ಕೇರಳ ಅಪಘಾತದಲ್ಲಿ ಭಿಕ್ಷುಕ ಸಾವು: ಆತನ ಪೆಟ್ಟಿಗೆ ತೆರೆದ ಅಧಿಕಾರಿಗಳಿಗೆ ಶಾಕ್: ಒಳಗಿದ್ದ ಹಣ ಎಷ್ಟು ಲಕ್ಷ?

Published : Jan 08, 2026, 06:10 PM IST
Foreign Currency Found With Kerala Beggar After Death

ಸಾರಾಂಶ

ಕೇರಳದಲ್ಲಿ ಭಿಕ್ಷುಕರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ನಂತರ ಆತನ ಬಳಿ ಇದ್ದ ಪೆಟ್ಟಿಗೆಯನ್ನು ತೆರೆದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅದರೊಳಗಿರುವ ಭಾರಿ ಮೊತ್ತದ ಹಣ ನೋಡಿ ಶಾಕ್ ಕಾದಿತ್ತು. ಯಾರಿಗೂ ಆ ಭಿಕ್ಷುಕನ ಬಳಿ ಅಷ್ಟೊಂದು ಮೊತ್ತದ ಹಣ ಇರಬಹುದು ಎಂಬ ಕಲ್ಪನೆಯೂ ಇರಲಿಲ್ಲ.

ತಿರುವನಂತರಪುರ: ಕೇರಳದಲ್ಲಿ ಭಿಕ್ಷುಕರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ನಂತರ ಆತನ ಬಳಿ ಇದ್ದ ಪೆಟ್ಟಿಗೆಯನ್ನು ತೆರೆದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅದರೊಳಗಿರುವ ಭಾರಿ ಮೊತ್ತದ ಹಣ ನೋಡಿ ಶಾಕ್ ಕಾದಿತ್ತು. ಯಾರಿಗೂ ಆ ಭಿಕ್ಷುಕನ ಬಳಿ ಅಷ್ಟೊಂದು ಮೊತ್ತದ ಹಣ ಇರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಪೆಟ್ಟಿಗೆ ತೆರೆದು ನೋಡಿದಾಗ ಅದರಲ್ಲಿ ಬ್ಯಾನ್ ಆದ 200 ರೂಪಾಯಿ ನೋಟುಗಳು ವಿದೇಶಿ ಕರೆನ್ಸಿಗಳು ಸೇರಿದಂತೆ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ನಗದು ಪತ್ತೆಯಾಗಿದ್ದು, ಅಲ್ಲಿದ್ದವರನ್ನು ಅಚ್ಚರಿಗೀಡು ಮಾಡಿತ್ತು.

ಅನಿಲ್ ಕಿಶೋರ್ ಎಂಬುವವರೇ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಭಿಕ್ಷುಕನಾಗಿದ್ದಾರೆ. ಕೇರಳದ ಅಳಪ್ಪುಳದಲ್ಲಿ ಈ ಘಟನೆ ನಡೆದಿದೆ. ಅಲಪ್ಪುಳದ ಚಾಟುಮ್ಮುಟ್‌ ಪ್ರದೇಶದಲ್ಲಿ ಭಿಕ್ಷುಕ ಅನಿಲ್ ಕಿಶೋರ್ ಅವರದ್ದು ಬಹಳ ಚಿರಪರಿಚಿತವಾದ ಮುಖವಾಗಿತ್ತು. ಆ ಪ್ರದೇಶದಲ್ಲೆಲ್ಲಾ ಅವರು ಭಿಕ್ಷೆ ಬೇಡುತ್ತಿದ್ದರು. ಆದರೆ ಸೋಮವಾರ ರಾತ್ರಿ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಅವರಿಗೆ ಗಂಭೀರ ಗಾಯಗಳಾಗಿತ್ತು. ಸ್ಥಳೀಯ ನಿವಾಸಿಗಳು ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಆತ ಯಾರ ಜೊತೆಗೂ ಯಾವುದೇ ಮಾಹಿತಿ ಹಂಚಿಕೊಳ್ಳದೇ ಆಸ್ಪತ್ರೆಯಿಂದ ಅವನಾಗಿಯೇ ಹೊರಟು ಬಂದಿದ್ದ. ಆಸ್ಪತ್ರೆಯ ದಾಖಲೆಗಳ ಪ್ರಕಾರ ಆತನ ಹೆಸರು ಅನಿಲ್ ಕಿಶೋರ್ ಆಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಅನಿಲ್ ಕಿಶೋರ್ ಶವ ಅಂಗಡಿಯೊಂದರ ಮುಂಭಾಗ ಪತ್ತೆಯಾಗಿತ್ತು. ನಂತರ ಆತನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು.

