ಬೆಜೆಪಿ ಸೇರಿದ ಕ್ಯಾಥೋಲಿಕ್ ಪಾದ್ರಿಗೆ ಶಿಕ್ಷೆ ವಿಧಿಸಿದ ಚರ್ಚ್, ಕರ್ತವ್ಯದಿಂದ ವಜಾ!

Published : Oct 03, 2023, 01:26 PM IST
ಬೆಜೆಪಿ ಸೇರಿದ ಕ್ಯಾಥೋಲಿಕ್ ಪಾದ್ರಿಗೆ ಶಿಕ್ಷೆ ವಿಧಿಸಿದ ಚರ್ಚ್, ಕರ್ತವ್ಯದಿಂದ ವಜಾ!

ಸಾರಾಂಶ

ಕ್ಯಾಥೋಲಿಕ್ ಚರ್ಚ್ ಪಾದ್ರಿ ಬಿಜೆಪಿ ಪಕ್ಷ ಸೇರಿಕೊಂಡು ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಚರ್ಚ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಬಿಜೆಪಿ ಸೇರಿದ ಪಾದ್ರಿಯನ್ನು ಕರ್ತವ್ಯದಿಂದ ವಜಾಗೊಳಿಸಿದೆ.

ಇಡುಕ್ಕಿ(ಅ.03) ಅಧಿಕಾರಕ್ಕಾಗಿ ಹಲವರು ಪಕ್ಷ ಬದಲಿಸುತ್ತಾರೆ. ಸಿದ್ದಾಂತಗಳನ್ನು ಗಾಳಿಗೆ ತೂರಿ ಇತರ ಪಕ್ಷಗಳಿಗೆ ಸೇರಿಕೊಳ್ಳುತ್ತಾರೆ. ಆದರೆ ಹೀಗೆ ಪಕ್ಷ ಬದಲಿಸುವಾಗ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ನಾಯಕರು ಬಿಜೆಪಿ ಸೇರಿಕೊಳ್ಳುವುದು ತೀರಾ ವಿರಳ. ಹೀಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಯೊಬ್ಬರು ಇದೀಗ ಬಿಜೆಪಿ ಸೇರಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಬಿಜೆಪಿ ಸೇರಿದ ಮರುಕ್ಷಣದಲ್ಲಿ ಪಾದ್ರಿಯನ್ನು ಕರ್ತವ್ಯದಿಂದ ಚರ್ಚ್ ಆಡಳಿತ ಮಂಡಳಿ ವಜಾ ಮಾಡಿದೆ. ಈ ಘಟನೆ ನಡೆದಿರುವುದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ. ಸೈರೋ ಮಲಬಾರ್ ಚರ್ಚ್ ಪಾದ್ರಿ ಇದೀಗ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ.

ಫಾದರ್ ಕುರಿಯಾಕೋಸ್ ಮತ್ತಮ್ ಸೈರೋ ಮಲಬಾರ್ ಚರ್ಚ್ ಅಧಿನದಲ್ಲಿರುವ ಮಂಕುವಾ ಸೈಂಟ್ ಥೋಮಸ್ ಚರ್ಚ್‌ನಲ್ಲಿ ಪಾದ್ರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಭಾರತದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸ, ಎಲ್ಲಾ ಪಂತಗಳನ್ನು ಸಮಾನವಾಗಿ ನೋಡಿ ಮೂಲಭೂತ ಸವಲತ್ತುಗಳನ್ನು ಕಲ್ಪಿಸುತ್ತಿರುವ ಬಿಜೆಪಿ ಪಕ್ಷವನ್ನು ಸೇರಬಾರದು ಅನ್ನೋದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಕುರಿಯಾಕೋಸ್ ಹೇಳಿದ್ದಾರೆ.

ಪಾದ್ರಿ ಸೂಚನೆ, ಪ್ರಧಾನಿ ಕರೆ; ಅನಿಲ್ ಆ್ಯಂಟಿನಿ ಬಿಜೆಪಿ ಸೇರಿದ ಹಿಂದಿನ ಕಾರಣ ಬಿಚ್ಚಿಟ್ಟ ತಾಯಿ!

ನನಗೆ ಬಿಜೆಪಿಯ ಹಲವು ಕಾರ್ಯಕರ್ತರು ಪರಿಚಯಸ್ಥರು, ಹಲವು ಕಾರ್ಯಕರ್ತರ ಜೊತೆ ಆತ್ಮೀಯ ಗೆಳೆತನ ಇದೆ. ದೇಶದಲ್ಲಿ ಬಿಜೆಪಿ ಪಕ್ಷದ ನಿಲುವು ಎಲ್ಲವನ್ನೂ ನಾನು ಸುದ್ದಿ ಮೂಲಕ ತಿಳಿದುಕೊಳ್ಳುತ್ತಿದ್ದೇನೆ. ಇದೀಗ ನಾನು ಬಿಜೆಪಿ ಸೇರಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದೇನೆ ಎಂದು ಫಾದರ್ ಕುರಿಯಾಕೋಸ್ ಹೇಳಿದ್ದಾರೆ.

74 ವರ್ಷದ ಫಾದರ್ ಕುರಿಯಾಕೋಸ್, ಇಡುಕ್ಕಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಕೆಎಸ್ ಅಜಿ ಸಮ್ಮುಖದಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಚರ್ಚ್ ಆಡಳಿತ ಮಂಡಳಿ ಫಾದರ್ ಕುರಿಯಾಕೋಸ್ ಅವರನ್ನು ಕರ್ತವ್ಯದಿಂದ ವಜಾ ಮಾಡಿದೆ. ಚರ್ಚ್ ಕ್ಯಾನನ್ ನಿಯಮದ ಪ್ರಕಾರ, ಪಾದ್ರಿ ಕರ್ತವ್ಯದಲ್ಲಿರುವಾಗ ಯಾವುದೇ ರಾಜಕೀಯ ಪಕ್ಷ ಸೇರಿ ಸಕ್ರಿಯರಾಗುವಂತಿಲ್ಲ. ಹೀಗಾಗಿ ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂದು ಚರ್ಚ್ ಆಡಳಿತ ಮಂಡಳಿ ಹೇಳಿದೆ.

ಮಣಿಪುರ ಹಿಂದೂ ಕ್ರಿಶ್ಚಿಯನ್ ಸಂಘರ್ಷವಲ್ಲ, ಬುಡಕಟ್ಟು ಸಮುದಾಯದ ಗಲಭೆ ಸೀಕ್ರೆಟ್ ಬಿಚ್ಚಿಟ್ಟ ಪಾದ್ರಿ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಡುಕ್ಕಿ ಬಿಜೆಪಿ ಅಧ್ಯಕ್ಷ ಕೆಎಸ್ ಅಜಿ, ಮಣಿಪುರ ವಿಚಾರದಲ್ಲಿ ಕೇರಳದಲ್ಲಿ ಹಲವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಿಗೆ ಚರ್ಚ್ ಪಾದ್ರಿ ಬಿಜೆಪಿ ಸೇರಿಕೊಂಡಿರುವುದೇ ಉತ್ತರವಾಗಿದೆ. ಧರ್ಮದ ಆಧಾರದಲ್ಲಿ ಬಿಜೆಪಿ ಆಡಳಿತ ನಡೆಸುವುದಿಲ್ಲ. ದೇಶದ ಅಭಿವೃದ್ಧಿ ಬಿಜೆಪಿ ಮೂಲಮಂತ್ರ ಎಂದು ಅಜಿ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!