ಮಹಿಳಾ ಅಧಿಕಾರಿಗೆ ಬೆಂಬಲ ನೀಡಿದ ಹಲವರು, ಆಕೆಯನ್ನು ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆನ್‌ಗೆ ಹೋಲಿಸಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ತನ್ನ 3 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದರು. ಆದರೆ, ಕೇರಳದ ಮಹಿಳಾ ಐಎಎಸ್ ಅಧಿಕಾರಿಯ ವರ್ತನೆ ತಪ್ಪು ಎಂಬುದು ಇನ್ನು ಉಳಿದವರ ವಾದವಾಗಿದೆ.
ಜನಸೇವೆ ಮಾಡುವವರು ಅಥವಾ ಸೆಲೆಬ್ರಿಟಿಗಳ (Celebrity) ಒಂದು ಸಣ್ಣ ಪುಟ್ಟ ನಡೆಗಳನ್ನೂ ಜನರು ಗಮನಿಸುತ್ತಿರುತ್ತಾರೆ. 2018ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ (United Nations General Assembly) ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆನ್ (New Zealand Prime Minister Jacinda Ardern) 3 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆಗೆ ಗ್ರಾಸವಾಗಿತ್ತು. ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದರು. ಈಗ, ಇದೇ ರೀತಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು (Lady IAS Officer) ಚರ್ಚೆಗೆ ಗ್ರಾಸವಾಗಿದ್ದು, ವಿವಾದಕ್ಕೂ ಆಹಾರವಾಗಿದ್ದಾರೆ. ಅಷ್ಟಕ್ಕೂ ಅವರು ಮಾಡಿದ ತಪ್ಪೇನು ಅಂತೀರಾ.. ಸಾರ್ವಜನಿಕವಾಗಿ ಭಾಷಣ ಮಾಡುವಾಗ (Speech) ಅವರ ಮಗನನ್ನು ಹೊತ್ತುಕೊಂಡಿರುವುದು. ಈ ಕಾರಣಕ್ಕೆ ಮಹಿಳಾ ಅಧಿಕಾರಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇರಳದ ಪತನಂಥಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ (Divya S Iyer) ತನ್ನ 3 ವರ್ಷದ ಮಗುವನ್ನು ಹೊತ್ತುಕೊಂಡು ಭಾಷಣ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಸಗಿ ಫಿಲಂ ಫೆಸ್ಟಿವಲ್‌ನ ಸಮಾರೋಪ ಸಮಾರಂಭಕ್ಕೆ ಕೇರಳದ ಪತನಂಥಿಟ್ಟ ಡಿಸಿ ತನ್ನ 3 ವರ್ಷದ ಮಗುವನ್ನು ಕರೆದುಕೊಂಡು ಹೋಗಿರುವ ಫೋಟೋ, ವಿಡಿಯೋಗಳು ಸಾಮಾಝಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಸಾಕಷ್ಟು ಪರ - ವಿರೋಧ ಹೇಳಿಕೆಗಳು ಸಹ ಕಂಡುಬರುತ್ತಿದೆ. ದಿವ್ಯಾ ಅಯ್ಯರ್ ತನ್ನ ಮಗುವನ್ನು ಹೊತ್ತುಕೊಂಡು ಭಾಷಣ ಮಾಡಿರುವ ವಿಡಿಯೋವನ್ನು ಕೇರಳ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಹಂಚಿಕೊಂಡ ಬಳಿಕ ವಿವಾದ ಶುರುವಾಯಿತು. ಅಡೂರ್‌ನಲ್ಲಿ ನಡೆದ 6ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಆಯೋಜಕರಲ್ಲಿ ಒಬ್ಬರಾಗಿದ್ದರು ಡೆಪ್ಯುಟಿ ಸ್ಪೀಕರ್ ಚಿತ್ತಯಂ ಗೋಪಕುಮಾರ್, ಮಹಿಳಾ ಐಎಎಸ್ ಅಧಿಕಾರಿಯ ವಿಡಿಯೋ ಹಂಚಿಕೊಂಡಿದ್ದರು. ಆದರೆ, ಈ ರೀತಿ ನಡವಳಿಕೆ ತೊರುವುದು ಉನ್ನತ ದರ್ಜೆಯ ಅಧಿಕಾರಿಯ ಕೆಲಸದ ನೈತಿಕತೆಗೆ ವಿರೋಧವಾದುದು ಎಂದು ಕೆಲ ಜನರು ತಗಾದೆ ತೆಗೆದಿದ್ದಾರೆ.
undefined
ಇದನ್ನು ಓದಿ: ಕೇವಲ 3% ಕನ್ನಡಿಗರಿಗಷ್ಟೇ ಐಎಎಸ್, ಐಪಿಎಸ್ ಹುದ್ದೆ..!
