ಜೂನ್‌ 2ನೇ ವಾರದಿಂದ ಸ್ಪುಟ್ನಿಕ್‌ ಲಸಿಕೆ ಲಭ್ಯ: ಪ್ರತೀ ಡೋಸ್‌ಗೆ 1,195 ರೂ.!

By Suvarna NewsFirst Published May 29, 2021, 1:03 PM IST
Highlights

* ರಷ್ಯಾದ ಸ್ಪುಟ್ನಿಕ್‌-5 ಲಸಿಕೆಯು ಜೂನ್‌ 2ನೇ ವಾರದಿಂದಲೇ ದೇಶದ ಅಪೋಲೋ ಸಮೂಹದ ಆಸ್ಪತ್ರೆಗಳಲ್ಲಿ ಲಭ್ಯ

* ಜೂನ್‌ 2ನೇ ವಾರದಿಂದ ಸ್ಪುಟ್ನಿಕ್‌ ಲಸಿಕೆ ಲಭ್ಯ: ಪ್ರತೀ ಡೋಸ್‌ಗೆ 1,195 ರೂ.

* ಸ್ಪುಟ್ನಿಕ್‌ ಲಸಿಕೆಯ ಪ್ರತೀ ಡೋಸ್‌ಗೆ 995 ರು. ಮತ್ತು ಲಸಿಕೆ ಹಾಕಲು 200 ರು. ಸೇರಿದಂತೆ ಒಟ್ಟಾರೆ 1,195 ರು. 

ನವದೆಹಲಿ(ಮೇ.29): ರಷ್ಯಾದ ಸ್ಪುಟ್ನಿಕ್‌-5 ಲಸಿಕೆಯು ಜೂನ್‌ 2ನೇ ವಾರದಿಂದಲೇ ದೇಶದ ಅಪೋಲೋ ಸಮೂಹದ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಈ ಲಸಿಕೆಯ ಪ್ರತೀ ಡೋಸ್‌ಗೆ 1,195 ರು. ದರವಾಗಬಹುದು ಎಂದು ಅಪೋಲೋ ಆಸ್ಪತ್ರೆಗಳ ಸಮೂಹ ಗುರುವಾರ ಘೋಷಣೆ ಮಾಡಿದೆ.

ಈ ಬಗ್ಗೆ ಮಾತನಾಡಿದ ಅಪೋಲೋ ಸಮೂಹದ ಉಪಾಧ್ಯಕ್ಷ ಶೋಬನಾ ಕಾಮಿನೇನಿ ಅವರು, ಸ್ಪುಟ್ನಿಕ್‌ ಲಸಿಕೆಯ ಪ್ರತೀ ಡೋಸ್‌ಗೆ 995 ರು. ಮತ್ತು ಲಸಿಕೆ ಹಾಕಲು 200 ರು. ಸೇರಿದಂತೆ ಒಟ್ಟಾರೆ 1,195 ರು. ಆಗಲಿದೆ. ಪ್ರತೀ ವಾರವೂ 10 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗುತ್ತದೆ. ಜುಲೈನಲ್ಲಿ ಲಸಿಕೆ ವಿತರಣೆ ಪ್ರಮಾಣವನ್ನು ದ್ವಿಗುಣಗೊಳಿಸಲಾಗುತ್ತದೆ.

ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್ 4 ಕೋಟಿ ಡೋಸ್ ನಾಪತ್ತೆ ರಹಸ್ಯ ಏನು?

ಇದೇ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ 2 ಕೋಟಿ ಜನಕ್ಕೆ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ದೆಹಲಿಗೆ ಶೀಘ್ರವೇ ಸ್ಪುಟ್ನಿಕ್‌-5 ಲಸಿಕೆ:ಸಿಎಂ ಕೇಜ್ರಿವಾಲ್‌

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್‌ ಲಸಿಕೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ರಷ್ಯಾದ ಸ್ಪುಟ್ನಿಕ್‌-5 ಲಸಿಕೆ ಕಂಪನಿ ನಗರಕ್ಕೆ ಲಸಿಕೆ ಪೂರೈಸಲಿದೆ. ಆದರೆ ಎಷ್ಟುಪ್ರಮಾಣದ ಲಸಿಕೆ ಎಂದು ಇನ್ನೂ ನಿರ್ಧಾರವಾಗಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ತಿಳಿಸಿದ್ದಾರೆ

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

. ಇದೇ ವೇಳೆ ರಾಜ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಲಸಿಕೆ ಸಂಗ್ರಹ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಈವರೆಗೂ ಯಾವುದೇ ರಾಜ್ಯಗಳಿಗೂ ಕೊಂಡುಕೊಳ್ಳಲು ಆಗಿಲ್ಲ. ಕೋವಿಡ್‌ ನಿರ್ವಹಣೆ ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿ. ಆದರೆ ಕೇಂದ್ರ ತನ್ನ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹಾಕುತ್ತಿರುವುದು ತಪ್ಪು. ಹಾಗಾಗಿ ಕೇಂದ್ರ ಸರ್ಕಾರ ಲಸಿಕೆಯ ತುರ್ತು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!