ಅಮೇಜಾನ್‌ನಲ್ಲಿ ಕವರ್ ಆರ್ಡರ್‌ ಮಾಡಿದ್ರೆ ಜೊತೆಗೆ ಸಿಕ್ತು ಪಾಸ್‌ಪೋರ್ಟ್

By Kannadaprabha News  |  First Published Nov 6, 2021, 6:37 AM IST
  • ಕೇರಳದ ವಯನಾಡಿನ ವ್ಯಕ್ತಿಯೋರ್ವರು ಆನ್‌ಲೈನ್‌ಲ್ಲಿ ಪಾಸ್‌ಪೋರ್ಟ್ ಕವರ್ ಆರ್ಡರ್
  • ಅದರ ಜೊತೆಗೆ ಪಾಸ್‌ಪೋರ್ಟ್ ಸಹ  ಕಳುಹಿಸಲಾಗಿದೆ. 
     

ಕೋಜಿಕ್ಕೋಡ್ (ನ.06):  ಕೇರಳದ (kerala) ವಯನಾಡಿನ ವ್ಯಕ್ತಿಯೋರ್ವರು ಆನ್‌ಲೈನ್‌ಲ್ಲಿ (Online) ಪಾಸ್‌ಪೋರ್ಟ್ (Passport) ಕವರ್ ಆರ್ಡರ್ ಮಾಡಿದ್ದು ಅದರ ಜೊತೆಗೆ ಪಾಸ್‌ಪೋರ್ಟ್ ಸಹ  ಕಳುಹಿಸಲಾಗಿದೆ. 

ವಯನಾಡು ಜಿಲ್ಲೆಯ ಕಣಿಯಾಂಬೆಟ್ಟುವಿನ ಮಿದುನ್ ಬಾಬು ಎಂಬುವವರು ಅಕ್ಟೋಬರ್ 30 ರಂದು ಪಾಸ್‌ಪೋರ್ಟ್‌  ಕವರ್ ಆರ್ಡರ್ ಮಾಡಿದ್ದು ಡೆಲಿವರ್ (Deliver) ಮಾಡುವಾಗ ಜೊತೆಗೆ ಪಾಸ್‌ಪೋರ್ಟನ್ನು ಸಹ ಪಡೆದುಕೊಂಡಿದ್ದಾರೆ.

Tap to resize

Latest Videos

ನವೆಂಬರ್ 1 ರಂದು ಇವರ ಮನೆ ಬಾಗಿಲಿಗೆ ಇವರ ಆರ್ಡರ್ (Order) ತಲುಪಿದ್ದು,  ಅದರೊಂದಿಗೆ ಪಾಸ್‌ಪೋರ್ಟ್‌ ಸಹ ಇರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. 

ಡೆಲಿವರ್ ಆದ ಕವರ್ ತೆರೆದು ನೋಡಿದಾಗ ಅದು ತ್ರಿಶೂರ್ ಜಿಲ್ಲೆಯ ಕುನ್ನಮ್‌ಕುಳಮ್‌ನ ಬಾಲಕನದ್ದೆಂದು ತಿಳಿದು ಬಂದಿದೆ. 

ಈ ಬಗ್ಗೆ ತಾವು ಆರ್ಡರ್‌ ಮಾಡಿದ್ದ ಜಾಲ ತಾಣ  ಅಮೇಜಾನ್‌ನಲ್ಲಿ (Amazon) ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸತತವಾಗಿ ಮೂರು ಬಾರಿ   ಆನ್‌ಲೈನ್ ಮಾರ್ಕೆಟಿಂಗ್  (Online marketing) ಸಿಬ್ಬಂದಿ ಸಂಪರ್ಕಿಸಲು ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಸತತವಾಗಿ ಸಂಪರ್ಕಿಸಿದರೂ ತಮಗೆ ಸೂಕ್ತ ಸಲಹೆ ದೊರೆತಿಲ್ಲ. ಇಂತಹ ಮುಖ್ಯ ದಾಖಲಾತಿ ವಿಚಾರದಲ್ಲಿ ಯಾವುದೇ ಮಾಹಿತಿಯನ್ನೂ ಅವರು ನೀಡಿಲ್ಲ ಎಂದಿದ್ದಾರೆ. 

