ವಿವಾಹಿತ ಮುಸ್ಲಿಂ ವ್ಯಕ್ತಿ ಜೊತೆ ಪ್ರೀತಿ: ಮಗಳ ಗೃಹ ಬಂಧನದಲ್ಲಿಟ್ಟ ಕೇರಳ ಸಿಪಿಎಂ ನಾಯಕ

Published : Oct 30, 2025, 03:17 PM IST
Kerala CPIM leader PV Bhaskaran daughter

ಸಾರಾಂಶ

Sangeetha Kerala viral video: ಕೇರಳ ಫೈಲ್ಸ್ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ ಕೇರಳ ಸಿಪಿಐಎಂ ನಾಯಕ ಭಾಸ್ಕರನ್ ಅವರ ಪುತ್ರಿಯೇ ಈಗ ತನ್ನ ತಂದೆ ಮುಸ್ಲಿಂ ಯುವಕನ ಜೊತೆಗಿನ ತನ್ನ ಪ್ರೇಮವನ್ನು ವಿರೋಧಿಸಿ ತನ್ನನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ಯುವಕನ ಜೊತೆ ಮಗಳ ಪ್ರೀತಿಗೆ ಸಿಪಿಎಂ ನಾಯಕನ ವಿರೋಧ

ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿರುವುದಕ್ಕಾಗಿ ತನ್ನನ್ನು ತನ್ನ ಪೋಷಕರು ಗೃಹಬಂಧನದಲ್ಲಿಟ್ಟಿದ್ದಾರೆ ಎಂದು ಕೇರಳದ ಯುವತಿಯೊಬ್ಬರು ಆರೋಪಿಸಿದ್ದಾಳೆ. ಆದರೆ ಆಕೆಯ ತಂದೆ ಸಿಪಿಐಎಂ ನಾಯಕನೂ ಆಗಿರುವ ಪಿವಿ ಭಾಸ್ಕರನ್ ಅವರು ಈ ಆರೋಪವನ್ನು ನಿರಾಕರಿಸಿದ್ದು, ತನ್ನ ಪುತ್ರಿ ಪ್ರೀತಿಸುವ ಹುಡುಗ ಓರ್ವ ವಿವಾಹಿತ ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇದೇ ಕಾರಣಕ್ಕೆ ಈ ಸಂಬಂಧವನ್ನು ವಿರೋಧಿಸುತ್ತಿರುವುದಾಗಿ ಹೇಳಿದ್ದಾರೆ.

ಸಿಪಿಎಂ ನಾಯಕ ಪಿವಿ ಭಾಸ್ಕರನ್ ಪುತ್ರಿಯಿಂದ ಗಂಭೀರ ಅರೋಪ

ಕೇರಳದ ಕಾಸರಗೋಡಿನ ಉಡುಮಾದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಮಹಿಳೆ ಸಂಗೀತಾ ಎಂಬಾಕೆ ತನ್ನನ್ನು ಕುಟುಂಬದವರೇ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ದೂರಿದ್ದಾರೆ. ಕಳೆದ ವರ್ಷ ಸಂಭವಿಸಿದ ಭೀಕರ ಅಪಘಾತದ ನಂತರ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾದ ಸಂಗೀತಾ ಈಗ ತನ್ನ ಕುಟುಂಬದವರು ತನ್ನ ಮೇಲೆ ತನ್ನ ಪ್ರೇಮದ ವಿಚಾರವಾಗಿ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಶೀದ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಕ್ಕೆ ತಾನು ಬಯಸಿದ್ದು ಇದೇ ಕಾರಣಕ್ಕೆ ಕುಟುಂಬದವರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಪಿವಿ ಭಾಸ್ಕರನ್