ಆ ಕಾರ್ಯಕ್ರಮದ ವಿಡಿಯೋವನ್ನು ನಂತರ ಡಿಲೀಟ್ ಮಾಡಲಾಯಿತಾದರೂ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಮಾತ್ರ ಇನ್ನೂ ನಿಂತಿಲ್ಲ. ಅಂತರ್ಜಾಲದಲ್ಲಿ ಹಲವರು ದಿವ್ಯಾ ಅಯ್ಯರ್ ಅವರನ್ನು ಬೆಂಬಲಿಸಿದರೆ, ಇನ್ನು ಹಲವರು ಆಕೆಯ ನಡೆಯನ್ನು ವಿರೋಧಿಸಿದ್ದಾರೆ. ಭಾಷಣ ಮಾಡುವ ವೇಳೆ ಮಗುವನ್ನು ಹೊತ್ತುಕೊಳ್ಳುವುದು ಕಾರ್ಯ ಚಟುವಟಿಕೆಯ ನೈತಿಕತೆಯಲ್ಲ ಎಂದೂ ಹಲವರು ವಾದ ಮಾಡಿದ್ದಾರೆ.
ಮಹಿಳಾ ಅಧಿಕಾರಿಗೆ ಬೆಂಬಲ ನೀಡಿದ ಹಲವರು, ಆಕೆಯನ್ನು ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸಿಂದಾ ಅರ್ಡೆನ್‌ಗೆ ಹೋಲಿಸಿದ್ದಾರೆ. ನ್ಯೂಜಿಲೆಂಡ್ ಪ್ರಧಾನಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ತನ್ನ 3 ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದರು. ಆದರೆ, ಕೇರಳದ ಮಹಿಳಾ ಐಎಎಸ್ ಅಧಿಕಾರಿಯ ವರ್ತನೆ ತಪ್ಪು ಎಂಬುದು ಇನ್ನು ಉಳಿದವರ ವಾದವಾಗಿದೆ.
ಇದನ್ನೂ ಓದಿ: ಕೊಡಗು ಜಿಪಂ ಸಿಇಒ ಪತ್ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ
ಐಎಎಸ್ ಅಧಿಕಾರಿಯ ಪತಿಯಿಂದ ಸಮರ್ಥನೆ
ಇನ್ನು, ಕೇರಳದ ಪಥನಂಥಿಟ್ಟ ಜಿಲ್ಲಾಧಿಕಾರಿ ದಿವ್ಯಾ ಅಯ್ಯರ್ ಅವರ ಪತಿ ಹಾಗೂ ಯುವ ಕಾಂಗ್ರೆಸ್‌ನ ಕೇರಳ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ತನ್ನ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ರಜಾ ದಿನದಂದು ನಮ್ಮ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಹಾಗೂ, ಅದು ಸಾರ್ವಜನಿಕ ಸಭೆಯಲ್ಲ, ಅನಧಿಕೃತ ಸಮಾರಂಭ ಎಂದೂ ಕೆ.ಎಸ್. ಶಬರಿನಂದನ್ ಹೇಳಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಮಹಿಳಾ ಅಧಿಕಾರಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾವೇರಿದ್ದರೂ, ಜಿಲ್ಲಾದಿಕಾರಿ ದಿವ್ಯಾ ಎಸ್. ಅಯ್ಯರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂಗ್ಲೀಷ್ ಜ್ಞಾನದ ಬಗ್ಗೆ ಟೀಕೆಗೊಳಗಾಗುತ್ತಿದ್ದ ಯುವತಿ ಈಗ ಐಎಎಸ್ ಅಧಿಕಾರಿ..!