ಕೇರಳದಲ್ಲಿ ಲಾಕ್‌ಡೌನ್ ಮುಂದೂಡಿಕೆ: ನಿಯಮ ಸಡಿಲಿಕೆ ಸಾಧ್ಯತೆ

By Suvarna News  |  First Published May 29, 2021, 1:56 PM IST
  • ಕರ್ನಾಟಕ ಲಾಕ್‌ಡೌನ್ ಮುಂದೂಡಿದ ಬೆನ್ನಲ್ಲೇ ಕೇರಳದಲ್ಲೂ ಲಾಕ್‌ಡೌನ್ ಮುಂದೂಡಿಕೆ
  • ಈ ಬಾರಿ ನಿಯಮಗಳಲ್ಲಿ ಸಡಿಲತೆ ಇರುವ ಸಾಧ್ಯತೆ

ತಿರುವನಂತಪುರಂ(ಮೇ.29): ಕರ್ನಾಟಕದಲ್ಲಿ ಲಾಕ್‌ಡೌನ್ ಜೂ.7ರ ತನಕ ಮುಂದೂಡಿದ ಬೆನ್ನಲ್ಲೇ ಇದೀಗ ನೆರೆ ರಾಜ್ಯ ಕೇರಳದಲ್ಲಿಯೂ ಲಾಕ್‌ಡೌನ್ ಮುಂದೂಡಲಾಗಿದೆ. ಜೂ. 9ರ ತನಕ ಲಾಕ್‌ಡೌನ್ ಮುಂದೂಡಲ್ಪಟ್ಟಿದೆ. ಆದರೆ ಈ ಬಾರಿ ಲಾಕ್‌ಡೌನ್ ನಿಯಮಗಳಲ್ಲಿ ಕೊಂಚ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಈ ಹಿಂದೆ ಲಾಕ್‌ಡೌನ್ ಮೇ 30ರ ತನಕ ಕೇರಳದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಶನಿವಾರ ಲಾಕ್‌ಡೌನ್ ಪರಿಶೀಲನಾ ಸಭೆಯ ನಂತರ ನಿಯಮಗಳಲ್ಲಿ ಸಡಿಲಿಕೆ ತರುವ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ.

Latest Videos

undefined

ದೆಹಲಿ ಬಳಿಕ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆ; ದೇಶದ ಬಹುತೇಕ ರಾಜ್ಯ ಲಾಕ್!

ಈ ಹಿಂದೆ ತಮಿಳುನಾಡಲ್ಲಿ ಮೇ 31ರ ತನಕ ಲಾಕ್‌ಡೌನ್ ವಿಸ್ತರಿಸಲಾಗಿತ್ತು. ಮೊದಲ ಲಾಕ್‌ಡೌನ್ ಜನರು ನಿರ್ಲಕ್ಷ್ಯಿಸಿದ ಪರಿಣಾಮ ಈ ಬಾರಿ ದಿನಸಿ ಅಂಗಡಿ, ತರಕಾರಿ ಅಂಗಡಿಗೂ ಅನುಮತಿ ನೀಡಲಾಗಿಲ್ಲ.

"

ದೆಹಲಿ ಮತ್ತು ಪುದುಚೇರಿಯಲ್ಲೂ ನಿಯೋಜಿಸಲಾಗಿದ್ದ ಲಾಕ್‌ಡೌನ್ ಮತ್ತೆ ವಿಸ್ತರಿಸಲಾಗಿದೆ. ಕರ್ನಾಟಕ ಕೇರಳದ ಸೇರಿ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಫಲ ನೀಡಲಿದೆ.

ಈಗಾಗಲೇ ಕೇಂದ್ರ ಸರ್ಕಾರವೂ ಕೊರೋನಾ ಗೈಡ್‌ಲೈನ್ಸ್‌ಗಳನ್ನು ಜೂನ್ 30ರ ಎಲ್ಲ ರಾಜ್ಯಗಳೂ ಅನುಸರಿಸಬೇಕು ಎಂದು ಸೂಚನೆ ನೀಡಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳಲ್ಲಿ ಸ್ವಲ್ಪಮಟ್ಟಿನ ಇಳಿಕೆಯನ್ನು ಕಾಣಬಹುದು.

click me!