ರಸ್ತೆ ಹೊಂಡಗಳ ನಡುವೆ Pre Wedding Photoshoot: ವೈರಲ್ ಆದ್ಲು ಕೇರಳದ ವಧು

By Anusha KbFirst Published Sep 21, 2022, 10:43 AM IST
Highlights

ವಿವಾಹ ಪೂರ್ವ ಫೋಟೋಶೂಟ್‌ಗೆ (pre wedding photoshoot) ವಧುವರರು ಕಾಡುಮೇಡು ಹೊಳೆ ತೊರೆ ಎಂದು ಯೋಚಿಸದೇ ವಿಭಿನ್ನ ಸ್ಥಳಕ್ಕಾಗಿ ಎಲ್ಲೆಲ್ಲೋ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ ವಧು ತನ್ನ ವಿವಾಹದ ಫೋಟೋಶೂಟ್‌ಗಾಗಿ ಹೊಂಡ ತುಂಬಿದ ರಸ್ತೆಯನ್ನೇ  ಆಯ್ಕೆ ಮಾಡಿಕೊಂಡಿದ್ದಾಳೆ.

ತಿರುವನಂತರಪುರ: ಇತ್ತೀಚೆಗೆ ಪ್ರಿವೆಡ್ಡಿಂಗ್ ಫೋಟೋಶೂಟ್ ದೊಡ್ಡ ಮಟ್ಟದ ಟ್ರೆಂಡ್ ಆಗ್ತಿದೆ. ಮದುವೆಗೆ ಮುನ್ನ ಫೋಟೋ ಶೂಟ್ ಮಾಡಿಲ್ಲ ಅಂದ್ರೆ ಮದುವೆನೆ ಅಲ್ಲ ಎಂಬಂತೆ ಯುವ ಸಮೂಹ ಭಾವಿಸುತ್ತಿದೆ. ಇದೇ ಕಾರಣಕ್ಕೆ ಅಪಾಯಕಾರಿ ನದಿ ತೊರೆಗಳಲ್ಲಿ ಫೋಟೋ ಶೂಟ್ ಮಾಡಿ ಮದುವೆಗೂ ಮೊದಲೇ ಮಸಣ ಸೇರಿದ ಘಟನೆಗಳು ನಡೆದಿವೆ. ಈ ಮಧ್ಯೆ ಕೇರಳದಲ್ಲೊಂದು ವಿಶಿಷ್ಠವಾದ ವಿವಾಹಪೂರ್ವ ಫೋಟೋ ಶೂಟ್ ನಡೆದಿದೆ. ಏನದು ಇಲ್ಲಿ ಓದಿ.

ತಮ್ಮ ವಿವಾಹ  ಫೋಟೋ ಶೂಟ್ ಎಲ್ಲ ಫೋಟೋ ಶೂಟ್‌ಗಳಿಗಿಂತ ವಿಭಿನ್ನವಾಗಿಬೇಕು. ಎಲ್ಲರೂ ವಾವ್ ಅನ್ನಬೇಕು ಎಂದು ಬಹುತೇಕ ವಧುವರರು ಆಸೆ ಪಡುತ್ತಾರೆ. ಇದೇ ಕಾರಣಕ್ಕೆ ಈ ವಿವಾಹ ಪೂರ್ವ ಫೋಟೋಶೂಟ್‌ಗೆ (pre wedding photoshoot) ವಧುವರರು ಕಾಡುಮೇಡು ಹೊಳೆ ತೊರೆ ಎಂದು ಯೋಚಿಸದೇ ವಿಭಿನ್ನ ಸ್ಥಳಕ್ಕಾಗಿ ಎಲ್ಲೆಲ್ಲೋ ಹೋಗುತ್ತಾರೆ. ಆದರೆ ಇಲ್ಲೊಂದು ಕಡೆ ವಧು ತನ್ನ ವಿವಾಹದ ಫೋಟೋಶೂಟ್‌ಗಾಗಿ ಹೊಂಡ ತುಂಬಿದ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾಳೆ.

 

