ಪುಣೆ: 'ನಮ್ಮವರು' ಸಂಘದಿಂದ ಕರ್ನಾಟಕ ರಾಜ್ಯೋತ್ಸವದ ವಿಜೃಂಭಣೆಯ ಆಚರಣೆ!

By Ravi JanekalFirst Published Dec 5, 2023, 8:08 PM IST
Highlights

ನಮ್ಮವರು ಸಂಘದಿಂದ ನಾಡ ಹಬ್ಬ ಕರ್ನಾಟಕ ರಾಜ್ಯೋತ್ಸವವನ್ನು ಈ ಪುಣೆ ನಗರಿಯ ಚಿಂಚವಾಡ ಭಾಗದಲ್ಲಿರುವ ಎಲ್ಪ್ರೋ ಸಭಾಗ್ರಹದಲ್ಲಿ ಅಭೂತಪೂರ್ವವಾಗಿ ಆಚರಿಸಲಾಯಿತು.  ಡಿ.2ರಂದು 'ನಮ್ಮವರು' ಸಂಘ ಪುಣೆಯಲ್ಲಿ ತಮ್ಮ ೭ನೇ ವರ್ಷದ "ನಮ್ಮವರ ಹಬ್ಬ ಕನ್ನಡಿಗರ ಹಬ್ಬ" ಕಾರ್ಯಕ್ರಮದಲ್ಲಿ ಸುಮಾರು ೬೦೦ ಕ್ಕೂ ಹೆಚ್ಚು ಕನ್ನಡಿಗರು ಭಾಗಿಯಾಗಿ ಸಂಭ್ರಮಿಸಿದರು.

ಪುಣೆ (ಡಿ.5): ನಮ್ಮವರು ಸಂಘದಿಂದ ನಾಡ ಹಬ್ಬ ಕರ್ನಾಟಕ ರಾಜ್ಯೋತ್ಸವವನ್ನು ಈ ಪುಣೆ ನಗರಿಯ ಚಿಂಚವಾಡ ಭಾಗದಲ್ಲಿರುವ ಎಲ್ಪ್ರೋ ಸಭಾಗ್ರಹದಲ್ಲಿ ಅಭೂತಪೂರ್ವವಾಗಿ ಆಚರಿಸಲಾಯಿತು.  ಡಿ.2ರಂದು 'ನಮ್ಮವರು' ಸಂಘ ಪುಣೆಯಲ್ಲಿ ತಮ್ಮ ೭ನೇ ವರ್ಷದ "ನಮ್ಮವರ ಹಬ್ಬ ಕನ್ನಡಿಗರ ಹಬ್ಬ" ಕಾರ್ಯಕ್ರಮದಲ್ಲಿ ಸುಮಾರು ೬೦೦ ಕ್ಕೂ ಹೆಚ್ಚು ಕನ್ನಡಿಗರು ಭಾಗಿಯಾಗಿ ಸಂಭ್ರಮಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ  ಆಗಮಿಸಿದಂತಹ ವಾವ್ ಪವರ್ ಯೋಗದ ಸಂಸ್ಥಾಪಕಿಯಾದ ಡಾ. ಭಾಗೀರಥಿ ಕನ್ನಡತಿ ಖ್ಯಾತ ಯೋಗ ಗುರು, ಗುರುಮಾ ಎಂದೇ ಪ್ರಪಂಚಾದ್ಯಂತ ಪ್ರಸಿದ್ಧಿಯಾದವರು ಹಾಗೂ ಜಾನಪದ ಸಂಜೀವಿನಿ ಖ್ಯಾತಿಯ ಶ್ರೀ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅವರು ಜಾನಪದ ಹಾಸ್ಯ ಕಲಾವಿದರು ಮತ್ತು ಹಾಡುಗಾರರು. ನಮ್ಮವರು ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ಹಿರೇಮಠ, ಶ್ರೀ ಶಿವಲಿಂಗ ಢವಳೇಶ್ವರ ಮತ್ತು ಶ್ರೀ ಶ್ರೀಕಾಂತ ಹಾರಕೊಡೆ ಇವರುಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

