ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!

By Suvarna NewsFirst Published Dec 5, 2023, 7:54 PM IST
Highlights

ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಧ್ವಜ, ಎರಡು ಸಂವಿಧಾನ ಹೇಗೆ ಸಾಧ್ಯ? ಈ ಪ್ರಮಾದವನ್ನು ಮೋದಿ ಸರಿಪಡಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಬಿಲ್ ಕುರಿತು ಮಾತನಾಡಿದ ಅಮಿತ್ ಶಾ, ಹಲವು ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. 

ನವದೆಹಲಿ(ಡಿ.05) ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಯಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಟಿಎಂಸಿ ಸಂಸದ ಸೌಗತಾ ರೇ ಪ್ರಶ್ನೆಗ ಉತ್ತರಿಸಿದ ಅಮಿತ್ ಶಾ, ಈ ದೇಶದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ ಹಾಗೂ ಎರಡು ಧ್ವಜ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಯಾರು ಇದನ್ನು ಮಾಡಿದ್ದಾರೋ, ಇದು ಬರಿ ತಪ್ಪಲ್ಲ ಪ್ರಮಾದ. ಈ ಪ್ರಮಾದವನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮೀಸಲಾತಿ ತಿದ್ದುಪಡಿ ಮಸೂದೆ ಚರ್ಚೆ ವೇಳೆ ಅಮಿತ್ ಶಾ ನೀಡಿದ ಉತ್ತರ ಸದನವನ್ನೇ ಸೈಲೆಂಟ್ ಮಾಡಿತ್ತು. 1950 ರಿಂದ ನಾವು ಪದೇ ಪದೇ ಈ ವಿಚಾರ ಹೇಳುತ್ತಿದ್ದೇವೆ. ಈ ದೇಶಕ್ಕೆ ಒಂದು ಪ್ರಧಾನಿ, ಒಂದು ಸಂವಿಧಾನ ಹಾಗೂ ಒಂದು ಧ್ವಜ ಮಾತ್ರ ಇರಬೇಕು ಎಂದು ಹೇಳುತ್ತಲೇ ಬಂದಿದ್ದೇವೆ. ತಪ್ಪು ನಡೆದಿತ್ತು. ಅದನ್ನು ಪ್ರಧಾನಿ ನರೇಂದ್ರ ಮೋದಿ ಸರಿಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

Latest Videos

1947ರ ಬಳಿಕ ಮೊದಲ ಬಾರಿಗೆ ಕಾಶ್ಮೀರ ಗಡಿಯ ಶಾರಾದಾ ದೇಗುಲದಲ್ಲಿ ನವರಾತ್ರಿ ಪೂಜೆ!

ಅಮಿತ್ ಶಾ ಕೇಂದ್ರ ಗೃಹ ಸಚಿವರಾದ ಬಲಿಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಲಾಗಿತ್ತು. ಬಳಿಕ ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಇದಾದ ಬಳಿಕ ಕಣಿವೆ ರಾಜ್ಯದ ಮೇಲೆ ಕೇಂದ್ರ ಸರ್ಕಾರ ಮಹತ್ತರ ಬದಲಾವಣೆ ಮಾಡಿದೆ. ಪ್ರತಿ ದಿನ ಕಲ್ಲು ತೂರಾಟ, ಭಯೋತ್ಪಾದಕರ ಪರ ಘೋಷಣೆಗಳು, ಬಾಂಬ್ ಸ್ಪೋಟ, ಗುಂಡಿನ ದಾಳಿ ನಡೆಯುತ್ತಿದ್ದ ರಾಜ್ಯದಲ್ಲಿಗ ಶಾಂತಿ ನೆಲೆಸಿದೆ. ಹಲವು ಉಗ್ರ ಚಟುವಟಿಕೆ, ದಾಳಿ ವರದಿಯಾದರೂ ಪ್ರಮಾಗಳು ಕಡಿಮೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮಸೂದೆ ಕುರಿತು ಚರ್ಚೆಯಲ್ಲಿ ಮಾತನಾಡಿದ ಸೌಗತ್ ರಾಯ್ ಭಾರತದ ಮೊದಲ ಕೈಗಾರಿಕೆ ಮಂತ್ರಿ ಶ್ಯಾಮ್ ಪ್ರಸಾದ್ ಮುಖರ್ಜಿ ಘೋಷಣಾ ವಾಕ್ಯವನ್ನು ರಾಜಕೀಯ ಘೋಷಣೆ ಎಂದಿದ್ದಾರೆ. ಜವಾಹರ್ ಲಾಲ್ ನೆಹರೂ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ, ಯಾವತ್ತೂ ಭಾರತಕ್ಕೆ ಒಂದು ಪ್ರಧಾನಿ, ಒಂದು ಸಂವಿಧಾನ, ಒಂದು ಧ್ವಜ( ಏಕ್ ಪ್ರಧಾನ್, ಏಕ್ ನಿಶಾನ್, ಏಕ್ ವಿಧಾನ್) ಎಂಬ ಘೋಷಣೆ ಮೊಳಗಿಸಿದ್ದರು. ಈ ಮೂಲಕ ಭಾರತ ಹಾಗೂ ಕಾಶ್ಮೀರದಲ್ಲಿ ಎರಡೆರಡು ಸಂವಿಧಾನ, ಎರೆಡೆರು ಪ್ರಧಾನಿಗಳು ಇರಲು ಸಾಧ್ಯವಿಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಈ ಇಬ್ಬಗೆ ನೀತಿ ಸರಿಯಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದರು. 

ನಿಂತಲ್ಲೇ ಬೆವರಿದ ಪಾಕಿಸ್ತಾನ, PoK ತೊರೆಯಲು ವಿಶ್ವಸಂಸ್ಥೆಯಲ್ಲಿ ವಾರ್ನಿಂಗ್ ನೀಡಿದ ಭಾರತ!

ಮುಖರ್ಜಿ ಈ ಸ್ಲೋಗನ್ ರಾಜಕೀಯ ಘೋಷಣೆ ಎಂದು ಸೌಗತ್ ರಾಯ್ ಹೇಳಿದ್ದರು. ಈ ಮಾತಿಗೆ ಕೆರಳಿದ ಅಮಿತ್ ಶಾ, ಭಾರತದಲ್ಲಿ ಎರಡು ಪ್ರಧಾನಿ, ಎರಡು ಸಂವಿಧಾನ ಹಾಗೂ ಎರಡು ಧ್ವಜ  ಇರಲು ಸಾಧ್ಯವೇ ಎಂದು ಮರು ಪ್ರಶ್ನಿಸಿದ್ದಾರೆ. 
 

click me!