ಸದಾ ಹೊಸದನ್ನು ಪ್ರಯತ್ನಿಸುವ, ಹೊಸ ಆಲೋಚನೆಗಳ ಮೂಲಕ ಟ್ರೆಂಡ್‌ಗೆ (trend) ಮುನ್ನುಡಿ ಬರೆಯುವ ಕೇರಳದಲ್ಲಿ ಈ ಘಟನೆ ನಡೆದಿದೆ. ಈ ಫೋಟೋ ಶೂಟ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media) ಇನ್ಸ್ಟ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, 4 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ವಧು ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಕೆಂಪು ಬಣ್ಣದ ಮದುವೆ ಸೀರೆಯುಟ್ಟು ನಡೆದುಕೊಂಡು ಬರುತ್ತಿದ್ದಾಳೆ. ಹೊಂಡಗಳ ತುಂಬಾ ಕೆಸರು ನೀರು ತುಂಬಿದ್ದರೂ, ಆ ಹೊಂಡ ತುಂಬಿದ ರಸ್ತೆಯಲ್ಲೇ ಕೆಸರು ನೀರು ರಾಚಿಸಿಕೊಂಡು ವಾಹನಗಳು ತೆರಳುತ್ತಿದ್ದರೂ ವಧು ಮಾತ್ರ ಬಿಂಕದಿಂದ ಕ್ಯಾಮರಾಗೆ ಫೋಸ್ ನೀಡುತ್ತಾ ನಡೆದು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

ಏರೋ ವೆಡ್ಡಿಂಗ್ ಕಂಪನಿ ಈ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್‌ನಲ್ಲಿ(Instagram) ಪೋಸ್ಟ್ ಮಾಡಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆಯ ಜೊತೆ ಹಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಭಾರಿ ಮಳೆಯಿಂದಾಗಿ ಕೇರಳ ಸೇರಿದಂತೆ ಕರಾವಳಿ ಭಾಗದಲ್ಲಿ (Costal Area) ರಸ್ತೆಗಳ ಸ್ಥಿತಿ ದಾರುಣವಾಗಿದೆ. ಹೊಂಡಗಳ ನಡುವೆ ರಸ್ತೆಯನ್ನು ಹುಡುಕುವಂತಹ ಪರಿಸ್ಥಿತಿ ಬಂದಿದೆ. ರಸ್ತೆಯ ದುಸ್ಥಿತಿಗೆ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಹೊಂಡ ಗುಂಡಿಗಳ (potholes) ಮಧ್ಯೆ ಮೂಡಿಬಂದ ಫೋಟೋಶೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಪ್ರಿ-ವೆಡ್ಡಿಂಗ್ ಫೋಟೋ ಶೂಟ್-ಗೆ ಬೇಂದ್ರೆ ಅವತಾರ

ಇತ್ತೀಚೆಗೆ ಬಿಡುಗಡೆಯಾದ ಕೇರಳದ ಮಲೆಯಾಳಂ ಸಿನಿಮಾ ನಾ ತಾನ್ ಕಾಸ್ ಕುಡು (Nna Thaan Case Kodu) ಸಿನಿಮಾ ತಂಡದವರು ಸಿನಿಮಾ ಪ್ರಮೋಷನ್‌ ವೇಳೆ ಈ ರಸ್ತೆಯ ಹೊಂಡಗಳ ಬಗ್ಗೆ ಗಮನಸೆಳೆದಿದ್ದರು. ಥಿಯೇಟರ್‌ಗೆ ಬರುವ ದಾರಿಯಲ್ಲಿ ಸಾಕಷ್ಟು ಹೊಂಡಗಳಿವೆ, ಆದರೂ ದಯಾಮಾಡಿ ಬಂದು ಸಿನಿಮಾ ನೋಡಿ ಎಂದು ಅವರು ಸಿನಿಮಾ ಪೋಸ್ಟರ್‌ನಲ್ಲಿ ಟ್ಯಾಗ್‌ಲೈನ್ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

'ಆಡು ಓಡಿ ಬಂದರೆ ಏನ್ ಮಾಡ್ತೀರಿ...' ಪ್ರಿ ವೆಡ್ಡಿಂಗ್ ಸಿಕ್ಕಾಪಟ್ಟೆ ವೈರಲ್!

ಕೇರಳ ಹೈಕೋರ್ಟ್ (Kerala highcourt) ಕೂಡ ಇತ್ತೀಚೆಗೆ ರಾಜ್ಯದ ರಸ್ತೆಗಳ ಸ್ಥಿತಿ ಮತ್ತು ಗುಂಡಿಗಳಿಗೆ ಸಂಬಂಧಿಸಿದ ಅಪಘಾತಗಳಿಂದ ವರದಿಯಾಗುತ್ತಿರುವ ಸಾವಿನ ಸಂಖ್ಯೆಯ ಬಗ್ಗೆ ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ರಾಜ್ಯದ ರಸ್ತೆಗಳ ಗುಂಡಿಗಳು ಮುಚ್ಚುವ ಮೊದಲು ಅದಕ್ಕೆ ಬಿದ್ದು ಎಷ್ಟು ಜನರು ಸಾಯಬೇಕು ಎಂದು ಹೈಕೋರ್ಟ್ ಪ್ರಶ್ನಿಸಿತ್ತು ಮತ್ತು ಸಮಸ್ಯೆಯನ್ನು ನಿಭಾಯಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. 
 

click me!