Latest Videos

ನಿರಾಯಾಸದಿಂದ ನಿರೂಪಣೆಯಲ್ಲಿ ನಿಪುಣರಾದ ಅವಿನಾಶ ಹೊಸಮನಿ ಅವರು ಅಥಿತಿಗಳಿಗೆ, ಗಣ್ಯರಿಗೆ ಹಾಗು ಜನಸಮೂಹಕ್ಕೆ ಸ್ವಾಗತ ಕೋರಿದರು. ನಮ್ಮವರು ಸಂಘದ ಸದಸ್ಯರು ನಾಡಗೀತೆ ಹಾಡಿದರು ಹಾಗೆ ಶರತ ಐರಾಣಿ ಅವರು ಸಭಾಗೃಹದಲ್ಲಿನ ಸುರಕ್ಷಾ ಕ್ರಮಗಳನ್ನು ತಿಳಿಸಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ 75ರ ಅಮೃತ ಸಂಭ್ರಮ; ಲೋಗೋ ಅನಾವರಣಗೊಳಿಸಿದ ರಾಜ್ಯಪಾಲರು

ಡಾ.ಭಾಗೀರಥಿ ಕನ್ನಡತಿ ಅವರು ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳುವ ಬಗ್ಗೆ ಕೆಲವು ಸಲಹೆಗಳನ್ನು ಕನ್ನಡಿಗರ ಮನ ಮುಟ್ಟುವಂತೆ ತಿಳಿಸಿದರು ಹಾಗೂ ನಮ್ಮವರು ಸಂಘದ ಅಧ್ಯಕ್ಷರಾದ ಬಸವರಾಜ ಹಿರೇಮಠ ಅವರು ನಮ್ಮವರು ಸಂಘ ಇಲ್ಲಿಯವರೆಗೂ ಸಾಗಿ ಬಂದ ದಾರಿ ಹಾಗು ನಮ್ಮವರು ಸಂಘದಲ್ಲಿನ ಬೇರೆ ಬೇರೆ ವಿಭಾಗಗಳಾದ ಕಾಯಕವೇ ಕೈಲಾಸ, ಜನುಮದ ಜೋಡಿ, ಕೈಗಾರಿಕಾ ಉದ್ಯಮಿಗಳು, ಕನ್ನಡ ಕಲಿ, ಕನ್ನಡ ಸಾಹಿತ್ಯ ಹಾಗು ಕರ್ನಾಟಕ ಮಕ್ಕಳ ಸಾಹಿತ್ಯ ಪುಣೆ ಇವುಗಳಿಂದ ಕನ್ನಡ ಜನರು ಪಡೆದ ಸಮಾಜ ಸೇವೆಗಳನ್ನು ಕುರಿತು ವಿವರಣೆ ನೀಡಿದರು.

