Srinagar Terror Attack ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ, 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!

Published : Dec 13, 2021, 07:31 PM ISTUpdated : Dec 13, 2021, 09:30 PM IST
Srinagar Terror Attack ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ, 12 ಮಂದಿಗೆ ಗಾಯ,ಇಬ್ಬರು ಹುತಾತ್ಮ, ಮೋದಿ ಸಂತಾಪ!

ಸಾರಾಂಶ

ಶ್ರೀನಗರದ ಝೆವಾನ್ ಬಳಿ ಪೊಲೀಸ್ ಬಸ್ ಮೇಲೆ ದಾಳಿ ಪುಲ್ವಾಮಾ ರೀತಿಯಲ್ಲಿ ಭೀಕರ ದಾಳಿಗೆ ಉಗ್ರರ ಯತ್ನ ದಾಳಿಯಲ್ಲಿ 2 ಪೊಲೀಸರು ಹುತಾತ್ಮ, 11 ಮಂದಿ ಗಂಭೀರ ಗಾಯ

ಶ್ರೀನಗರ(ಡಿ.13): ಪುಲ್ವಾಮಾ ಭೀಕರ ಉಗ್ರರ ದಾಳಿ ನೋವು ಇನ್ನೂ ಕರಗಿಲ್ಲ. ಭದ್ರತಾ ಪಡೆಗಳ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದಕಾ ದಾಳಿ ಇದಾಗಿತ್ತು. ಇದೀಗ ಈ ದಾಳಿಯನ್ನು ನೆಪಿಸುವ ರೀತಿಯಲ್ಲಿ ಶ್ರೀನಗರದ ಜೆವಾನ್(Zewan Polic camp) ಪೊಲೀಸ್ ಕ್ಯಾಂಪ್ ಬಳಿಯಲ್ಲಿ ಮತ್ತೊಂದು ಉಗ್ರರ ದಾಳಿ ನಡೆದಿದೆ. ಪೊಲೀಸರು ಸಾಗುತ್ತಿದ್ದ ಬಸ್(Police Bus) ಮೇಲೆ ಉಗ್ರರು ದಾಳಿ(Terror attack) ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇನ್ನು 11 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಝೆವಾನ್ ಪೊಲೀಸ್ ಕ್ಯಾಂಪ್‌ನಿಂದ ಹೊರಟ ಪೊಲೀಸ್ ಬಸ್ ಮೇಲೆ ಪಂಥಾ ಚೌಕ್ ಏರಿಯಾ ಬಳಿ ತಲುಪುವಷ್ಟರಲ್ಲೇ ಉಗ್ರರು ಬಸ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ತಮ್ಮಲ್ಲಿರುವ ಆಯುಧ ಕೈಗೆತ್ತಿಕೊಳ್ಳಲು ಅವಕಾಶ ನೀಡಲೇ ಇಲ್ಲ. ಸತತ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್‌ನಲ್ಲಿದ್ದ 14 ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿ ನಡೆಯುತ್ತಿದ್ದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದೆ. ಇತ್ತ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದಾಳಿ ಕುರಿತು ಕಾಶ್ಮೀರ ಝೋನ್ ಪೊಲೀಸ್ ಮಾಹಿತಿ ಹಂಚಿಕೊಂಡಿಕೊಂಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಗಂಗಾ ಆರತಿಯಲ್ಲಿದ್ದ ಮೋದಿಗೆ ದಾಳಿ ಮಾಹಿತಿ ಸಿಕ್ಕಿದೆ. ಈ ಕುರಿತು ಭದ್ರತಾ ಪಡೆಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

 

Article 370 Abrogation: 1,678 ವಲಸಿಗರು ಜಮ್ಮು ಕಾಶ್ಮೀರಕ್ಕೆ ವಾಪಸ್!

