ಆರಂಭದಲ್ಲಿ ಭಾರತ ಸರ್ಕಾರದಿಂದ javeria khanum ವೀಸಾ ನಿರಾಕರಿಸಲಾಗಿತ್ತು. ಬಳಿಕ ಪಂಜಾಬ್ ಮೂಲದ ಸಾಮಾಜಿಕ ಕಾರ್ಯಕರ್ತನ ನೆರವಿನೊಂದಿಗೆ 45 ದಿನಗಳ ವೀಸಾವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮದುವೆಯ ವಿಧಿ ಮುಗಿದ ಬಳಿಕ ದಂಪತಿಗಳು ವೀಸಾವನ್ನು ವಿಸ್ತರಿಸಲು ಯೋಜಿಸಿದ್ದಾರೆ.
ನವದೆಹಲಿ (ಡಿ.5): ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಪಾಕ್ ನಡುವಿನ ಗಡಿಯಾಚೆಗಿನ ಸಂಬಂಧ ಹೆಚ್ಚುತ್ತಿದೆ. ಸೀಮಾ ಹೈದರ್ ನೇಪಾಳ ಮಾರ್ಗದ ಮೂಲಕ ಭಾರತೀಯ ವ್ಯಕ್ತಿಯನ್ನು ಮದುವೆಯಾದ ಬಳಿಕ ಮಂಗಳವಾರ ಮತ್ತೊಬ್ಬ ಪಾಕಿಸ್ತಾನಿ ಮಹಿಳೆ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಮದುವೆಯಾಗುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪಾಕಿಸ್ತಾನದ ಕರಾಚಿಯ ನಿವಾಸಿ ಜವಾರಿಯಾ ಖಾನಮ್ ಅವರು ಅಮೃತಸರದ ಅಟ್ಟಾರಿ-ವಾಘಾ ಗಡಿಯನ್ನು ದಾಟಿ ಭಾರತಕ್ಕೆ ಆಗಮಿಸಿದ್ದಾರೆ. ಅಲ್ಲಿ ಅವರನ್ನು ಅವರ ಭಾವಿ ಪತಿ ಸಮೀರ್ ಖಾನ್ ಅವರ ಕುಟುಂಬ ಸ್ವಾಗತಿಸಿದೆ. ಪ್ರಸ್ತುತ, ಜವೇರಿಯಾ ಖಾನ್ ಅವರ ಕುಟುಂಬವು ಪಾಕಿಸ್ತಾನದ ಗುರುದಾಸ್‌ಪುರದ ಹಳ್ಳಿಯಲ್ಲಿ ನೆಲೆಸಿದೆ. ಅವರೂ ಕೂಡ ಭಾರತದ ಗಡಿಯನ್ನು ದಾಟಿದ ಬಳಿಕ, ಎರಡೂ ಕುಟುಂಬಗಳು ಕೋಲ್ಕತ್ತಾಗೆ ಪ್ರಯಾಣಿಸಲು ಉದ್ದೇಶಿಸಿವೆ, ಅಲ್ಲಿ ಇಸ್ಲಾಮಿಕ್ ಸಂಪ್ರದಾಯಗಳನ್ನು ಅನುಸರಿಸಿ ದಂಪತಿಗಳ ವಿವಾಹ ಸಮಾರಂಭ ನಡೆಯಲಿದೆ.
ಜವೇರಿಯಾ ಖಾನ್‌ಗೆ ಆರಂಭದಲ್ಲಿ ಭಾರತ ಸರ್ಕಾರ ವೀಸಾ ನೀಡಲು ಒಪ್ಪಿರಲಿಲ್ಲ. ಬಳಿಕ ಜವೇರಿಯಾ ಖಾನ್ ಈ ವಿಚಾರವಾಗಿ ಪಂಜಾಬ್ ಮೂಲದ ಸಾಮಾಜಿಕ ಕಾರ್ಯಕರ್ತನ ನೆರವಿನೊಂದಿಗೆ 45 ದಿನಗಳ ವೀಸಾವನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ಮದುವೆಯ ವಿಧಿವಿಧಾನಗಳೆಲ್ಲವೂ ಮುಕ್ತಾಯವಾದ ಬಳಿಕ, ದಂಪತಿಗಳು ವೀಸಾವನ್ನು ವಿಸ್ತರಣೆ ಮಾಡಲು ಯೋಜನೆ ರೂಪಿಸಿದ್ದಾರೆ.
