ಪ್ರಧಾನಿಗೆ ಸಿಕ್ಕಿದ ಗಿಫ್ಟ್‌ಗಳ ಹರಾಜು: ಈ ಪ್ರಕ್ರಿಯೆಯಲ್ಲಿ ನೀವೂ ಭಾಗವಹಿಸಬಹುದು

By Suvarna News  |  First Published Oct 3, 2023, 12:40 PM IST

ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ವಿವಿಧೆಡೆ ವಿವಿಧ ಸಂಘಟನೆಗಳು, ಜನರು ಗಣ್ಯರು ನೀಡಿದ ಪ್ರಶಸ್ತಿಗಳನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಹರಾಜಿಗಿಡಲಾಗಿದ್ದು, ಆಸಕ್ತರು ಕುಳಿತಲ್ಲಿಂದಲೇ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. 


ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ ವಿದೇಶಗಳಲ್ಲಿ  ತಿರುಗಾಡುತ್ತಿದ್ದು, ಅವರು ಹೋದಲೆಲ್ಲಾ ಅವರ ಅಭಿಮಾನಿಗಳು, ವಿಶ್ವದ ವಿವಿಧ ನಾಯಕರು, ಗಣ್ಯರು ಜನರು ಅವರಿಗೆ ವಿಭಿನ್ನ ವಿಶೇಷವೆನಿಸಿದ ಉಡುಗೊರೆಗಳನ್ನು ನೀಡುತ್ತಾರೆ. ಈ ಅಮೂಲ್ಯವಾದ ಉಡುಗೊರೆಗಳನ್ನು ಪ್ರತಿವರ್ಷ ಹರಾಜು ಕರೆಯಲಾಗುತ್ತದೆ. ಲಕ್ಷದಿಂದ ಕೋಟಿಯವರೆಗಿನ ಮೊತ್ತಕ್ಕೆ ಈ ಪ್ರಶಸ್ತಿಗಳು ಹರಾಜಲ್ಲಿ ಮಾರಾಟವಾಗುತ್ತವೆ. ಅದೇ ರೀತಿ ಈ ವರ್ಷವೂ ಕೂಡ ಹರಾಜು ಕರೆಯಲಾಗಿದ್ದು, ಜನಸಾಮಾನ್ಯರು ಕೂಡ ಈ ಆನ್‌ಲೈನ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. 

ಪ್ರಧಾನಿಯವರಿಗೆ ಸಿಕ್ಕಿದ ಪ್ರಶಸ್ತಿಗಳಲ್ಲಿ 100 ರಿಂದ 64 ಲಕ್ಷದವರೆಗಿನ ಸ್ಮರಣಿಕೆಗಳಿದ್ದು,  ಅವುಗಳಲ್ಲಿ 150 ಸ್ಮರಣಿಕೆಗಳನ್ನು ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯೇ ಸ್ವತಃ ಟ್ವಿಟ್ ಮಾಡಿದ್ದಾರೆ. ಇಂದಿನಿಂದ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನನಗೆ ನೀಡಿದ ವಿವಿಧ ಹಂತದ ಉಡುಗೊರೆಗಳನ್ನು ಹಾಗೂ ಸ್ಮರಣಿಕೆಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇವು ಭಾರತದಾದ್ಯಂತ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ನನಗೆ ನೀಡಲಾಗಿತ್ತು.  ಈ ಪ್ರಶಸ್ತಿಗಳು ಭಾರತದ ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಮತ್ತು ಕಲಾತ್ಮಕ ಪರಂಪರೆಗೆ ಸಾಕ್ಷಿಯಾಗಿದೆ. ಎಂದಿನಂತೆ ಈ ಬಾರಿಯೂ ಈ ಪ್ರಶಸ್ತಿಗಳನ್ನು ಹರಾಜು ಹಾಕಲಾಗುವುದು. ಇದರಿಂದ ಬರುವ ಆದಾಯವನ್ನು ನವಾಮಿ ಗಂಗೆ ಯೋಜನೆಗೆ ಬಳಸಲಾಗುವುದು. ಯಾರೂ ಬೇಕಾದರು ಇವುಗಳನ್ನು ಖರೀದಿಸಬಹುದು. ಇದಕ್ಕಾಗಿ ನಾನು ಇಲ್ಲಿ ನೀಡಿರುವ ಎನ್‌ಜಿಎಂಎ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಪ್ರಧಾನಿ ಈ ಹರಾಜು ಪ್ರಕ್ರಿಯೆಗೆ ದೇಶದ ಜನರನ್ನು ಆಸಕ್ತರನ್ನು ಆಹ್ವಾನಿಸಿದ್ದಾರೆ...!

