Kashi Vishwanath Dham ಬೊಮ್ಮಾಯಿ ಸೇರಿ ಬಿಜೆಪಿ ಸಿಎಂಗಳ ಜೊತೆ PM ಮೋದಿ ಇಂದು ಮ್ಯಾರಥಾನ್‌ ಸಭೆ!

By Suvarna News  |  First Published Dec 14, 2021, 1:01 AM IST
  • ಕಾಶಿ  ಕಾರಿಡಾರ್ ಉದ್ಘಾಟಿಸಿದ ಮೋದಿ, ಕಾರ್ಯಕ್ರಮದಲ್ಲಿ ಬಿಜೆಪಿ ಸಿಎಂಗಳು ಭಾಗಿ
  • ಇಂದು ಬಿಜೆಪಿ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ
  • ಕುತೂಹಲ ಹೆಚ್ಚಿಸಿದ ಮೋದಿ ಸಭೆ, ಮಹತ್ವದ ಸೂಚನೆಗೆ ಪ್ರಧಾನಿ ತಯಾರಿ

ವಾರಾಣಸಿ(ಡಿ.14): ಕಾಶಿ ವಿಶ್ವಣಾಥ ಧಾಮ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ಮಂಗಳವಾರ ಕರ್ನಾಟಕದ ಬಸವರಾಜ ಬೊಮ್ಮಾಯಿ(Basavaraj Bommai) ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಸುದೀರ್ಘ ಸಭೆ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಈ ವೇಳೆ ಎಲ್ಲ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ರಾಜ್ಯದಲ್ಲಿನ ಅಭಿವೃದ್ಧಿ ಕಾರ‍್ಯಗಳ ಕುರಿತು ಮೋದಿ ಅವರಿಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾಗಿರುವ ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆ(kashi vishwanath dham project) ಉದ್ಘಾಟನೆಗೊಂಡಿದೆ. ಈ ಉದ್ಘಾಟನೆಗೆ ಪ್ರಧಾನಿ ಮೋದಿ, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅಹ್ವಾನ ನೀಡಿದ್ದರು. ಹೀಗಾಗಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ಆಡಳಿತಿರುವ ರಾಜ್ಯಗಳ(BJP Ruled states CM) ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಂದು(ಡಿ.14) ವಾರಾಣಸಿಯಲ್ಲಿ(Varanasi) ಮೋದಿ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ. 

Tap to resize

Latest Videos

undefined

ಸತತ ದಾಳಿ ಮೆಟ್ಟಿನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

ಮಧ್ಯಾಹ್ನ 2 ಗಂಟೆಗೆ ಭೋಜನದೊಂದಿಗೆ ಸಭೆ ಮುಗಿಯಲಿದೆ. ಹಲವು ರಾಜ್ಯದಳು 2022ರ ಆರಂಭದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿದೆ. ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ. 

ಆಯಾ ರಾಜ್ಯದ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಗಳ ಜೊತೆಗೆ ಇತ್ತೀಚೆಗಿನ ಚುನಾವಣೆಯಲ್ಲಿನ(Election) ಫಲಿತಾಂಶ ಹಾಗೂ ಮಾಹಿತಿಯನ್ನು ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ಮತ್ತೊಂದು ವಿಶೇಷ ಕಾರ್ಯಕ್ರಮ ಹಾಗೂ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಬಳಿಕ ವಾರಾಣಸಿಯಿಂದ  ನೇರವಾಗಿ ದೆಹಲಿಗೆ ತೆರಳಲಿದ್ದಾರೆ.

