ಜನ ಟ್ರೋಲ್ ಮಾಡೋದಲ್ಲ, ಪೊಲೀಸರೇ ಟ್ರೋಲ್ ಮಾಡ್ತಾರೆ | ತ್ರಿಬಲ್ ರೈಡಿಂಗ್ ಮಾಡ್ತೀರಾ ? ಎಲ್ಲೆಲ್ಲೋ ಕ್ಯಾಮೆರಾ ಇಟ್ಟಿರ್ತಾರೆ ಎಚ್ಚರ..! ಪೊಲೀಸರ ಸೂಪರ್ ಐಡಿಯಾ ವೈರಲ್
ತಿರುವನಂತಪುರಂ(ಎ.18): ಇತ್ತೀಚಿನ ದಿನಗಳಲ್ಲಿ ಟ್ರೋಲ್ ಅನ್ನೋದು ಒಂದು ಸುಲಭ ಮಾಧ್ಯಮ. ಇದನ್ನೇ ಅಸ್ತ್ರ ಮಾಡಿಕೊಂಡು ಕ್ರಿಯೇಟಿವ್ ಆಗಿ ಯೋಚಿಸಿದ್ದಾರೆ ಕೇರಳ ಪೊಲೀಸ್. ದೊಣ್ಣೆ, ದಂಡ ಯಾಕಪ್ಪಾ.. ನಾವು ಟ್ರೋಲ್ ಮಾಡ್ತೀವಿ ಅಂತ ಹೊಸ ಸ್ಟೈಲ್ ಶುರು ಮಾಡಿದ್ದು, ಈಗ ಇದು ಸಖತ್ ವೈರಲ್ ಆಗಿದೆ.
ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡ್ ಮಾಡುವ ಜನರನ್ನು ಟ್ರೋಲ್ ಮಾಡಲು ಕೇರಳ ಪೊಲೀಸರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಏಪ್ರಿಲ್ 15 ರಂದು ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸೇವ್ ಮಾಡಿಕೊಂಡು ಸಿನಿಮಾದ ಕಾಮೆಡಿ ಡಯಲಾಗ್‌ಗಳನ್ನು ಸೇರಿಸಿದ್ದಾರೆ.
undefined
ಹೆಂಡ್ತಿಗೆ ಜಿರಳೆ ಭಯ: 3 ವರ್ಷದಲ್ಲಿ 18 ಸಲ ಮನೆ ಚೇಂಜ್ ಮಾಡಿದ
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಟ್ರೋಲ್ ವಿಡಿಯೋ ಮೂರು ಜನರು ಸ್ಕೂಟರ್ ಸವಾರಿ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರಲ್ಲಿ ಯಾರೂ ಹೆಲ್ಮೆಟ್ ಧರಿಸಿರುವುದಿಲ್ಲ. ಇದ್ದಕ್ಕಿದ್ದಂತೆ, ಅವರು ಸ್ಕೂಟರ್ ಅನ್ನು ನಿಲ್ಲಿಸುತ್ತಾರೆ ಮತ್ತು ಹಿಂಬದಿಯ ಇಬ್ಬರು ಸವಾರರು ಇಳಿಯುತ್ತಾರೆ. ಹಿಂಭಾಗದಲ್ಲಿ ಕುಳಿತಿದ್ದವನು ಕಾಲ್ನಡಿಗೆಯಲ್ಲಿ ಓಡಿಹೋದರೆ, ರೈಡ್ ಮಾಡುತ್ತಿದ್ದವ ಯು-ಟರ್ನ್ ತೆಗೆದುಕೊಂಡು ಓಡಿಹೋಗುತ್ತಾನೆ. ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿ ಜೇಬಿನಿಂದ ಮಾಸ್ಕ್ ತೆಗೆದುಕೊಂಡು ಕ್ಯಾಶುವಲ್ ಆಗಿ ರಸ್ತೆಯಲ್ಲಿ ನಡೆಯುವಂತೆ ನಟಿಸುತ್ತಾನೆ.
35 ಸೆಕೆಂಡುಗಳ ಕ್ಲಿಪ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಇದು 44,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ನೆಟ್ಟಿಗರು ಉತ್ತಮ ನಟನೆಗಾಗಿ ಇವರಿಗೆ ಪ್ರಶಸ್ತಿಯನ್ನು ನೀಡಬೇಕು" ಎಂದು ಬರೆದಿದ್ದಾರೆ.