥಾನಗಳ ಲೇಪನಕ್ಕೆಂದು 30 ಕೆ.ಜಿ. ಚಿನ್ನವನ್ನು ನೀಡಿದ್ದರು. ಅದರ ದಾಖಲೆಗಳೂ ಕಾಣೆಯಾಗಿರುವುದಾಗಿ ವರದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