ಬಳಿಕ ಅವರ ಸ್ನೇಹಿತರೋರ್ವರ ಸಲಹೆಯಂತೆ ಪೊಲೀಸರಿಗೆ (Police) ದೂರು ನೀಡಿದ್ದು, ಅಲ್ಲಿಯೇ ತಮಗೆ ದೊರೆತ ಪಾಸ್‌ಪೋರ್ಟ್‌ (Passport) ಸಲ್ಲಿಸಿದ್ದಾರೆ. 

ಇದಕ್ಕೆಲ್ಲಾ ಕಾರಣವಾಗಿದ್ದು, 17 ವರ್ಷದ ಬಾಲಕ ನೂ (Boy) ಸಹ ಪಾಸ್‌ಪೋರ್ಟ್ ಕವರ್‌ಗೆ ಆರ್ಡರ್ ಮಾಡಿದ್ದು, ಆದರೆ ಅದು ಆತನ ಪಾಸ್‌ಪೋರ್ಟ್‌ಗೆ ಹೊಂದಾಣಿಕೆ ಆಗಲಿಲ್ಲ.  ಅದಾದ ಬಳಿಕ ಅದರಲ್ಲಿ ಹಾಕಿದ್ದ ಪಾಸ್‌ಪೋರ್ಟ್‌ ತೆಗೆಯದೇ ಅಮೇಜಾನ್‌ಗೆ  ಕವರ್ ಮರಳಿಸಿದ್ದು ಅದನ್ನು ಮತ್ತೆ ಬೇರೆ ಸಿಬ್ಬಂದಿಗೆ ಕವರ್‌ ಜೊತೆ ಡೆಲಿವರ್ ಮಾಡಲಾಗಿದೆ. 

ಅಂಚೆ ಕಚೇರಿಲೂ ಸಿಗುತ್ತೆ ಪಾಸ್‌ಪೋರ್ಟ್

 

ಪಾಸ್ಪೋರ್ಟ್‌ ನಮಗೆ ಅತ್ಯಗತ್ಯವಾಗಿ ಬೇಕಾಗಿರೋ ದಾಖಲೆಗಳಲ್ಲೊಂದು. ನೇಪಾಳ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರಕ್ಕೆ ಭೇಟಿ ನೀಡಬೇಕಾದ್ರೂ ಪಾಸ್‌ಪೋರ್ಟ್‌ ಬೇಕೇಬೇಕು. ವಾಹನ ಚಲಾಯಿಸಲು ಹೇಗೆ ಡ್ರೈವಿಂಗ್‌ ಲೈಸೆನ್ಸ್‌ ಅಗತ್ಯವೋ ಹಾಗೆಯೇ ದೇಶದ ಹೊರಗೆ ಅಧಿಕೃತವಾಗಿ ಭೇಟಿ ನೀಡಲು ನಮ್ಮ ಸರ್ಕಾರದಿಂದ ಅನುಮತಿಯ ಜೊತೆಗೆ ಭದ್ರತೆಯನ್ನೂ ಒದಗಿಸೋ ದಾಖಲೆಯೇ ಪಾಸ್‌ಪೋರ್ಟ್‌. ದೇಶದೊಳಗೆ ಕೂಡ ಪಾಸ್‌ಪೋರ್ಟ್‌ನ್ನು ನೀವು ನಿಮ್ಮ ಗುರುತು ಚೀಟಿಯನ್ನಾಗಿ ಬಳಸಬಹುದು ಕೂಡ. ಇಷ್ಟು ದಿನ ಪಾಸ್‌ಪೋರ್ಟ್‌ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ರೂ ಕೂಡ ನಗರಕ್ಕೋ ಅಥವಾ ಜಿಲ್ಲೆಗೋ ಒಂದರಂತೆ ದೂರದಲ್ಲಿರೋ ಸೇವಾಕೇಂದ್ರಗಳಿಗೆ ಭೇಟಿ ನೀಡೋದು ಕಡ್ಡಾಯವಾಗಿತ್ತು. ಹೌದು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಮೂಲಕ ಪಾಸ್‌ಪೋರ್ಟ್‌ ವಿತರಣೆಗೆ ಅವಕಾಶ ನೀಡಿತ್ತು. ಆದ್ರೆ ಇನ್ನು ಮುಂದೆ ಅಂಚೆ ಕಚೇರಿಗಳಲ್ಲಿಯೂ ಪಾಸ್‌ಪೋರ್ಟ್‌ ಪಡೆಯೋ ಅವಕಾಶ ಕಲ್ಪಿಸಲಾಗಿದೆ. 

