2019ರಲ್ಲಿ ಕೇರಳದಲ್ಲಿ ನಡೆದ ವೈದ್ಯ ಶಾಬಾ ಷರೀಫ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಔಷಧ ಸೂತ್ರಕ್ಕಾಗಿ ವೈದ್ಯರನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು.
ಮಲಪ್ಪುರಂ (ಕೇರಳ): 2019ರಲ್ಲಿ ಕೇರಳದಲ್ಲಿ ಸಂಭವಿಸಿದ್ದ ಮೈಸೂರಿನ ಪಾರಂಪರಿಕ ವೈದ್ಯ ಶಾಬಾ ಷರೀಫ್ ಅವರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಮೂವರಿಗೆ ಕೇರಳದ ಮಂಜೇರಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಭಿನ್ನ ಶಿಕ್ಷೆಗಳನ್ನು ನೀಡಿದೆ.ಪ್ರಮುಖ ಆರೋಪಿ ಶೈಬಿನ್ ಅಶ್ರಫ್‌ಗೆ (37) 13 ವರ್ಷ-9 ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ₹2.44 ಲಕ್ಷ ದಂಡ ವಿಧಿಸಲಾಗಿದೆ. ಎರಡನೇ ಆರೋಪಿ ಶಿಹಾಬುದ್ದೀನ್‌ಗೆ (36) 8.9 ವರ್ಷ ಜೈಲು ಶಿಕ್ಷೆ ಮತ್ತು ₹60,000 ದಂಡ ವಿಧಿಸಲಾಗಿದೆ. ಆರನೇ ಆರೋಪಿ ನಿಶಾದ್ ನಡುತೋಡಿಕಗೆ (32) 5.9 ವರ್ಷದ ಜೈಲು ಶಿಕ್ಷೆ ಮತ್ತು ₹45,000 ದಂಡ ವಿಧಿಸಲಾಗಿದೆ.
ಕೊಲೆಗೆ ಕಾರಣವೇನು?:
ಬಾಬಾ ಷರೀಫ್ ಬಳಿ ಮೂಲವ್ಯಾಧಿ ಗುಣಪಡಿಸುವ ಔಷಧ ಸೂತ್ರ ಇತ್ತು. ಇದನ್ನು ಪಡೆಯಲು ಅಶ್ರಫ್ ಯತ್ನಿಸಿದ್ದ. ಈ ಸೂತ್ರ ಪಡೆದು ತಾನೇ ಔಷಧ ತಯಾರಿಸಿ ದೊಡ್ಡ ಕ್ಲಿನಿಕ್ ಸ್ಥಾಪನೆ ಮಾಡುವ ಉದ್ದೇಶ ಅಶ್ರಫ್‌ಗೆ ಇತ್ತು. ಆದರೆ ಈ ಸೂತ್ರವನ್ನು ಷರೀಫ್ ನೀಡಲು ಒಪ್ಪಿರಲಿಲ್ಲ. ಹೀಗಾಗೇ ಷರೀಫ್‌ನನ್ನು ತನ್ನ ಸಹಚರರ ಮೂಲಕ ಅಶ್ರಫ್ ಅಪಹರಿಸಿ ಚಿತ್ರ ಹಿಂಸೆ ಮಾಡಿಸಿ ಕೊಲೆ ಮಾಡಿಸಿದ್ದ ಹಾಗೂ ಆವರ ದೇಹವನ್ನು ತುಂಡು ಮಾಡಿ, ಅವಶೇಷಗಳನ್ನು ಚಾಲಿಯಾರ್ ನದಿಗೆ ಎಸೆದಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಹೇಳಿದ್ದರು.
ಜೈಲಲ್ಲಿ ಪ್ರೇಮಿಯ ಜೊತೆ ಸಹ ಜೀವನ, ಡ್ರಗ್ಸ್‌ಗೆ ಬೇಡಿಕೆ ಇಟ್ಟ ಮರ್ಚಂಟ್ ನೇವಿ ಅಧಿಕಾರಿ ಕೊಂದ ಹಂತಕಿ
ಪತ್ನಿಯ ಶೀಲ ಶಂಕಿಸಿ 3 ವರ್ಷದ ಮಗನ ಕತ್ತು ಸೀಳಿ ದೇಹವನ್ನು ಕಾಡಿನಲ್ಲಿ ಎಸೆದ ಟೆಕ್ಕಿ