Edible oil prices;ಪೆಟ್ರೋಲ್ ಡೀಸೆಲ್ ದರ ಕಡಿತ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಇಳಿಸಿದ ಕೇಂದ್ರ!

By Suvarna News  |  First Published Nov 5, 2021, 9:43 PM IST
  • ಪೆಟ್ರೋಲ್ ಡೀಸೆಲ್ ದರ ಇಳಿಕೆ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್
  • ಅಡುಗೆ ಎಣ್ಣೆ ದರ ಇಳಿಕೆ, ಗರಿಷ್ಠ 20 ರೂಪಾಯಿ ಇಳಿಸಿದ ಕೇಂದ್ರ
  • ದೀಪಾವಳಿ ಹಬ್ಬಕ್ಕೆ ಜನರಿಗೆ ಡಬಲ್ ಧಮಾಕಾ

ನವದೆಹಲಿ(ನ.05): ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದೆ. ಇದೀಗ ಈ ಸಂಭ್ರಮದ ಬೆನ್ನಲ್ಲೇ ಕೇಂದ್ರ ಮತ್ತೊಂದು ಗಿಫ್ಟ್ ನೀಡಿದೆ. ದುಬಾರಿಯಾಗಿದ್ದ ಅಡುಗೆ ಎಣ್ಣೆ ಬೆಲೆ ಕೂಡ ಇಳಿಕೆ ಮಾಡಲಾಗಿದೆ. 

"

Tap to resize

Latest Videos

undefined

Fuel Price| ಬಿಜೆಪಿಯ 8 ಸೇರಿ ಸೇರಿ 18 ರಾಜ್ಯಗಳಲ್ಲಿ ತೈಲ ಸುಂಕ ಇಳಿಕೆ!

ಖಾದ್ಯ ತೈಲದ ಬೆಲೆ ಹಲವು ರಾಜ್ಯಗಳಲ್ಲಿ ಇಳಿಕೆಯಾಗಿದೆ. ಗರಿಷ್ಠ 20 ರೂಪಾಯಿ ವರೆಗೆ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕಾ ವಿತರಣಾ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಖಾದ್ಯ ಎಣ್ಣೆ ಬೆಲೆ ಇಳಿಕೆ ಜನರ ಮುಖದಲ್ಲಿ ಸಂತಸ ಡಬಲ್ ಆಗಿದೆ.

ಅಡುಗೆ ಎಣ್ಣೆ ಮೇಲಿನ ಮೂಲ ಸೆಸ್ ಹಾಗೂ ಕೃಷಿ ಸೆಸ್ ಕೇಂದ್ರ ಸರ್ಕಾರ ಇಳಿಸಿದೆ, ಇದರ ಪರಿಣಾಮ ದೇಶದಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾಗಿದೆ. ರಾಜ್ಯದಿಂದ ರಾಜ್ಯಕ್ಕೆ ದರಗಳಲ್ಲಿ ವ್ಯತ್ಯಾಸವಾಗಲಿದೆ. ಅಡುಗೆ ಎಣ್ಣೆಗಳಾದ ಸೂರ್ಯಕಾಂತಿ, ಸೊಯಾಬಿನ್ ಎಣ್ಣೆ ಮೇಲಿದ್ದ ಶೇಕಡಾ 2.5 ರಷ್ಟಿದ್ದ ಮೂಲ ಕರವನ್ನು ಶೂನ್ಯಕ್ಕೆ ಇಳಿಸಲಾಗಿದೆ.

ಅಡುಗೆ ಎಣ್ಣೆ ಬೆಲೆ ತಗ್ಗಿಸಲು ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

ಸೂರ್ಯಕಾಂತಿ ಎಣ್ಣೆ ಮೇಲಿದ್ದ ಶೇಕಡಾ 5ಕ್ಕ ಇಳಿಸಲಾಗಿದೆ.  ತಾಳೆ ಎಣ್ಣೆ ಮೇಲಿದ್ದ ಶೇಕಡಾ 20 ರಷ್ಟಿದ್ದ ಕೃಷಿ ಕರವನ್ನು 7.5ಕ್ಕೆ ಇಳಿಸಲಾಗಿದೆ.  ಇದರಿಂದ ಅಡುಗೆ ಎಣ್ಣೆ ಮೇಲಿನ ದರ ಕೆಲ ರಾಜ್ಯಗಳಲ್ಲಿ ಗರಿಷ್ಠ 20 ರೂಪಾಯಿ ಇಳಿಕೆಯಾಗಿದೆ.  

ದರ ಇಳಿಕೆ: ತಾಳೆ ಎಣ್ಣೆ-  
• ದೆಹಲಿ – 6 ರೂ.
• ಆಲಿಘಡ್  - 18 ರೂ.
• ಜೊವಾಯಿ, ಮೇಘಾಲಯ-10 ರೂ.
• ದಿಂಡಿಗಲ್, ತಮಿಳುನಾಡು - 5 ರೂ.
• ಕಡಲೂರು, ತಮಿಳುನಾಡು -7 ರೂ.

ದರ ಇಳಿಕೆ: ಶೇಂಗಾ ಎಣ್ಣೆ  
• ದೆಹಲಿ -  7 ರೂ.
• ಸಾಗರ್ , ಮಧ್ಯಪ್ರದೇಶ - 10 ರೂ.
• ಜೊವಾಯಿ  ಮೇಘಾಲಯ- 10 ರೂ.
• ಕಡಲೂರು, ತಮಿಳುನಾಡು - 10 ರೂ.
• ಕರೀಂನಗರ, ತೆಲಂಗಣಾ- 5 ರೂ.
• ಆಲಿಗಢ್, ಉತ್ತರ ಪ್ರದೇಶ -  5 ರೂ.