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ? 

ಎಷ್ಟು ಅಂಚೆಕಚೇರಿಗಳಲ್ಲಿ ಸೌಲಭ್ಯ
ಅಂಚೆ ಇಲಾಖೆ ನೀಡಿದ ಮಾಹಿತಿ ಅನ್ವಯ ದೇಶಾದ್ಯಂತ 424 ಅಂಚೆಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಯನ್ನೂ ಈ ಹಿಂದಿನಂತೆಯೇ ಆನ್ಲೈನ್ ಮೂಲಕವೇ ಸಲ್ಲಿಸಬೇಕು.  ಪಾಸ್ಪೋರ್ಟ್ ಸೇವಾ ಕೇಂದ್ರದ ಅಧಿಕೃತ ವೆಬ್ಸೈಟ್ https://www.passportindia.gov.in/  ಭೇಟಿ ನೀಡಿ, ಅರ್ಜಿ ಭರ್ತಿಗೊಳಿಸಿ, ಶುಲ್ಕ ಪಾವತಿಸಬೇಕು. ಆ ಬಳಿಕ ಮುದ್ರಿತ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ನಿಮಗೆ ನಿಗದಿಪಡಿಸಿದ ದಿನಾಂಕದಂದು ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಹೊಂದಿರೋ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು. ಈ ಅಂಚೆ ಕಚೇರಿಗಳು, ಪಾಸ್ಪೋರ್ಟ್ ಸೇವಾ ಕೇಂದ್ರಗಳಂತೆಯೇ ಕಾರ್ಯನಿರ್ವಹಿಸಲಿದ್ದು, ನಿಮ್ಮ ಅರ್ಜಿ ಹಾಗೂ ವೈಯಕ್ತಿಕ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಆ ಬಳಿಕ ನಿಮ್ಮ ಪಾಸ್ಪೋರ್ಟ್ಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮಾಡಲಾಗುತ್ತದೆ. ಪಾಸ್ಪೋರ್ಟ್ ನಿಮಗೆ ನೀಡೋ ಮುನ್ನ ಪೊಲೀಸ್ ಪರಿಶೀಲನೆ ಕೂಡ ನಡೆಯುತ್ತದೆ. ಇದಕ್ಕೆ ನೀವು ಪಾಸ್ಪೋರ್ಟ್ ಸೇವಾ ಕೇಂದ್ರದ ವೆಬ್ಸೈಟ್ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ. ನಿಗದಿತ ದಿನಾಂಕದಂದು ನಿಮ್ಮ ಮನೆಯಿರೋ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯ ಸಿಬ್ಬಂದಿ ನಿಮ್ಮನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತಾರೆ. 

ಆದಾಯ ತೆರಿಗೆ ಭಾರ ತಗ್ಗಿಸೋ ಮಾರ್ಗಗಳು ಯಾವುವು?

