
ನವದೆಹಲಿ(ಏ.18): ಈವರೆಗೆ ಸೋಂಕಿನಲ್ಲಿ ದಾಖಲೆ ಬರೆಯುತ್ತಿದ್ದ ಕೊರೋನಾ ವೈರಸ್, ಈಗ ದ್ವಿತೀಯ ಅಲೆಯಲ್ಲಿ ಸೋಂಕಿನ ಜತಾ ಸಾವಿನಲ್ಲೂ ದಾಖಲೆ ಬರೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ಗಂಟೆಯ ಅವಧಿಯಲ್ಲಿ ಸಾರ್ವಕಾಲಿಕ ದಾಖಲೆಯಾದ 1,341 ಜನ ಸಾವನ್ನಪ್ಪಿದ್ದಾರೆ. 2020ರ ಸೆ.18ರಂದು 1247 ಜನರು ಸಾವನ್ನಪ್ಪಿದ್ದೇ ಇದುವರೆಗಿನ ಗರಿಷ್ಠವಾಗಿತ್ತು.
ಇನ್ನೊಂದೆಡೆ ಚೇತರಿಕೆ ಪ್ರಮಾಣ ಕುಸಿಯುತ್ತಿದ್ದು, ಶೇ.87.23ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16 ಲಕ್ಷ ದಾಟಿದ್ದು, 16,79,740ಕ್ಕೆ ಏರಿದೆ. ಇದು ಒಟ್ಟಾರೆ ಪ್ರಕರಣಗಳ ಶೇ.11.56. ದೇಶದಲ್ಲಿ ಸತತ 38 ದಿನದಿಂದ ಸೋಂಕು ಏರುತ್ತಿದ್ದು, 2 ಲಕ್ಷಕ್ಕಿಂತ ಅಧಿಕ ಪ್ರಕರಣ ದಾಖಲಾಗಿದ್ದು ಸತತ 3ನೇ ದಿನ.
ಈವರೆಗೆ 1,45,26,609 ಜನರಿಗೆ ದೇಶದಲ್ಲಿ ಕೊರೋನಾ ಬಂದಿದ್ದು, 1,26,71,220 ಜನ ಗುಣವಾಗಿದ್ದಾರೆ. 1,75,649 ಜನರು ಸಾವನ್ನಪ್ಪಿದ್ದಾರೆ.
160: ಪ್ರತಿ ನಿಮಿಷಕ್ಕೆ ದಾಖಲಾಗುತ್ತಿರುವ ಸೋಂಕು
1: ಪ್ರತಿ ನಿಮಿಷಕ್ಕೆ ದಾಖಲಾಗುತ್ತಿರುವ ಸಾವಿನ ಸಂಖ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