Tap to resize

Latest Videos

ಕಾಶ್ಮೀರಕ್ಕೆ ಸ್ವಾತಂತ್ರ ನೀಡಿ, ಭಗವಾ ಧ್ವಜ ಉರಿಯಲಿದೆ : ಜೆಎನ್‌ಯುದಲ್ಲಿ ಮತ್ತೆ ದೇಶ ವಿರೋಧಿ ಬರಹ

ಆಸಕ್ತರು ಮಾಡಬೇಕಾದೇನು?

ಹಂತ 1: ನೋಂದಣಿ

ಈ ಸ್ಮರಣಿಕೆಗಳನ್ನು ಖರೀದಿಸಲು ಬಯಸುವ ಹೊಸ ಖರೀದಿದಾರರು, ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಬಳಸಿಕೊಂಡು PM Mementos ಪೋರ್ಟಲ್‌ಗೆ ಸೈನ್ ಅಪ್ ಮಾಡಬೇಕಾಗುತ್ತದೆ ನಂತರ ಖರೀದಿದಾರನ ದೃಢೀಕರಣವನ್ನು ಪರಿಶೀಲಿಸಲು, ಪೋರ್ಟಲ್ ಮೊಬೈಲ್ ಸಾಧನ ಮತ್ತು ಇಮೇಲ್ ಐಡಿಗೆ OTP ಅನ್ನು ಕಳುಹಿಸುತ್ತದೆ.

ಹಂತ 2: ಲಾಗಿನ್ ಮತ್ತು ಆಧಾರ್ ದೃಢೀಕರಣ

ಲಾಗಿನ್ ಆದ ನಂತರ, ಖರೀದಿದಾರರನ್ನು ಆಧಾರ್ ದೃಢೀಕರಣ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಒಮ್ಮೆ ಆಧಾರ್ ವಿವರಗಳನ್ನು ಪರಿಶೀಲಿಸಿದ ನಂತರವಷ್ಟೇ, ಖರೀದಿದಾರರಿಗೆ ಮುಂದುವರಿಯಲು ಅವಕಾಶ ನೀಡಲಾಗುತ್ತದೆ.

ಹಂತ 3: ಐಟಂ ಕ್ಯಾಟಲಾಗ್ ಬ್ರೌಸ್

ಖರೀದಿದಾರರು ಧೃಡೀಕರಣದೊಂದಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಕ್ಯಾಟಲಾಗ್ ಅನ್ನು ಬ್ರೌಸ್ ಮಾಡಬಹುದು ಮತ್ತು 'ಲೈವ್ ಹರಾಜು' ವಿಭಾಗದ ಅಡಿಯಲ್ಲಿ ಪ್ರದರ್ಶಿಸಲಾದ ಐಟಂಗಳನ್ನು ವೀಕ್ಷಿಸಬಹುದು.

ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿ ಪಾತ್ರೆ ತೊಳೆದ ರಾಹುಲ್‌ ಗಾಂಧಿ

ಹಂತ 4: ಕಾರ್ಟ್‌ಗೆ ಸೇರಿಸಿ
ನಂತರ ನಿಮ್ಮ ಕಾರ್ಟ್‌ಗೆ ನಿಮ್ಮ ಆಯ್ಕೆಯ ಉತ್ಪನ್ನವನ್ನು ಸೇರಿಸಿ ಹರಾಜಿನಲ್ಲಿ ಬಿಡ್ ಅನ್ನು ಉಲ್ಲೇಖಿಸಬೇಕು. ಕಾರ್ಟ್‌ಗೆ ಸೇರಿಸುವುದು ಕಡ್ಡಾಯ ಪ್ರಕ್ರಿಯೆಯಾಗಿದೆ. ಕಾರ್ಡ್‌ಗೆ ಸೇರಿಸಲಾದ ವಸ್ತುಗಳಿಗೆ ಖರೀದಿದಾರರು ಹರಾಜಿನಲ್ಲಿ ಭಾಗವಹಿಸಬಹುದು.

ಹಂತ 5: ಹರಾಜು ಮುಗಿಯುವವರೆಗೆ ಹರಾಜಿನಲ್ಲಿ ಭಾಗವಹಿಸಿ

ಉತ್ಪನ್ನವನ್ನು ಕಾರ್ಟ್‌ಗೆ ಸೇರಿಸಿದ ನಂತರ, ಖರೀದಿದಾರನು ಬಿಡ್ ಮಾಡಬಹುದು ಮತ್ತು ಹರಾಜಿನಲ್ಲಿ ಭಾಗವಹಿಸಬಹುದು. ಹರಾಜು ಮುಗಿಯುವವರೆಗೆ ಖರೀದಿದಾರರು ಹರಾಜಿನಲ್ಲಿ ಭಾಗವಹಿಸಬಹುದು

Starting today, an exhibition at the will display a wide range of gifts and mementoes given to me over the recent past.

Presented to me during various programmes and events across India, they are a testament to the rich culture, tradition and artistic heritage of… pic.twitter.com/61Vp8BBUS6

— Narendra Modi (@narendramodi)

 

click me!