ನಂತರ ಪುಟಾಣಿ ಮಕ್ಕಳಿಂದ ಕರ್ನಾಟಕದ ಸಾಂಸ್ಕೃತಿಕ ಮತ್ತು ಸ್ವತಂತ್ರ ಹೋರಾಟಗಾರರ, ಸಂತರ, ಸಾಹಿತಿಗಳ ವೇಷ ಧರಿಸಿ ಕನ್ನಡದಲ್ಲಿ ಸಂಭಾಷಣೆಯನ್ನು ಹೇಳಲಾಯಿತು ಮತ್ತು ನಮ್ಮವರು ಸಂಘದ ಮಹಿಳೆಯರಿಂದ ನೃತ್ಯವನ್ನು ಪ್ರದರ್ಶಿಸಲಾಯಿತು. ಮುಖ್ಯ ಅತಿಥಿಗಳು ಹಾಗೂ ಕನ್ನಡದ ಸ್ಥಾನೀಯ ಗಣ್ಯರಿಂದ  ಸಮಾಜ ಸೇವಕರಿಗೆ ಮತ್ತು ಕಾರ್ಯಕ್ರಮದ ಪ್ರಾಯೋಜಕರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ಶ್ರೀ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅವರು ತಮ್ಮ ಮಧುರ ಕಂಠದಿಂದ ಜಾನಪದ ಶೈಲಿಯ ಭಾವನಾತ್ಮಕ ಹಾಡುಗಳು, ಜೀವನದ ಸಾರ ಹೇಳುವ ಹಾಡುಗಳು ಹಾಗೆ ಹಾಸ್ಯಭರಿತ ಹಾಡುಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕನ್ನಡ ಜನರ ಮನ ತಟ್ಟುವಂತೆ ಸೊಗಸಾಗಿ ಹಾಡಿ ರಂಜಿಸಿದರು.  ಇದರ ಮಧ್ಯೆ ಶರತ ಐರಾಣಿ, ಬಿಂದುಮಾಧವ ದೇಸಾಯಿ ಹಾಗು ಪರಾಗ ಮುಳುಗುಂದ ಅವರ ಸ್ವಾರಸ್ಯಕರ ಸಂಭಾಷಣೆಗಳು ಕಾರ್ಯಕ್ರಮಕ್ಕೆ ಬಂದವರಿಗೆ ಚಿನಕುರಳಿ ಕೊಡುವಲ್ಲಿ ಯೆಶಸ್ವಿಯಾದರು. ನಂತರ ಮತ್ತೋರ್ವ ಹಾಸ್ಯಕಲಾವಿದ ಮಾಲತೇಶ ಕುಲ್ಕರ್ಣಿ ಅವರು ತಮ್ಮ ವಿನೂತನ ಶೈಲಿಯಲ್ಲಿ ಕನ್ನಡದ ಆಟೋ ರಾಜ ಎಂದೇ ಹೆಸರುವಾಸಿಯಾದ ನಟ  ದಿ. ಶಂಕರನಾಗ್ ಅವರ ಮಿಮಿಕ್ರಿ ಮಾಡಿ ನಗೆ ಚಟಾಕೆಗಳನ್ನು ಹೇಳಿ ನೆರೆದಿರುವ ಜನರನ್ನು ನಕ್ಕು ನಲಿಸಿದರು. ಕೊನೆಯಲ್ಲಿ ನಮ್ಮವರು ಸಂಘದ ಗಾಯಕರುಗಳಿಂದ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರೆ ಇನ್ನೂ ಕೆಲವರು ತಾಳಕ್ಕೆ ತಕ್ಕ ಹೆಜ್ಜೆ ಹಾಕಿ ಜನರ ಗಮನ ಸೆಳೆದರು.

 

'ಕನ್ನಡ ತಾಯಿ ಭಾರತಾಂಬೆ' ಹೆಸರಿನ ಕಾರ್ಯಕ್ರಮದಲ್ಲಿ ಅಶ್ಲೀಲ ಕುಣಿತ; ಕನ್ನಡ ಸಂಘಟನೆ ವಿರುದ್ಧ ಸಾರ್ವಜನಿಕರ ಆಕ್ರೋಶ!

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಿದಂತಹ ಬಸವರಾಜ ಪಟ್ಟಣಶೆಟ್ಟಿ, ಶರತ್ ಐರಾಣಿ, ಅವಿನಾಶ ಹೊಸಮನಿ,  ಮುರುಗೇಶ ಗಿರಿಸಾಗರ್, ಅಮಿತ ಇನಾಮದಾರ,  ಪರಾಗ ಮುಳುಗುಂದ , ಬಿಂದುಮಾಧವ ದೇಸಾಯಿ, ಜಾನ್ಸಿ ರಾವ್, ನೀಲಾ ಹಿರೇಮಠ ಹಾಗು ಇನ್ನಿತರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸುಂದರ, ಸುಮಧುರ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ನಮ್ಮವರು ಸಂಘ ಇದೇ ರೀತಿ ಪ್ರತಿ ವರ್ಷ ವಿನೂತನ ಕಾರ್ಯಕ್ರಮಗಳನ್ನು ಹೊರನಾಡ ಕನ್ನಡಿಗರಿಗಾಗಿ ನಡೆಸಲು ಎಲ್ಲಾ ರೀತಿಯ ಸಹಕಾರಗಳನ್ನು ಆ ಭಗವಂತ ನಮ್ಮವರು ಸಂಘಕ್ಕೆ ಮತ್ತಷ್ಟು ಉತ್ಸಾಹ ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥಿಸೋಣ.

click me!