ಕುರುವನ್ನೂರ್‌ ಸೇವಾ ಸಹಕಾರ ಬ್ಯಾಂಕ್‌ ಹಗರಣ: ಕೇರಳದಲ್ಲಿ ಸಿಪಿಎಂಗೆ ಸೇರಿದ ಜಮೀನು, ಠೇವಣಿ ಜಪ್ತಿ

Published : Jun 30, 2024, 09:54 AM ISTUpdated : Jun 30, 2024, 09:57 AM IST
ಕುರುವನ್ನೂರ್‌ ಸೇವಾ ಸಹಕಾರ ಬ್ಯಾಂಕ್‌ ಹಗರಣ:  ಕೇರಳದಲ್ಲಿ ಸಿಪಿಎಂಗೆ ಸೇರಿದ ಜಮೀನು, ಠೇವಣಿ ಜಪ್ತಿ

ಸಾರಾಂಶ

ಕರುವನ್ನೂರ್ ಸೇವಾ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ಕೇರಳದಲ್ಲಿ ಆಡಳಿತದಲ್ಲಿರು ಸಿಪಿಎಂಗೆ ಸೇರಿದ ಆಸ್ತಿ ಹಾಗೂ ಠೇವಣಿಯನ್ನು ಜಪ್ತಿ ಮಾಡಿದೆ.

ಪಿಟಿಐ ಕೊಚ್ಚಿ: ಕರುವನ್ನೂರ್ ಸೇವಾ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.), ಕೇರಳದ ಆಡಳಿತಾರೂಢ ಸಿಪಿಎಂನ 10 ಲಕ್ಷ ರು. ಮೌಲ್ಯದ ಒಂದು ಜಮೀನು ಹಾಗೂ ಮತ್ತು 63 ಲಕ್ಷ ರು. ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿದೆ.ಈ ಆಸ್ತಿಗಳನ್ನು ಜಪ್ತಿ ಮಾಡಲು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಿಪಿಎಂ ತಾನು ಯಾವುದೇ ತಪ್ಪು ಮಾಡಿಲ್ಲ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಜಪ್ತಿ ಮಾಡಿದ ಸ್ತಿಗಳಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 10 ಲಕ್ಷ ರು. ಮೌಲ್ಯದ ಜಮೀನು ಮತ್ತು ಪಕ್ಷದ ಐದು ‘ರಹಸ್ಯ’ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ 63 ಲಕ್ಷ ರು. ಠೇವಣಿ ಇವೆ.

ಏನಿದು ಹಗರಣ?:

ಕುರುವನ್ನೂರ್‌ ಸಹಕಾರಿ ಬ್ಯಾಂಕ್‌ನಲ್ಲಿ ಸಿಪಿಎಂ, ತನಗೆ ಬೇಕಾದವರಿಗೆ ಅಕ್ರಮವಾಗಿ ಸಾಲ ಕೊಡಿಸಿದೆ. ಸಾಲ ಕೊಡಿಸಿದ್ದಕ್ಕೆ ಪ್ರತ್ಯುಪಕಾರವಾಗಿ ಸಾಲಗಾರರು ಸಿಪಿಎಂಗೆ ಲಂಚ ನೀಡಿದ್ದಾರೆ. ಈ ಲಂಚದ ಹಣದಿಂದ ತನ್ನ ಪಕ್ಷದ ಕಚೇರಿ ನಿರ್ಮಿಸಲು ಸಿಪಿಎಂ ತ್ರಿಶೂರ್‌ ಜಿಲ್ಲೆಯಲ್ಲಿ ಜಮೀನು ಖರೀದಿಸಿತ್ತು. ಹೀಗಾಗಿ ಈ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇ.ಡಿ. ಬಂಧಿಸಿದೆ. ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿಯು ಕ್ರಮ ಜರುಗಿಸಲಾಗಿದೆ ಎಂದು ಅವು ತಿಳಿಸಿವೆ.

ದೇಶವನ್ನೇ ಕತ್ತಲಲ್ಲಿಟ್ಟ ಇಂದಿರಾ ನಮ್ಮನ್ನೂ ಜೈಲಿಗೆ ಹಾಕಿದ್ದರು, ರಾಹುಲ್ ಗಾಂಧಿಗೆ ಪಿಣರಾಯಿ ತಿರುಗೇಟು!

ದೇಶವಿರೋಧಿಗಳು, ಭ್ರಷ್ಟರ ಶಿಕ್ಷಿಸುವ ಕಾಯ್ದೆಗಳು ರದ್ದು: ಸಿಪಿಎಂ ಪ್ರಣಾಳಿಕೆಯಲ್ಲೇನಿದೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ
18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು