
ಮಲಪ್ಪುರಂ: ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಹಾಗೂ ಅವರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 31 ವರ್ಷದ ಯೋಧ ನಿಧೀಶ್ ಹಾಗೂ ಅವರ ಪತ್ನಿ 31 ವರ್ಷದ ರಿನ್ಷಾ ಸಾವಿಗೆ ಶರಣಾದವರು. ನಿಧೀಶ್ ಕಳೆದ 13 ವರ್ಷಗಳಿಂದ ಮದ್ರಾಸ್ ರೆಜಿಮೆಂಟ್‌ನಲ್ಲಿ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು ಕಾಶ್ಮೀರದ ಸಾಂಬಾದಲ್ಲಿರುವ ಸೇನಾ ವಸತಿ ಗೃಹದಲ್ಲಿ ದಂಪತಿ ದಂಪತಿ ವಿಷ ಸೇವಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ಮಂಗಳವಾರ ರಿನ್ಷಾ ನಿಧನರಾಗಿದ್ದು, ನಿನ್ನೆಯಷ್ಟೇ ಅವರ ಅಂತ್ಯಸಂಸ್ಕಾರವನ್ನು ಕೇರಳದ ಇರಂಬುನ್ಕುಡುವಿನಲ್ಲಿ ನಡೆಸಲಾಗಿತ್ತು. ಆದರೆ ಪತ್ನಿಯ ಅಂತ್ಯಸಂಸ್ಕಾರ ನಡೆದ ಸ್ವಲ್ಪ ಹೊತ್ತಿನಲ್ಲೇ ಪತಿ ನಿಧೀಶ್ ಕೂಡ ಗುರುವಾರ ಸಾವನ್ನಪ್ಪಿದ್ದಾರೆ.
ಮೃತ ರಿನ್ಷಾ ಅವರು ಕೇರಳ ಪೊಲೀಸ್ ಇಲಾಖೆಯ ಸಿಪಿಒ ಶ್ರೇಣಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಡಿಸೆಂಬರ್ ತಿಂಗಳಲ್ಲಿ ನಿಧೀಶ್ ರಜೆಯ ಮೇಲೆ ಊರಿಗೆ ಬಂದಾಗ ರಿನ್ಷಾ ಕೂಡ ಅವರೊಂದಿಗೆ ಜಮ್ಮುವಿಗೆ ಹೋಗಿದ್ದರು. ಚೆನ್ನಾಗಿಯೇ ಇದ್ದ ಈ ದಂಪತಿಯ ಸಾವಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ, ಮೃತ ರಿನ್ಷಾ ಕಣ್ಣೂರಿನ ಪಿಣರಾಯಿಯ ಥಯ್ಯಿಲ್ ವಸಂತಾ ಹಾಗೂ ದಿವಂಗತ ಸೂರಜ್ ಅವರ ಪುತ್ರಿ. ಹಾಗೆಯೇ ಯೋಧ ನಿಧೀಶ್ ಕೇರಳದ ಪೆರುವಲ್ಲೂರ್ ಪಲಪೆಟ್ಟಿಪೆರ ಇರಂಬಂಕುಡುಕ್ಕುವಿನ ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣನ್ ಹಾಗೂ ಶಾಂತಾ ದಂಪತಿಯ ಪುತ್ರ. ಜಮ್ಮುವಿನಲ್ಲಿ ನಿಧನರಾದ ನಿಧೀಶ್ ಮೃತದೇಹವನ್ನು ಶನಿವಾರ ಕೇರಳದಲ್ಲಿರುವ ಹುಟ್ಟೂರಿಗೆ ಅಂತಿಮ ವಿಧಿವಿಧಾನಗಳಿಗಾಗಿ ತರಲಾಗುತ್ತಿದೆ. ಇದಕ್ಕಾಗಿ ನಿಧೀಶ್ ಕುಟುಂಬದ ಆಪ್ತರು ಜಮ್ಮುವಿಗೆ ತೆರಳಿದ್ದಾರೆ. ನಿಧೀಶ್ ಅವರು ಇಬ್ಬರು ಸೋದರರು ಹಾಗೂ ಪೋಷಕರನ್ನು ಅಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