ಯಾವೆಲ್ಲ ದಾಖಲೆಗಳು ಅಗತ್ಯ?
 ಹೊಸದಾಗಿ ಪಾಸ್ಪೋರ್ಟ್ಗೆ ಸಲ್ಲಿಸೋವಾಗ ಈ ಕೆಳಗಿನ ದಾಖಲೆಗಳನ್ನು ಹೊಂದಿರೋದು ಅಗತ್ಯ.
-ನಿಮ್ಮ ಫೋಟೋ ಹೊಂದಿರೋ ಯಾವುದೇ ರಾಷ್ಟ್ರೀಯ, ಖಾಸಗಿ ಅಥವಾ ಗ್ರಾಮೀಣ ಬ್ಯಾಂಕ್ ಖಾತೆಯ ಪಾಸ್ಬುಕ್ ಪ್ರತಿ. 
-ವೋಟರ್ ಐಡಿ
-ಆಧಾರ್ ಕಾರ್ಡ್
-ವಿದ್ಯುತ್ ಬಿಲ್
-ಬಾಡಿಗೆ ಒಪ್ಪಂದ ಪತ್ರ
-ವಾಹನ ಚಾಲನಾ ಪರವಾನಗಿ
-ಪ್ಯಾನ್ ಕಾರ್ಡ್
-ಲ್ಯಾಂಡ್ಲೈನ್ ಅಥವಾ ಪೋಸ್ಟ್ಪೇಯ್ಡಿ ಮೊಬೈಲ್ ಬಿಲ್
-ಅಡುಗೆ ಅನಿಲ ಸಂಪರ್ಕದ ದೃಢೀಕರಣ ಪತ್ರ
-ಸಂಗಾತಿಯ ಪಾಸ್ಪೋರ್ಟ್ ಪ್ರತಿ
-ಪ್ರತಿಷ್ಠಿತ ಕಂಪನಿಯಲ್ಲಿ ನೀವು ಉದ್ಯೋಗಿಯಾಗಿದ್ರೆ ಅಲ್ಲಿನ ಮುಖ್ಯಸ್ಥರು ಸಂಸ್ಥೆಯ ಲೆಟರ್ಹೆಡ್ನಲ್ಲಿ ನೀಡಿರೋ ದೃಢೀಕರಣ ಪತ್ರ
- ಜನನ ಪ್ರಮಾಣ ಪತ್ರ ಅಥವಾ ಶಾಲೆಯ ವರ್ಗಾವಣೆ ಪತ್ರ ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ
-18 ವರ್ಷದೊಳಗಿನವರಿಗಾದ್ರೆ ಹೆತ್ತವರ ಪಾಸ್ಪೋರ್ಟ್ ಮೂಲಪ್ರತಿ ಹಾಗೂ ಸ್ವದೃಢೀಕರಣ ಹೊಂದಿರೋ ನಕಲು ಪ್ರತಿ ಅಗತ್ಯ

ಉದ್ಯೋಗ ಕಳೆದುಕೊಂಡ್ರಾ? ಮುಂದೆ ಲೈಫ್‌ ಹೇಗೆ ಅಂತೀರಾ?

ಅವಧಿ ಎಷ್ಟು?
ವಯಸ್ಕರ ಪಾಸ್ಪೋರ್ಟ್ ಅವಧಿ 10 ವರ್ಷ. ಇನ್ನು  18 ವರ್ಷದೊಳಗಿನವರು ಅಂದ್ರೆ ಅಪ್ರಾಪ್ತರಾಗಿದ್ರೆ ಅವರ ಪಾಸ್ಪೋರ್ಟ್ ಅವಧಿ 5 ವರ್ಷ ಅಥವಾ 18 ವರ್ಷ ಇವೆರಡರಲ್ಲಿ ಯಾವುದು ಬೇಗವೋ ಅದು. ಆದ್ರೆ 15-18 ವಯಸ್ಸಿನ ಅಪ್ರಾಪ್ತರು 10 ವರ್ಷ ವ್ಯಾಲಿಡಿಟಿ ಹೊಂದಿರೋ ಅಥವಾ 18 ವರ್ಷ ತಲುಪೋ ತನಕ ಇವೆರಡರಲ್ಲಿ ಯಾವುದಾದ್ರೂ ಒಂದು ಅವಧಿಯ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬಹುದು. 

click me!