ಕೇರಳ ರಣ ಮಳೆಗೆ 18 ಸಾವು, ಸಿಎಂ ಪಿಣರಾಯಿ ಜೊತೆ ಮೋದಿ ಮಾತುಕತೆ, ನೆರವಿನ ಭರವಸೆ!

By Suvarna NewsFirst Published Oct 17, 2021, 6:09 PM IST
Highlights
  • ಕೇರಳದಲ್ಲಿ ಸುರಿಯುತ್ತಿದೆ ನಿರಂತರ ಮಹಾ ಮಳೆ
  • ಬೆಟ್ಟ ಕುಸಿತ, ಪ್ರವಾಹಕ್ಕೆ ಕೊಚ್ಚಿ 18 ಮಂದಿ ಸಾವು
  • ಸಿಎಂ ಪಿಣರಾಯಿ ಜೊತೆ ತುರ್ತು ಮಾತುಕತೆ ನಡೆಸಿದ ಮೋದಿ
  • ಕೇರಳಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಮೋದಿ

ನವದೆಹಲಿ(ಅ.17):  ವಾಯುಭಾರ ಕುಸಿತದ ಪರಿಣಾಮ ಕೇರಳ(Kerala) ರಾಜ್ಯ ಅಕ್ಷರಶಃ ನಲುಗಿದೆ. ಕಳೆದೆರಡು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಗೆ(Rain) ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತ ಬೆಟ್ಟ ಕುಸಿದು(Landslide) ನೆಲಸಮವಾಗಿದೆ. ಪರಿಣಾಮ 18 ಮಂದಿ ಸಾವನ್ನಪ್ಪಿದ್ದು(death), ಹಲವರು ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ(Narendra Modi), ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಜೊತೆ ತುರ್ತು ಮಾತುಕತೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ!

ಕೇರಳದ ಮಹಾ ಮಳೆ ಹಾಗೂ ಸದ್ಯದ ಪರಿಸ್ಥಿತಿ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದೇನೆ. ಮಳೆ ಹಾಗೂ ಭೂಕುಸಿತದಿಂದ ಹಲವು ಪ್ರಾಣ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಿದ್ದಾರೆ.  ಈ ಸಂಕಷ್ಟದ ಸಂದರ್ಭದಲ್ಲಿ ದೇವರಲ್ಲಿ ಕೇರಳದ ಎಲ್ಲಾ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

 

It is saddening that some people have lost their lives due to heavy rains and landslides in Kerala. Condolences to the bereaved families.

— Narendra Modi (@narendramodi)

ಕೇರಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದ ಪ್ರಧಾನಿ ಮೋದಿ, ಎಲ್ಲಾ ನೆರವು ನೀಡುವುದಾಗಿ ಹೇಳಿದ್ದಾರೆ. ತುರ್ತು ನೆರವು, ರಕ್ಷಣಾ ತಂಡ ಸೇರಿದಂತೆ ಕೇರಳದ ಜೊತೆ ಕೇಂದ್ರ ಸರ್ಕಾರ ನಿಲ್ಲಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಮೋದಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೂರವಾಣಿ ಮೂಲಕ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದರು.

 

Spoke to Kerala CM Shri and discussed the situation in the wake of heavy rains and landslides in Kerala. Authorities are working on the ground to assist the injured and affected. I pray for everyone’s safety and well-being.

— Narendra Modi (@narendramodi)

ಅದಾನಿ ಗ್ರೂಪ್‌ಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಸ್ತಾಂತರ!

ಕೇರಳ ಮಹಾ ಮಳೆ ಹಾಗೂ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿರುವುದು ಬೇಸರದ ವಿಚಾರ. ದುಃಖಿತ ಕುಟುಂಬಕ್ಕೆ ಸಂತಾಪ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕೇರಳದ ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ, ಪಣ್ಣಂತಿಟ್ಟ, ತ್ರಿಶೂರ್ ಸೇರಿದಂತೆ ದಕ್ಷಿಣ ಹಾಗೂ ಮಧ್ಯ ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಶುಕ್ರವಾರ(ಅ.15)ರಿಂದ ಸತತ ಮಳೆಯಾಗುತ್ತಿದೆ. ಪರಿಣಾಮ ಬೆಟ್ಟಗಳು ಕುಸಿದಿದೆ. ನದಿ ನೀರು ಉಕ್ಕಿ ಹರಿದಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವು ಮನೆಗಳು ಕುಸಿದು ಬಿದ್ದಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಹಲವರ ಬದುಕು ಕೊಚ್ಚಿ ಹೋಗಿದೆ.

ತಂದೆ ನಿಧನದ ಬಳಿಕ ಪೊಲೀಸ್ ಕ್ಲರ್ಕ್ ಉದ್ಯೋಗ ಪಡೆದ ಯುವತಿಗೆ UPSCನಲ್ಲಿ 150ನೇ ರ‍್ಯಾಂಕ್!

2018 ಹಾಗೂ 2019ರಲ್ಲಿ ಸತತ 2 ವರ್ಷ ಭೀಕರ ಪ್ರವಾಹ ಕೇರಳ ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಿತು. ಅಪಾರ ನಷ್ಟದಿಂದ ಚೇತರಿಸಿಕೊಳ್ಳು ಬೆನ್ನಲ್ಲೇ ಕೊರೋನಾ ಆರ್ಭಟಕ್ಕೆ ಕೇರಳ ತುತ್ತಾಯಿತು. ಆದರೆ 2020ರಲ್ಲಿ ಮಳೆರಾಯನ ಆರ್ಭಟ ಇರಲಿಲ್ಲ. ಹೀಗಾಗಿ ಈ ಬಾರಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕೇರಳಕ್ಕೆ ವರುಣ ಮತ್ತೆ ಶಾಕ್ ನೀಡಿದ್ದಾನೆ.

click me!