ಆದರೆ ಆತನ ಶವದ ಬಳಿ ಇದ್ದ ಪೆಟ್ಟಿಗೆಯೊಂದನ್ನು ಪೊಲೀಸರು ನಂತರ ಏನಿದೆ ಎಂದು ನೋಡುವುದಕ್ಕೆ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಪೆಟ್ಟಿಗೆಯನ್ನು ತೆರೆದಾಗ ಅಚ್ಚರಿಗೊಳ್ಳುವ ಸರದಿ ಅಧಿಕಾರಿಗಳದ್ದಾಗಿತ್ತು. ಈ ಪೆಟ್ಟಿಗೆಯ ತುಂಬಾ ಹಣ ತುಂಬಿತ್ತು. ವಿದೇಶಿ ಕರೆನ್ಸಿಗಳು ಬ್ಯಾನ್ ಆದ 2000 ರೂಪಾಯಿಯ ನೋಟುಗಳು ಸೇರಿದಂತೆ ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ಹಣ ಆ ಪೆಟ್ಟಿಗೆಯಲ್ಲಿತ್ತು. 

ಇದನ್ನೂ ಓದಿ: 100 KM ಮೈಲೇಜ್: ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಗಾಡಿ ಸಿದ್ಧಪಡಿಸಿದ ಯುವಕ

ಈ ಹಣವನ್ನು ಪೆಟ್ಟಿಗೆಯೊಳಗಿನ ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಸ್ಥಳೀಯರ ಪ್ರಕಾರ ಅನಿಲ್ ಕಿಶೋರ್ ಅವರು ದಿನವೂ ಭಿಕ್ಷಾಟಣೆ ಮಾಡುತ್ತಿದ್ದರು. ಆಹಾರ ತಿನ್ನವುದಕ್ಕೆ ಹಣ ನೀಡುವಂತೆ ಕೇಳುತ್ತಿದ್ದರು. ಆದರೆ ಅವರ ಬಳಿ ಇಷ್ಟೊಂದು ಮೊತ್ತದ ಹಣವಿರಬಹುದು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಆತನ ಪೆಟ್ಟಿಗೆಯಲ್ಲಿರುವ ಹಣ ನೋಡಿ ಪ್ರತಿಯೊಬ್ಬರು ಅಚ್ಚರಿ ಪಟ್ಟರು ಎಂದು ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಹೇಳಿದ್ದಾರೆ. ಈ ಹಣವನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಸಬ್ ಇನ್ಸ್‌ಪೆಕ್ಟರ್‌ನಿಂದಲೇ 14 ವರ್ಷದ ಬಾಲಕಿ ಅಪಹರಿಸಿ ಗ್ಯಾಂಗ್‌ರೇಪ್: ಯೂಟ್ಯಬರ್ ಅರೆಸ್ಟ್: ಎಸ್‌ಐ ಪರಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಲೊಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?
100 KM ಮೈಲೇಜ್: ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಗಾಡಿ ಸಿದ್ಧಪಡಿಸಿದ ಯುವಕ