ತಕ್ಷಣವೇ ಗಾಯಗೊಂಡ 14 ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರ ಗಾಯಗೊಂಡ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. ಇತ್ತ 11 ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಂಥಾ ಚೌಕ್ ಏರಿಯಾವನ್ನು ಭದ್ರತಾ ಪಡೆಗಳು ಸುತ್ತುವರಿದಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಲು  ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ಆರಂಭಿಸಿದೆ. 

ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಶುಕ್ರವಾರ(ಡಿ.10) ಪೊಲೀಸ್ ಮೇಲೆ ಭಯೋತ್ಪಾದಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ಕಾದು ಕುಳಿತು ಪೊಲೀಸರ ಮೇಲೆ ನಡೆಸಿದ ದಾಳಿ ಇದಾಗಿತ್ತು. ಗುಲ್ಶನ್ ಚೌಕ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡ ಇಬ್ಬರು ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಪೊಲೀಸರ ಪ್ರಾಣ ಪಕ್ಷಿ ಹಾರಿಹೋಗಿತ್ತು.

 

ಎರಡು ದಿನದ ಅಂತರದಲ್ಲಿ ನಡೆದ ಎರಡನೇ ಅತೀ ದೊಡ್ಡ ಭಯೋತ್ಪದನಾ ದಾಳಿ ಇದಾಗಿದೆ. ಡಿಸೆಂಬರ್ 10 ರಂದು ಇಬ್ಬರು ಪೊಲೀಸರ ಮೇಲೆ ದಾಳಿ ನಡೆದಿದ್ದರೆ, ಇಂದು ಪೊಲೀಸರ್ ಬಸ್ ಮೇಲೆ ದಾಳಿ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗುತ್ತಿದೆ. ನಾಗರೀಕರನ್ನು ಗುರಿಯಾಗಿಸಿ, ಪೊಲೀಸರನ್ನು ಗುರಿಯಾಸಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಸೇನೆ ಕೂಡ ಕಾರ್ಯಾಚರಣೆ ನಡೆಸಿ ಉಗ್ರರ ಸದೆಬಡಿಯುತ್ತಿದೆ.

ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ:
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸುತ್ತಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡಲು ಮಹತ್ವದ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಉಗ್ರರ ದಾಳಿ ಹತ್ತಿಕ್ಕುವುದು ಸವಾಲಾಗಿ ಪರಿಣಮಿಸುತ್ತಿದೆ. ಕಳೆದ 3 ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 1,033 ಭಯೋತ್ಪಾದಕ ದಾಳಿ ನಡೆದಿದೆ.  2020ರಲ್ಲಿ 195 ಉಗ್ರರ ದಾಳಿ ನಡೆದಿದೆ.  2019ರಲ್ಲಿ 90 ಭಾರತೀಯ ಭದ್ರತಾ ಪಡೆ ಯೋಧರು ಹುತಾತ್ಮಾರಾಗಿದ್ದಾರೆ. 2020ರಲ್ಲಿ 62 ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನು ಕಳೆದ ತಿಂಗಳ ವರೆಗೆ 2021ರಲ್ಲಿ 35 ಯೋಧರು ಹುತಾತ್ಮರಾಗಿದ್ದಾರೆ.

Anti terror operation; ಉಗ್ರರ ನೆರವು ನೀಡುತ್ತಿದ್ದ ಇಬ್ಬರು ಶ್ರೀನಗರ ಉದ್ಯಮಿಗಳ ಹತ್ಯೆ!

ಇತ್ತೀಚೆಗೆ ನಡೆದ ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಹತ್ಯೆ ಮಾಡಿತ್ತು. ಇದಕ್ಕೂ ಮೊದಲು ಶ್ರೀನಗರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಸೇನೆ ಹತ್ಯೆ ಮಾಡಿತ್ತು. ಸೇನಾ ಕಾರ್ಯಾಚರಣೆ ಭಾರಿ ಪರ ವಿರೋಧಕ್ಕೆ ಕಾರಣವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