Modi In Varanasi: ಪ್ರಧಾನಿ ಮೋದಿಯಿಂದ ಗಂಗಾ ಆರತಿ, ದೃಶ್ಯ ವೈಭವಕ್ಕೆ ಎಣೆಯಿಲ್ಲ

ಕಾಶಿ ಸಮಾರಂಭದಲ್ಲಿ ಕರ್ನಾಟಕದ ಶ್ರೀಗಳು ಭಾಗಿ
ಕಾಶಿ ವಿಶ್ವನಾಥ ಧಾಮ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕದ ಸ್ವಾಮೀಜಿಗಳಾದ ಆದಿಚುಂಚನಗಿರಿ ನಿರ್ಮಲಾನಂದ ನಾಥ ಶ್ರೀಗಳು, ಬೆಂಗಳೂರು ಇಸ್ಕಾನ್‌ನ ಮಧುಪಂಡಿತ ದಾಸ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಬೆಂಗಳೂರು ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ, ಮೊದಲಾದವರು ಭಾಗಿಯಾಗಿದ್ದರು. ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಕೂಡ ಪಾಲ್ಗೊಂಡಿದ್ದರು.

ಭಾಷಣದಲ್ಲಿ ಮಧ್ವಾಚಾರ್ಯರ ಸ್ಮರಿಸಿದ ಮೋದಿ
ಕಾಶಿ ವಿಶ್ವನಾಥ ಧಾಮ ಉದ್ಘಾಟಿಸಿದ ಮೋದಿ ತಮ್ಮ ಭಾಷಣದಲ್ಲಿ ದ್ವೈತ ಸಿದ್ಧಾಂತ ಪ್ರತಿಪಾದಕ, ಉಡುಪಿಯ ಮಧ್ವಾಚಾರ್ಯರ ಸ್ಮರಣೆ ಮಾಡಿದರು. ‘ಕಾಶಿಗೆ ಹೋದರೆ ಪಾಪನಿವಾರಣೆ ಆಗುತ್ತದೆ’ ಎಂದು ಮಧ್ವರು ಹೇಳಿದ್ದರು ಎಂದು ಮೋದಿ ತಿಳಿಸಿದರು. ‘ದಕ್ಷಿಣ ಭಾರತದ ಮೇಲೆ ಕಾಶಿಯ ಪ್ರಭಾವ ಇದೆ. ಕಾಶಿಯ ಮೇಲೆ ದಕ್ಷಿಣ ಭಾರತದ ಪ್ರಭಾವ ಇದೆ. ‘ತೇನೋ ಪಯಾಥೇನ ಕದಾಚನಾತ್‌ ವಾರಾಣಸಿಂ ಪಾಪನಿವಾರಣ’.. ಎಂದು ಒಂದು ಗ್ರಂಥದಲ್ಲಿ ಶ್ಲೋಕ ಬರೆಯಲಾಗಿದೆ. ಕನ್ನಡ ಭಾಷೆಯಲ್ಲೂ ಇದನ್ನು ಹೇಳಲಾಗಿದೆ. ಸದ್ಗುರು ಮಧ್ವಾಚಾರ್ಯರು ಅವರ ಶಿಷ್ಯರ ಜತೆ ನಡೆದು ಹೋಗುತ್ತಿದ್ದಾಗ ‘ಕಾಶಿಯ ವಿಶ್ವನಾಥ ಪಾಪನಿವಾರಣ ಮಾಡುತ್ತಾನೆ’ ಎಂದಿದ್ದರು. ಅವರು ಕಾಶಿಯ ವೈಭವ ಹಾಗೂ ಮಹಿಮೆಯ ಬಗ್ಗೆಯೂ ಹೇಳಿದ್ದರು’ ಎಂದು ಪ್ರಧಾನಿ ಹೇಳಿದರು.

ಕಾಶಿಯ ‘ಆಡುಭಾಷೆ’ಯಲ್ಲಿ ಮೋದಿ ಭಾಷಣ!
ವಾರಾಣಸಿ: ಕಾಶಿಯಲ್ಲಿ ಹಿಂದಿ ಭಾಷೆಯ ಜತೆಗೆ ಭೋಜ್‌ಪುರಿ ಮಿಶ್ರಿತ ಭಾಷೆಯನ್ನೂ ಮಾತನಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಥ ಧಾಮ ಉದ್ಘಾಟನಾ ಭಾಷಣದಲ್ಲಿ ಕಾಶಿಯ ಸ್ಥಳೀಯ ಆಡು ಭಾಷೆಯಲ್ಲಿ ಕೆಲವು ಮಾತುಗಳನ್ನು ಹೇಳಿ ಗಮನ ಸೆಳೆದರು.

click me!