Uttar Pradesh: ಮಹಿಳಾ ಮತದಾರರೇ ಟಾರ್ಗೆಟ್, ಪಕ್ಷ ಪುನಶ್ಚೇತನಕ್ಕೆ ಪ್ರಿಯಾಂಕ ಕಸರತ್ತು

Published : Nov 05, 2021, 09:06 PM ISTUpdated : Nov 05, 2021, 09:10 PM IST
Uttar Pradesh: ಮಹಿಳಾ ಮತದಾರರೇ ಟಾರ್ಗೆಟ್,  ಪಕ್ಷ ಪುನಶ್ಚೇತನಕ್ಕೆ ಪ್ರಿಯಾಂಕ ಕಸರತ್ತು

ಸಾರಾಂಶ

* ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತಾಲೀಮು * ಉತ್ತರ ಪ್ರದೇಶಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಿಯಾಂಕ ಗಾಂಧಿ ವಾದ್ರಾ ಇನ್ನಿಲ್ಲದ ಕಸರತ್ತು * ಮಹಿಳಾ ಕೇಂದ್ರಿತ ಭರವಸೆಗಳು ನೀಡಿದ ಪ್ರಿಯಾಂಕ ಗಾಂಧಿ ವಾದ್ರಾ 

ಲಕ್ನೋ, (ನ.05): ಉತ್ತರ ಪ್ರದೇಶದಲ್ಲಿ (Uttar Pradesh) ಮುಂದಿನ ವರ್ಷ ಅಂದ್ರೆ 2022ರಲ್ಲಿ ವಿಧಾನಸಭಾ ಚನಾವಣೆ (Assembly Election) ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ 9Congress) ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು, ಯೋಗಿ ಆಡಳಿತ ಬಿಜೆಪಿಯಲ್ಲಿ ಮಣಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ.

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾರೋಂದಿಗೂ ಮೈತ್ರಿ ಮಾಡಿಕೊಳ್ಳದೇ ಪ್ರಿಯಾಂಕಾ ಗಾಂಧಿಯವರ (Priyanka Gandhi Vadra) ನೇತೃತ್ವದಲ್ಲಿ ನಡೆಯಲಿದೆ ಎಂದು ಈಗಾಗಲೇ ಪಕ್ಷದ ನಾಯಕರು ಹೇಳಿದ್ದಾರೆ. ಅದರಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭರ್ಜರಿ ತಯಾರಿ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಶ್ಚೇತನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಇಂದಿರೆಯ ಮೊಮ್ಮಗಳ ಬಳಿ ಯುಪಿ ಗೆಲ್ಲುವ ಸೀಕ್ರೆಟ್!

ನಾನು ಮಹಿಳೆಯರಿಗಾಗಿ ಹೋರಾಡುತ್ತೇನೆ. ಕಾಂಗ್ರೆಸ್ ಪಕ್ಷವು ಅವರಿಗಾಗಿ ಹೋರಾಡುತ್ತದೆ ಎಂದು ನಾನು ಮಹಿಳೆಯರಿಗೆ ಹೇಳಲು ಬಯಸುತ್ತೇನೆ" ಅಂತ  ಪ್ರಿಯಾಂಕಾ ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೋರಖ್‌ಪುರ ಭದ್ರಕೋಟೆಯಲ್ಲಿ ಗುಡುಗಿದ್ದಾರೆ.

 ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದರ ವಿರುದ್ಧ ಮಹಿಳೆಯರು ಜಾಗೃತರಾಗಿದ್ದು, ಅವರಿಗೆ ಸಾಥ್ ನೀಡುವ ಭರವಸೆ ನೀಡಿದರು.

ಕೊರೋನಾ ನಿರ್ವಹಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ವಿಚಾರದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಿಫಲವಾಗಿದೆ. ಜೊತೆಗೆ ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರಗಳು ಕ್ಯಾರೇ ಎನ್ನುತ್ತಿಲ್ಲ. 

ಜನರು, ವಿಶೇಷವಾಗಿ ಮಹಿಳೆಯರು, ಕಾಂಗ್ರೆಸ್ ಅನ್ನು ಭರವಸೆಯಿಂದ ನೋಡಲಾರಂಭಿಸಿದ್ದಾರೆ, ಪಕ್ಷವು ಮಹಿಳೆಯರೊಂದಿಗೆ ನಿಲ್ಲುತ್ತದೆ ಮತ್ತು ಅವರ ಧ್ವನಿಯಾಗುತ್ತದೆ  ಎಂದು ರ್ಯಾಲಿಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಕರ್ತೆ ಸುನೀತಾ ಮಿಶ್ರಾ  ಭರವಸೆ ನಿಡಿದ್ದಾರೆ.

ಗೋರಖ್‌ಪುರನಲ್ಲಿ ನಡೆದ ಸಮಾವೇಶದಲ್ಲಿ ಹೆಚ್ಚಾಗಿ ಮಹಿಳೆಯರು ಭಾಗವಹಿಸಿದ್ದರು. ಆ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು   ಮಾತನಾಡಿರುವ ಪ್ರಿಯಾಂಕ, ನಾನು ಮಹಿಳೆ, ನಾನು ಹೋರಾಡಬಲ್ಲೇ  ಎಂದು ಘೋಷಿಸಿದ್ದಾರೆ. ಇದು ಮಹಿಳಾ ಮತದಾರರನ್ನು ಸೆಳೆಯಲು  ಪ್ರಮುಖ  ಅಂಶವಾಗುವ ಸಾಧ್ಯತೆಗಳಿವೆ.

ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಲ್ಲಿ ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ.40 ರಷ್ಟು ಟಿಕೆಟ್ ಮತ್ತು ಉದ್ಯೋಗಗಳಲ್ಲಿ ಅದೇ ಕೋಟಾವನ್ನು ಭರವಸೆ ನೀಡಿದ್ದಾರೆ.  ಅಲ್ಲದೇ ಮಹಿಳೆಯರಿಗೆ ವಾರ್ಷಿಕವಾಗಿ ಮೂರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳು, ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮತ್ತು ವಿದ್ಯಾರ್ಥಿನಿಯರಿಗೆ ಸ್ಕೂಟಿ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (UP polls) ಮುನ್ನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ  ಮಹಿಳಾ ಕೇಂದ್ರಿತ ಮಾತುಗಳ, ಘೋಷಣೆಗಳು ಸಂಚಲನ ಮೂಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್