ದರ ಇಳಿಕೆ: ಸೋಯಾ ಎಣ್ಣೆ- 
• ದೆಹಲಿ- 5 ರೂ.
• ಲೂಧಿಯಾನ, ಪಂಜಾಬ್ -  5 ರೂ.
• ಆಲಿಘಡ್, ಉತ್ತರ ಪ್ರದೇಶ -  5 ರೂ.
• ದುರ್ಗಾ, ಛತ್ತೀಸ್ ಗಢ -11 ರೂ.
• ಸಾಗರ್ , ಮಧ್ಯಪ್ರದೇಶ - 7 ರೂ.
• ನಾಗ್ಪುರ , ಮಹಾರಾಷ್ಟ್ರ -  7 ರೂ.
• ಜೊವಾಯಿ, ಮೇಘಾಲಯ - 5 ರೂ.

ದರ ಇಳಿಕೆ: ಸೂರ್ಯಕಾಂತಿ ಎಣ್ಣೆ-  
• ದೆಹಲಿ – 10 ರೂ.
• ರೂರ್ಕೆಲಾ, ಒಡಿಶಾ -  5 ರೂ.
• ಜೊವಾಯಿ , ಮೇಘಾಲಯ -20 ರೂ.

ಕಡಿತಕ್ಕೂ ಮುನ್ನ ಎಲ್ಲ ರೂಪದ ಕಚ್ಚಾ ಖಾದ್ಯ ತೈಲಗಳ ಮೇಲೆ ಕೃಷಿ ಮೂಲಸೌಕರ್ಯ ಸೆಸ್ ಶೇ.20ರಷ್ಟು ಇತ್ತು. ಕಡಿತದ ನಂತರ ಕಚ್ಚಾ ತಾಳೆ ಎಣ್ಣೆ ಬೆಲೆ ಮೇಲೆ ಶೇ.8.25, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲೆ ತಲಾ ಶೇ.5.5ರಷ್ಟಾಗಿದೆ. 

ಸಾಲು ಸಾಲು ಹಬ್ಬಕ್ಕೆ ಕೇಂದ್ರದಿಂದ ಬಂಪರ್ ಕೊಡುಗೆ; ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ!

ಖಾದ್ಯ ತೈಲಗಳ ಬೆಲೆ ನಿಯಂತ್ರಿಸಲು ಸರ್ಕಾರ, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಏಕರೂಪಗೊಳಿಸಿತು, ಭವಿಷ್ಯದಲ್ಲಿ ಎನ್ ಸಿಡಿಇಎಕ್ಸ್ ಮೂಲಕ ಸಾಸಿವೆ ಎಣ್ಣೆಯ ಮಾರಾಟ ರದ್ದುಗೊಳಿಸಲಾಯಿತು ಮತ್ತು ದಾಸ್ತಾನು ಸಂಗ್ರಹಕ್ಕೆ ಮಿತಿ ವಿಧಿಸಲಾಯಿತು. 

ಪ್ರಮುಖ ಖಾದ್ಯ ತೈಲ ಮಾರಾಟಗಾರರಾದ ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸಗಟು ಮಾರಾಟ ದರವನ್ನು ಪ್ರತಿ ಲೀಟರ್ ಗೆ 4 ರಿಂದ 7 ರೂ. ಕಡಿತಗೊಳಿಸಿವೆ. ಹಬ್ಬದ ಖುತುವಿನಲ್ಲಿ ಗ್ರಾಹಕರಿಗೆ ಪರಿಹಾರವನ್ನು ನೀಡುವ ಸಲುವಾಗಿ ಬೆಲೆಗಳನ್ನು ಇಳಿಕೆ ಮಾಡಲಾಗಿದೆ. 

ಹೈದರಾಬಾದ್ ನ ಜೆಮಿನಿ ಇಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್, ಗೋಕುಲ್ ರಿಫಾಯಿಲ್ಸ್ ಅಂಡ್ ಸಾಲ್ವೆಂಟ್, ವಿಜಯ್ ಸೋಲ್ ವೆಕ್ಸ್, ಗೋಕುಲ್ ಅಗ್ರೋ ರಿಸೋಸರ್ಸ್ ಮತ್ತು ಎನ್ .ಕೆ ಪ್ರೊಟೀನ್ಸ್ ಸೇರಿ ಇತರೆ ಹಲವು ಪ್ರಮುಖ ಮಾರಾಟಗಾರರು ಖಾದ್ಯ ತೈಲಗಳ ಸಗಟು ಮಾರಾಟ ದರವನ್ನು ಇಳಿಕೆ ಮಾಡಿವೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅಧಿಕವಾಗಿದ್ದರೂ ಸಹ, ರಾಜ್ಯ ಸರ್ಕಾರಗಳ ಜೊತೆಗೂಡಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಮಧ್ಯಪ್ರವೇಶ ಮತ್ತು ಸಕ್ರಿಯ ಕ್ರಮಗಳಿಂದಾಗಿ ಖ್ಯಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ. 

ಖಾದ್ಯ ತೈಲಗಳ ಬೆಲೆ ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಹೆಚ್ಚಳವಾಗಿತ್ತು, ಆದರೆ ಅಕ್ಟೋಬರ್ ನಂತರ ಅದರಲ್ಲಿ ಇಳಿಕೆ ಪ್ರವೃತ್ತಿ ಕಂಡುಬರುತ್ತಿದೆ. ಸರ್ಕಾರ ದ್ವಿತೀಯ ಹಂತದ ಖಾದ್ಯ ತೈಲಗಳು ವಿಶೇಷವಾಗಿ ಆಮದು ಅವಲಂಬನೆ ತಗ್ಗಿಸಲು ರೈಸ್ ಬ್ರಾನ್ ಆಯಿಲ್ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. 

click me!