Bumper Lottery : XG 218582 ಖುಲಾಯಿಸಿದ ಪೇಂಟರ್  ಅದೃಷ್ಟ, 12  ಕೋಟಿಗೆ ಒಡೆಯ!

Published : Jan 18, 2022, 01:02 AM ISTUpdated : Jan 18, 2022, 01:06 AM IST
Bumper Lottery : XG 218582 ಖುಲಾಯಿಸಿದ ಪೇಂಟರ್  ಅದೃಷ್ಟ, 12  ಕೋಟಿಗೆ ಒಡೆಯ!

ಸಾರಾಂಶ

* ಖುಲಾಯಿಸಿದ ಪೇಂಟರ್ ಅದೃಷ್ಟ *  12 ಕೋಟಿ ರೂ. ಗೆದ್ದು ಕೋಟ್ಯಧಿಪತಿ * ಕೇರಳ ಲಾಟರಿ ಪಡೆದುಕೊಂಡ ಪೇಂಟರ್

ತಿರುವನಂತಪುರ(ಜ. 18) ಅದೃಷ್ಟ ಒಮ್ಮೊಮ್ಮೆ ಹುಡುಕಿಕೊಂಡು ಬರುತ್ತದೆ. ಟಿಕೆಟ್ ಖರೀದಿಸಿದ ಕೆಲವೇ ಕ್ಷಣದಲ್ಲಿ ಇವರು ಕೋಟ್ಯಧಿಪತಿಯಾಗಿದ್ದಾರೆ.  ಪೇಂಟಿಂಗ್ ಕೆಲಸ ಮಾಡುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯನ್ನು ಅದೃಷ್ಟ ಹುಡುಕಿಕೊಂಡು ಬಂದಿದೆ,.  ಕೇರಳದ (Kerala) ಕೊಟ್ಟಾಯಂನಲ್ಲಿ ಪೇಂಟಿಂಗ್ ಕೆಲಸಗಾರರೊಬ್ಬರು ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಲಾಟರಿಯ ಮೊದಲ (Kerala Christmas-New Year Bumper lottery)  ಬಹುಮಾನವಾದ 12 ಕೋಟಿ ರೂ. ಗೆದ್ದು ಕೋಟ್ಯಧಿಪತಿಯಾಗಿದ್ದಾರೆ.

ಕುಡಯಂಪಾಡಿ ಮೂಲದ ಸದಾನಂದನ್ ಅಲಿಯಾಸ್ ಅವರು ಭಾನುವಾರ ಬೆಳಗ್ಗೆ ತಿರುವನಂತಪುರದಲ್ಲಿ ಲಕ್ಕಿ ಡ್ರಾಗೆ ಕೆಲವೇ ಗಂಟೆಗಳ ಮೊದಲು 218582 ಸಂಖ್ಯೆಯ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಟಿಕೆಟ್ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಬಹುಮಾನ ಅನೌನ್ಸ್ ಆಗಿದ್ದು, ಸದಾನಂದನ್ ಅವರಿಗೆ ಬಂಪರ್ ಲಾಟರಿ ತಾಗಿದೆ.

ಅಜ್ಜಿಗೆ ಹೊಡೆದ ಲಾಟರಿ... ಬಂದ ಹಣದಲ್ಲಿ ಸರಿ ಅರ್ಧ ಟಿಕೆಟ್ ಮಾರಿದವನಿಗೆ ನೀಡಿ ಉದಾರತೆ

ಮಾಂಸ ಖರೀದಿಗೆ ಎಂದು  ಮಾರುಕಟ್ಟೆಗೆ ಹೋಗಿದ್ದೆ. ಆಗ ಲಾಟರಿ ಮಾರಾಟಗಾರ ಸೆಲ್ವನ್ ನಿಂದ ಈ ಟಿಕೆಟ್ ಖರೀದಿಸಿದೆ. ಅದಕ್ಕೆ ಬಹುಮಾನ ಬಂದಿದ್ದು ಸಂತಸ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಲಾಟರಿಯಿಂದ ಬಂದ ಹಣವನ್ನು ತನ್ನ ಮಕ್ಕಳಾದ ಸನೀಷ್ ಮತ್ತು ಸಂಜಯ್ ಅವರಿಗಾಗಿ ಬಳಸುತ್ತೇನೆ ಎಂದಿರುವ ಸದಾನಂದನ್ ಅವರು 50 ವರ್ಷಗಳಿಂದ ಪೇಂಟಿಂಗ್ ಅನ್ನು ವೃತ್ತಿ ಮಾಡಿಕೊಂಡಿದ್ದಾರೆ.

