ಕೇರಳ: ಕೆಲವೊಮ್ಮ ಯಾರೋ ಮಾಡುವ ಸಣ್ಣದೊಂದು ಒಳ್ಳೆಯ ಕೆಲಸ ಅನೇಕರ ಮೊಗದಲ್ಲಿ ನಗು ಮೂಡಿಸುವುದು ಅದೇ ರೀತಿ ಇಲ್ಲೊಂದು ಕಡೆ ಬಸ್ ಚಾಲಕ ಮಾಡಿದ್ದ ಪುಟ್ಟ ಮಾನವೀಯ ಕಾರ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಬಸ್ ಚಾಲಕನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಬಸ್ ಚಾಲಕ ಮಾಡಿದ ಆ ಒಂದೊಳ್ಳೆ ಕೆಲಸ ಏನು ಎಂಬುದು ಈ ವಿಡಿಯೋದಲ್ಲಿದೆ.
ಕೇರಳದ (Kerala) ಬಸ್ ಚಾಲಕನೋರ್ವ ಬೀದಿ ಬದಿಯ ಮಕ್ಕಳಿಗೆ ಬಿಸ್ಕೆಟ್ ಹಾಗೂ ಚಾಕೋಲೇಟ್‌ಗಳನ್ನು (chocolate) ನೀಡಿದ್ದಾರೆ. ಈ ವೇಳೆ ಮಕ್ಕಳು ಮೊಗದಲ್ಲಿ ನಗುವಿನ ಮಂದಹಾಸ ಮೂಡಿದ್ದು, ನಗುವಿನೊಂದಿಗೆ ಬಸ್ ಚಾಲಕನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಈ ವಿಡಿಯೋವನ್ನು favaseeeyy ಎಂಬ ಇನ್ಸ್ಟಾ ಖಾತೆಯನ್ನು ಹೊಂದಿರುವ ಕೇರಳದ ಬ್ಲಾಗರ್ (Blogger) ಒಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು 9 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ದೊಡ್ಡ ಟಿವೀಲಿ ಕಾರ್ಟೂನ್ ನೋಡ್ತಾರೆ ಬೀದಿ ಮಕ್ಕಳು, ಅಂಗಡಿ ಮಾಲೀಕನ ಮಾನವೀಯತೆಗೆ ಹ್ಯಾಟ್ಸಾಪ್
ವಿಡಿಯೋದಲ್ಲಿ ಕಾಣಿಸುವಂತೆ ಬಸ್ ಚಾಲಕರೊಬ್ಬರು (Bus Driver) ದಾರಿ ಮಧ್ಯೆ ಬಸ್ ನಿಲ್ಲಿಸಿ ಬೀದಿಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳಿಗೆ ಬಿಸ್ಕೆಟ್ ಹಾಗೂ ಚಾಕೋಲೆಟ್‌ಗಳನ್ನು ನೀಡುತ್ತಾರೆ. ಇದನ್ನು ಆಸೆಗಣ್ಣುಗಳ ಜೊತೆ ಅಷ್ಟೇ ಪ್ರೀತಿಯಿಂದ ಮಕ್ಕಳು ಸ್ವೀಕರಿಸುತ್ತಾರೆ. ನಂತರ ಬಸ್ ಚಾಲಕನಿಗೆ ಕೈ ಬೀಸಿ ಟಾಟಾ ಮಾಡುತ್ತಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಕೇರಳ ಬ್ಲಾಗರ್ ಒಬ್ಬರು ಮಲಯಾಳಂ (Malayalam) ಭಾಷೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ' ಜೀವನವೆಂಬ ಪ್ರಯಾಣದಲ್ಲಿ ನಾವು ಅನೇಕರನ್ನು ಭೇಟಿ ಮಾಡುತ್ತೇವೆ. ಆದರೆ ಮತ್ತೊಬ್ಬರ ಹಸಿವು ನೀಗಿಸಲು ಕೆಲವೊಬ್ಬರು ಮಾಡುವ ಕಾರ್ಯಗಳು ನಮ್ಮನ್ನು ಭಾವುಕವಾಗಿಸುತ್ತವೆ. ಇಂತಹ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು, ನನ್ನ ಭಾಗ್ಯ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಹಸಿವು ಎಂದರೆ ಏನು ಎಂಬುದೇ ನಮ್ಮಂತಹ ಬಹುತೇಕರಿಗೆ ಗೊತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
UttaraKannada: KSRTC ಬಸ್ಸಿನಲ್ಲಿ ಸಿಕ್ಕ 8 ಲಕ್ಷ ಮೌಲ್ಯದ ಆಭರಣಗಳನ್ನು ಮರಳಿಸಿ ಪ್ರಾಮಾಣಿಕತೆ ಮರೆದ ಸಿಬ್ಬಂದಿ
ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಕೇರಳದ ಚಾಲಕನ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ನೋಡಿದರೆ ಕಣ್ಣೀರು ಬರುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಆ ಮಕ್ಕಳ ಮೊಗದಲ್ಲಿ ನಗು ನೋಡಿ ಖುಷಿಯಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೂರದೃಷ್ಟಿ ನೋಡಲು ಸಣ್ಣದೆನಿಸಿದರು ಅದರ ಪರಿಕಲ್ಪನೆ ಅದ್ಭುತ ಪರಿಣಾಮ ಬೀರುವುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಸಿವು ಏನೆಂಬುದರ ಅರಿವಿರುವ ವ್ಯಕ್ತಿ ಇವರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