ಸಂಗೀತಾ ತನ್ನ ಕುಟುಂಬದವರ ಮೇಲೆಯೇ ಮಾಡಿರುವ ಈ ಆರೋಪದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಕ್ಟೋಬರ್ 21ರಿಂದ ವೈರಲ್ ಆಗ್ತಿದೆ. ಆಕೆ ಈ ವಿಚಾರದಲ್ಲಿ ತನಗೆ ಸ್ವಾತಂತ್ರ ಹಾಗೂ ನ್ಯಾಯ ನೀಡಬೇಕು ಎಂದು ಆಗ್ರಹಿಸಿದ್ದು, ಪ್ರತಿಪಕ್ಷದ ನಾಯಕರು ಹಾಗೂ ಮಾಧ್ಯಮಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಹಾಗೂ ಸತ್ಯಬಯಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಎಸ್‌ಪಿಗೆ ಸಂಗೀತಾ ದೂರು ನೀಡಿದ್ದು, ತಮ್ಮ ದೂರಿನಲ್ಲಿ ತಮ್ಮ ತಂದೆ ಬಹಳ ಪ್ರಭಾವಿಯಾಗಿದ್ದು, ಧಾರ್ಮಿಕ ಕಾರಣಕ್ಕೆ ತನ್ನ ತಂದೆ ನನ್ನ ಸ್ವಾತಂತ್ರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಸಂಗೀತಾ ತಂದೆ 73 ವರ್ಷದ ಭಾಸ್ಕರನ್ ಅವರು ಸಪಿಐಎಂ ನಾಯಕನಾಗಿದ್ದು, ಸಿಪಿಐಎಂನ ಶಾಖಾ ಸಮಿತಿ ಸದಸ್ಯರಾಗಿದ್ದಾರೆ.

ರಶೀದ್‌ಗೆ ಈಗಾಗಲೇ ಮದ್ವೆಯಾಗಿದೆ, ಹೆಂಡತಿ ಮಕ್ಕಳಿದ್ದಾರೆ

ಆದರೆ ಮಗಳು ಸಂಗೀತಾ ಆರೋಪವನ್ನು ಭಾಸ್ಕರನ್ ನಿರಾಕರಿಸಿದ್ದಾರೆ. ಈ ಸಂಬಂದ ತಮ್ಮ ಮಗಳು ಹಾಗೂ ಪುತ್ರ ಹಾಗೂ ಸಂಗೀತಾಳ ಪುತ್ರನ ಜೊತೆ ಸುದ್ದಿಗೋಷ್ಠಿ ನಡೆಸಿದ

ಭಾಸ್ಕರನ್ ಎಲ್ಲಾ ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಅವರು ರಶೀದ್ ವಿರುದ್ಧ ಪೊಲೀಸ್ ದೂರು ನೀಡಿದ್ದು, ಸಂಗೀತಾಗೆ ಕಳೆದ ವರ್ಷ ಭೀಕರ ಅಪಘಾತಕ್ಕೆ ತುತ್ತಾದ ನಂತರ ಆಕೆಗೆ ವೈದ್ಯಕೀಯ ಆರೈಕೆಯ ನಂತರ ರಶೀದ್ ಆಕೆಗೆ ಆಯುರ್ವೇದಿಕ್ ಔಷಧಿ ನೀಡುತ್ತಿದ್ದರು. ಭಾಸ್ಕರನ್ ಪ್ರಕಾರ, ರಶೀದ್ ಅವರ ಒಳಗೊಳ್ಳುವಿಕೆ ವೃತ್ತಿಪರವಾಗಿತ್ತು ಹಾಗೂ ಇದನ್ನು ಸಂಬಂಧಿಕರ ಶಿಫಾರಸಿನ ಮೇರೆಗೆ ಪ್ರಾರಂಭಿಸಲಾಯಿತು ಇದು ಪ್ರಣಯ ಸಂಬಂಧವಲ್ಲ. ರಶೀದ್‌ಗೆ ಈಗಾಗಲೇ ಮದುವೆಯಾಗಿದೆ ಮತ್ತು ಇಬ್ಬರು ಮಕ್ಕಳಿದ್ದಾರೆ ಮತ್ತು ರಶೀದ್ ಅವರ ಪತ್ನಿ ರಶೀದ್ ವಿರುದ್ಧ ನಿರ್ಲಕ್ಷ್ಯಕ್ಕಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಭಾಸ್ಕರನ್ ಹೇಳಿದ್ದಾರೆ.