ಹಾಗಂತ ಭಾರತ-ಪಾಕ್ ನಡುವೆ ನಡೆಯುತ್ತಿರುವ ಮೊದಲ ಗಡಿಯಾಚೆಗಿನ ಮದುವೆ ಇದಲ್ಲ. ಪಾಕಿಸ್ತಾನಿ ಪ್ರಜೆಯಾದ ಸೀಮಾ ಹೈದರ್ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ದಾಟಿದಾಗ ಮತ್ತು ನಂತರ ನೋಯ್ಡಾದಿಂದ ಸಚಿನ್ ಮೀನಾ ಅವರನ್ನು ವಿವಾಹವಾದ ಬಳಿಕ ಇಂಥ ಸಂಬಂಧಗಳ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಿವೆ. ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಅವರ ರಿಲೇಷನ್‌ಷಿಪ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಮಾತ್ರವಲ್ಲದೆ, ಭಾರತದ ತನಿಖಾ ಸಂಸ್ಥೆಗಳು ಕೂಡ ಸೀಮಾ ಹೈದರ್ ಭಾರತಕ್ಕೆ ಆಗಮಿಸುವ ಉದ್ದೇಶದ ಬಗ್ಗೆ ಸಾಕಷ್ಟು ವಿಚಾರಣೆ ನಡೆಸಿತ್ತು.
undefined
32 ವರ್ಷದ ಮಿಜೋರಾಂನ ಶಾಸಕಿ ಬ್ಯಾರಿಲ್ ವನ್ನೈಸಂಗಿ, ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ ಈ ಸುರಸುಂದರಾಂಗಿ!
ಅದೇ ರೀತಿ, ಈಗ ಫಾತಿಮಾ ಎಂದು ಕರೆಯಲ್ಪಡುವ ಅಂಜು ತನ್ನ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಳು. ಇತ್ತೀಚೆಗೆ ಈಕೆ ವಾಘಾ ಬಾರ್ಡರ್ ಮೂಲಕ ಭಾರತಕ್ಕೆ ಮರಳಿದ್ದಾರೆ. ಏಜೆನ್ಸಿಗಳ ವಿಚಾರಣೆಯ ನಂತರ, ಆಕೆಯನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ. ಆರಂಭದಲ್ಲಿ ಅಂಜು ಪಾಕಿಸ್ತಾನದಲ್ಲಿ ಮದುವೆಯಾಗುವ ಯೋಜನೆಗಳನ್ನು ನಿರಾಕರಿಸಿದ್ದರಾದರೂ ಆ ಬಳಿಕ ವೀಸಾ ಮುಕ್ತಾಯದ ಬಳಿಕ ಭಾರತಕ್ಕೆ ವಾಪಸಾಗುವುದಾಗಿ ತಿಳಿಸಿದ್ದರು. ಆಕೆ ಈ ಹೇಳಿಕೆ ನೀಡಿದ್ದ ಒಂದೇ ದಿನದಲ್ಲಿ ಪಾಕಿಸ್ತಾನಿ ಮಾಧ್ಯಮಗಳು ಅಂಜು ಹಾಗೂ ನಸ್ರುಲ್ಲಾ ಮದುವೆಯಾಗಿರುವ ವಿಡಿಯೋವನ್ನು ಪ್ರಸಾರ ಮಾಡಿತ್ತು. ವಿವಾಹಕ್ಕೂ ಮುನ್ನ ಅಂಜು ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದರು.
ಯುಟ್ಯೂಬ್‌ನಿಂದ ಸೀಮಾ ಹೈದರ್‌ಗೆ ಸಿಕ್ಕಿತು ಮೊದಲ ಸಂಬಳ