ಕ್ರಿಸ್‌ಮಸ್ ಬಂಪರ್‌ನ ಟಿಕೆಟ್‌ಗಳ ಬೆಲೆ 300 ರೂ. ಲಾಟರಿಯು ಎರಡನೇ ಬಹುಮಾನ 3 ಕೋಟಿ ರೂ. (ಆರು ಟಿಕೆಟ್‌ಗಳಿಗೆ ನೀಡಲಾಗಿದೆ) ಮತ್ತು ಮೂರನೇ ಬಹುಮಾನ ರೂ. 60 ಲಕ್ಷ (ಆರು ಟಿಕೆಟ್‌ಗಳಿಗೆ ನೀಡಲಾಗಿದೆ).

ಲಾಟರಿ ಇಲಾಖೆಯು ಆರಂಭದಲ್ಲಿ 24 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿತ್ತು.  ಸೆಪ್ಟೆಂಬರ್ 2021 ರಲ್ಲಿ, ಕೇರಳದ ಆಟೋ ಡ್ರೈವರ್ ಓಣಂ  ಹಬ್ಬದ  12 ಕೋಟಿ ರೂಪಾಯಿಗಳ ಲಾಟರಿ ಬಹುಮಾನವನ್ನು ಗೆದ್ದಿದ್ದರು.

ದುಬೈ ಲಾಟರಿ: ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್‌ ಸೋಮರಾಜನ್‌ ಮತ್ತು ಅವರ 9 ಸ್ನೇಹಿತರು ದುಬೈನಲ್ಲಿ ಭರ್ಜರಿ 40 ಕೋಟಿ ಮೊತ್ತದ ಲಾಟರಿ ಗೆದ್ದಿದ್ದರು.

ದುಬೈ ಸರ್ಕಾರ ನಡೆಸುವ ಲಾಟರಿ ಸ್ಪರ್ಧೆಯಲ್ಲಿ ರಂಜಿತ್‌ ಮತ್ತು ವಿವಿಧ ದೇಶಗಳಿಗೆ ಸೇರಿದ 10 ಜನರು ಸೇರಿ ತಲಾ 2000 ರು. ತೆತ್ತು ಬಂಪರ್‌ ಲಾಟರಿಯ ಟಿಕೆಟ್‌ ಖರೀದಿಸಿದ್ದರು. ನಾನಾ ಯಾವಾಗಲಾದರೂ 2 ಮತ್ತು3ನೇ ಬಹುಮಾನ ಬರಬಹುದು ಎಂದು ನಿರೀಕ್ಷಿಸುತ್ತಿದ್ದೆ. ಇದಕ್ಕಾಗಿಯೇ ಕಳೆದ 3 ವರ್ಷಗಳಿಂದ ಟಿಕೆಟ್‌ ಖರೀದಿಸುತ್ತಿದ್ದೆ. ಒಂದಲ್ಲಾ ಒಂದು ದಿನ ಲಾಟರಿ ಹೊಡೆಯಬಹುದು ಎಂಬ ಆಸೆ ಇತ್ತು. ಆದರೆ ಬಂಪರ್‌ ಬಹುಮಾನದ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ ರಂಜಿತ್‌. ಇದೀಗ ಎಲ್ಲರಿಗೂ ತಲಾ 4 ಕೋಟಿ ರು.ನಷ್ಟು ಹಣ ಸಿಗಲಿದೆ.

''ನನಗೆ ಈ ಬಾರಿ ಜಾಕ್‌ಪಾಟ್‌ ಹೊಡೆಯುತ್ತದೆಂದು ಎಣಿಸಿರಲಿಲ್ಲ. ಎರಡನೇ ಅಥವಾ ಮೂರನೇ ಬಹುಮಾನ ಬರಬಹುದೆಂದು ಭಾವಿಸಿದ್ದೆ,''ಎಂದು ಸೋಮರಾಜನ್‌ ಹೇಳಿದ್ದಾರೆ. 2008ರಿಂದಲೂ ಅವರು ದುಬೈನಲ್ಲಿ ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಅವರ ಸಂಬಳ ಕಡಿತಗೊಂಡಿತ್ತು. ಹೀಗಾಗಿ 9 ಜನರೊಂದಿಗೆ ಸೇರಿ ಜೂನ್‌ 29ರಂದು ಲಾಟರಿ ಖರೀದಿಸಿದ್ದರು.

ಮಂಡ್ಯದ ವ್ಯಕ್ತಿಯೊಬ್ಬರು ತಮಿಳುನಾಡಿನಲ್ಲಿ ನೂರು ರೂ. ಲಾಟರಿ ಟಿಕೆಟ್ ತೆಗೆದುಕೊಂಡಿದ್ದರು. ಅವರಿಗೆ ಒಂದು ಕೋಟಿ ರೂ.  ಲಾಟರಿ ಒಲಿದು ಬಂದಿತ್ತು. ಟಿಕೆಟ್ ತೆಗೆದುಕೊಂಡು ತಮಿಳುನಾಡಿನಿಂದ ಕರ್ನಾಟಕಕ್ಕೆ ಬಂದಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