ಅಪಘಾತಕ್ಕೀಡದ ಸಂಗೀತಾಳ ಉಳಿಸಿಕೊಳ್ಳಲು ಲಕ್ಷಾಂತರ ರೂ ವೆಚ್ಚ ಮಾಡಿರುವ ಕುಟುಂಬ

ಅಪಘಾತದ ನಂತರ ಸಂಗೀತಾಳನ್ನು ಉಳಿಸಿಕೊಳ್ಳುವುದಕ್ಕೆ ಕುಟುಂಬವೂ ಲಕ್ಷಾಂತರ ರೂ ವೆಚ್ಚ ಮಾಡಿರುವುದರಿಂದ ಆರ್ಥಿಕ ಸಂಕಷ್ಟದ ಜೊತೆಗೆ ಮಾನಸಿಕ ಒತ್ತಡದಲ್ಲಿ ಅವರ ಕುಟುಂಬ ಇದೆ. ಸಂಗೀತಾಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುವುದಕ್ಕೆ ಇದುವರೆಗೆ ಸುಮಾರು 52 ಲಕ್ಷ ರೂ. ವೆಚ್ಚವಾಗಿದೆ. ಮತ್ತು ಅವಳ ಭವಿಷ್ಯವನ್ನು ಸುತ್ತುವರೆದಿರುವ ಸಂಕೀರ್ಣ ಭಾವನಾತ್ಮಕ ಸಮಸ್ಯೆಗಳಿಂದ ಕುಟುಂಬ ಚಿಂತಿತವಾಗಿದೆ. ತನ್ನ ಮಗಳ ಹೇಳಿಕೆಗಳ ಹೊರತಾಗಿಯೂ, ಭಾಸ್ಕರನ್ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ತಾನು ಯಾವುದೇ ಕೋಮು ಪಕ್ಷಪಾತವನ್ನು ಹೊಂದಿಲ್ಲ. ಈ ರೀತಿಯ ಹಣೆಪಟ್ಟಿ ಕಟ್ಟುತ್ತಿರುವುದರಿಂದ ನನಗೆ ನೋವಾಗಿದೆ. ಸಂಗೀತಾಳ ಫೋನ್ ಅನ್ನು ಕುಟುಂಬದವರು ವಶಕ್ಕೆ ಪಡೆದಿದ್ದರೂ, ರಶೀದ್ ರಹಸ್ಯವಾಗಿ ಅವಳಿಗೆ ರವಾನಿಸಿದ್ದಾನೆಂದು ಶಂಕಿಸಲಾಗಿರುವ ಮೊಬೈಲ್ ಮೂಲಕ ಅವಳು ತನ್ನ ವೀಡಿಯೊವನ್ನು ಚಿತ್ರೀಕರಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಭಾಸ್ಕರನ್ ಹೇಳಿದ್ದಾರೆ.

ಮಗಳ ಆರೋಪದಿಂದ ನೋವಾಗಿದೆ: ಪಿವಿ ಭಾಸ್ಕರನ್

ನಾನೊಬ್ಬ ಕಮ್ಯುನಿಷ್ಟ್ ನಾಯಕ 18ರ ಹರೆಯದಿಂದಲೂ ನಾನು ಪಕ್ಷದ ಸದಸ್ಯನಾಗಿದ್ದೇನೆ. ನಾನು ಯಾವುದೇ ಜಾತಿ ಧರ್ಮವನ್ನು ನೋಡುವುದಿಲ್ಲ, ಆದರೆ ನನ್ನ ಸ್ವಂತ ಮಗಳೇ ಮಾಡಿರುವ ಈ ಕೋಮವಾದದ ಆರೋಪದಿಂದ ನನಗೆ ಬಹಳ ನೋವಾಗಿದೆ ಎಂದು ಭಾಸ್ಕರನ್ ಹೇಳಿದ್ದಾರೆ. ಸಂಗೀತಾ ಓರ್ವ ಮಗನನ್ನು ಹೊಂದಿರುವ ವಿಚ್ಚೇದಿತ ಮಹಿಳೆಯಾಗಿದ್ದು, ತನಗೆ ರಶೀದ್ ಜೊತೆ ಮುಕ್ತವಾಗಿ ಬದುಕುವ ಹಕ್ಕಿಗಾಗಿ ಒತ್ತಾಯಿಸಿದ್ದಾಳೆ. ತನ್ನ ಕುಟುಂಬವು ವಿಮಾ ಹಣವನ್ನು ಪಡೆಯಲು ತನ್ನನ್ನು ಕೋಮಾಕ್ಕೆ ತಳ್ಳಲು ಸಂಚು ರೂಪಿಸುತ್ತಿದೆ ಎಂದು ದೂರಿರುವ ಆಕೆ ತಮ್ಮ ವಿಚ್ಛೇದನ ಪರಿಹಾರ ಮತ್ತು ಚಿನ್ನವನ್ನು ಅವರು ಕದ್ದಿದ್ದಾರೆ ಎಂದು ದೂರಿದ್ದಾರೆ.

ಕೇರಳ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್ ಸಲ್ಲಿಸಿದ್ದ ಸಂಗೀತಾ ಸ್ನೇಹಿತ ಅರ್ಜುನ್‌

ಸಂಗೀತಾಳ ಸ್ನೇಹಿತ ಅರ್ಜುನ್ ಎಂಬಾತ ಆಕೆಯ ಬಿಡುಗಡೆಗೆ ಒತ್ತಾಯಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ನಂತರ ಪ್ರಕರಣ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದೆ. ಆದರೆ ಅರ್ಜುನ್‌ನ ಉದ್ದೇಶಗಳ ಬಗ್ಗೆ ಅನುಮಾನಗಳಿದ್ದ ಕಾರಣ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು ಮತ್ತು ಈ ಪ್ರಕರಣವನ್ನು ಮುಂದುವರಿಸಲು ನಿರಾಕರಿಸಿತು. ಭಾಸ್ಕರನ್ ಪರ ವಕೀಲರು ಈ ಪ್ರಕರಣದಲ್ಲಿ ರಶೀದ್ ಪಾತ್ರ ಮತ್ತು ಪರಿಸ್ಥಿತಿಯ ಮೇಲೆ ಪ್ರಭಾವ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾಸ್ಕರನ್ ಕುಟುಂಬದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.

ದಿ ಕೇರಳ ಫೈಲ್ಸ್ ಸ್ಟೋರಿ ಬರೀ ಸುಳ್ಳು ಎಂದಿದ್ದ ಪಿವಿ ಭಾಸ್ಕರನ್

ಕಮ್ಯುನಿಷ್ಟ್ ನಾಯಕನ ಪುತ್ರಿಯೇ ಈಗ ತಂದೆಯ ವಿರುದ್ಧ ಈ ರೀತಿಯ ಆರೋಪ ಮಾಡಿರುವುದರಿಂದ ಅಲ್ಲಿನ ಬಲಪಂಥೀಯ ನಾಯಕರು, ದಿ ಕೇರಳ ಸ್ಟೋರಿ ಸಿನಿಮಾದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ವಿಚಿತ್ರ ಎಂದರೆ 2023ರಲ್ಲಿ ತೆರೆಕಂಡ ಈ ದಿ ಕೇರಳ ಸ್ಟೋರಿ ಬಿಡುಗಡೆಯಾದಾಗ ಈ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಪಿವಿ ಭಾಸ್ಕರನ್ ಇದು ಕೇವಲ ಸುಳ್ಳನ್ನು ಹೇಳುವ ಸಿನಿಮಾ ಅದರಲ್ಲಿ ತೋರಿಸಿರುವ ಎಲ್ಲವೂ ಸುಳ್ಳು ಮತ್ತು ಮುಸ್ಲಿಂ ವಿರೋಧಿ ಎಂದು ಕರೆದರು ಆದರೆ ಈಗ ಅವರ ಸ್ವಂತ ಮಗಳೇ ಸಿನಿಮಾದಲ್ಲಿ ಇದ್ದಂತೆ ಲವ್ ಜಿಹಾದ್ ಬಲೆಗೆ ಬಿದ್ದಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಿಮಾನ 36000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಹೃದಯಾಘಾತ: ಪ್ರಯಾಣಿಕನ ಜೀವ ಉಳಿಸಿದ ಕೇರಳದ ನರ್ಸ್‌ಗಳು

ಇದನ್ನೂ ಓದಿ: ತಿಂಗಳಿಗೆ 50000ದಿಂದ ಲಕ್ಷದವರೆಗೆ ವೇತನ ಶ್ರೇಣಿ ಹೊಂದಿರುವ ಡಿಎಸ್‌ಪಿಯಿಂದಲೇ ಕಳ್ಳತನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