ಫುಟ್ಬಾಲ್ ಪಟು, ದಿವಂಗತ ಡಿಯಾಗೋ ಮರಡೋನಾ ಕಳೆದುಹೋದ ವಾಚ್ ಅಸ್ಸಾಂನಲ್ಲಿ ಪತ್ತೆಯಾಗಿದೆ. 900 ಸಿಬಬ್ಬಂದಿ ವಜಾಗೊಳಿಸಿದ ಸಿಇಓಗೆ ಕಂಪನಿ ಗೇಟ್‌ಪಾಸ್ ನೀಡಿದೆ. ಜಯಲಲಿತಾರ ಸೊಸೆ ದೀಪಾ ಜಯಕುಮಾರ್
ಪೋಯಸ್ ಗಾರ್ಡನ್ ಕೀ ಪಡೆದಿದ್ದಾರೆ. ರಾಜ್ಯದಲ್ಲಿ ಮತ್ತೆ ಮೂರು ದಿನ ಮಳೆ ಆತಂಕ, ರಶ್ಮಿಕಾ ಮಂದಣ್ಣ ವಿರುದ್ಧ ನೆಟ್ಟಿಗರು ಗರಂ ಸೇರಿದಂತೆ ಡಿಸೆಂಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Vishal Garg: ಝೂಮ್ ಕಾಲ್ ಮೂಲಕ 900 ಸಿಬ್ಬಂದಿ ವಜಾಗೊಳಿಸಿದ್ದ ಸಿಇಓಗೆ ಗೇಟ್ ಪಾಸ್?
undefined
ಕಳೆದ ವಾರ ಬೆಟರ್ ಡಾಟ್ ಕಾಮ್ (Better.com) ಕಂಪನಿ ಸಿಇಓ ವಿಶಾಲ್ ಗರ್ಗ್ (Vishal Garg) ಝೂಮ್ ಮೀಟಿಂಗ್‌ನಲ್ಲಿ 900 ಸಿಬ್ಬಂದಿಗಳನ್ನು ವಜಾಗೊಳಿಸಿದ್ದರು. ಝೂಮ್ ಮೀಟಿಂಗ್ ಆರಂಭವಾಗುತ್ತಿದ್ದಂತೆಯೇ ಸಿಇಓ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದರು. ಇದು ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಪರ ವಿರೊಧದ ಚರ್ಚೆಗಳು ನಡೆದಿದ್ದವು. ಈ ಬೆಳವಣಿಗೆ ನಂತರ ಬೆಟರ್ ಡಾಟ್ ಕಾಮ್ ಸಿಇಓ ವಿಶಾಲ್ ಗಾರ್ಗ್ ಕ್ಷಮೆ ಕೂಡ ಕೇಳಿದ್ದರು.
Diego Maradona Watch : ಕಳೆದುಹೋಗಿದ್ದು ದುಬೈನಲ್ಲಿ, ಸಿಕ್ಕಿದ್ದು ಅಸ್ಸಾಂನಲ್ಲಿ!
ದುಬೈ ಪೊಲೀಸರೊಂದಿಗೆ (Dubai Police) ಕೆಲಸ ಮಾಡಿದ ಅಸ್ಸಾಂ ಪೊಲೀಸ್ (Assam Police), ಫುಟ್ ಬಾಲ್ ದಿಗ್ಗಜ (Football Legend) ದಿವಂಗತ ಡಿಯಾಗೊ ಮರಡೋನಾ (Diego Maradona) ಅವರಿಗೆ ಸೇರಿದ ಲಿಮಿಟೆಡ್ ಎಡಿಷನ್ ಹೆರಿಟೇಜ್ ಲಕ್ಷುರಿ ವಾಚ್ ಅನ್ನು ಅಸ್ಸಾಂನಲ್ಲಿ(Assam) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
Jayalalithaa Poes Garden: ಪೋಯಸ್ ಗಾರ್ಡನ್ ಕೀ ಪಡೆದ ಜಯಲಲಿತಾರ ಸೊಸೆ ದೀಪಾ ಜಯಕುಮಾರ್
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಕೀಗಳನ್ನು ಜಯಲಲಿತಾ ಅವರ ಸೊಸೆ ದೀಪಾ ಜಯಕುಮಾರ್ (Deepa Jayakumar) ಹಾಗೂ ಅಳಿಯ ದೀಪಕ್ ಜಯಕುಮಾರ್‌ಗೆ ಹಸ್ತಾಂತರಿಸಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
Karnataka Rain : ರಾಜ್ಯದ ಕೆಲವೆಡೆ ಇನ್ನೂ 3 ದಿನ ಮಳೆ
ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಡಿಸೆಂಬರ್ 14ರವರೆಗೆ ಮಳೆಯಾಗುವ (Rain) ಸಾಧ್ಯತೆಯಿದ್ದರೂ ಉಳಿದಂತೆ ರಾಜ್ಯಾದ್ಯಂತ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (Karnataka Weather Department) ಹೇಳಿದೆ. ಕರಾವಳಿಯ (Coastal) ಒಂದೆರಡು ಕಡೆ ಡಿಸೆಂಬರ್ 14ಕ್ಕೆ ಮಳೆಯಾಗಬಹುದು
Happy Anniversary Virushka: ಸ್ಟಾರ್ ಜೋಡಿಯ ಚಂದದ ಪ್ರೇಮಕಥೆ
ಭಾರತದ ಸ್ಟಾರ್ ಸೆಲೆಬ್ರಿಟಿ ಜೋಡಿಗಳಲ್ಲಿ ವಿರುಷ್ಕಾ (Virushka)ಕೂಡಾ ಇದ್ದಾರೆ. ಕ್ರಿಕೆಟರ್ ಹಾಗೂ ನಟಿಯ ಜೋಡಿ ಟಾಪ್ ಸ್ಟಾರ್ ಕಪಲ್. ಅವರ ಲವ್(Love) ಆರಂಭವಾದಾಗಿನಿಂದಲೂ ಜೋಡಿ ಸುದ್ದಿಯಲ್ಲಿದ್ದಾರೆ. ಪ್ರೀತಿ, ಮದುವೆ, ನಂತರ ಮಗಳು ವಮಿಕಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ಈ ಜೋಡಿ
Rashmika Mandanna in Pushpa: ಕನ್ನಡ ಗೊತ್ತಿದ್ದರೂ ಕನ್ನಡದಲ್ಲೇಕೆ ಡಬ್ ಮಾಡೋಲ್ಲ?
ಜ್ಯೂನಿಯರ್ ಎನ್‌ಟಿಆರ್ ಜೊತೆ ರಶ್ಮಿಕಾ ಮಂದಣ್ಣನ ಹೋಲಿಸುತ್ತಿರುವ ನೆಟ್ಟಿಗರು. ಕನ್ನಡ ಗೊತ್ತಿದ್ದರೂ ಡಬ್ಬಿಂಗ್ ಆಯ್ಕೆ ಮಾಡಿಕೊಳ್ಳದ್ದಕ್ಕೆ ನಿರಾಶೆ.
Shah Rukh Khan car:ಆರ್ಯನ್ ಖಾನ್ ಪ್ರಕರಣ ಬೆನ್ನಲ್ಲೇ ಐಷಾರಾಮಿ ಕಾರು ಮಾರಾಟಕ್ಕೆ ಮುಂದಾದ ಶಾರುಖ್ ಖಾನ್!
ಬಾಲಿವುಡ್ ಡ್ರಗ್ಸ್ ಪ್ರಕರಣ(Bollywood Drug case) ತಣ್ಣಗಾಗಿದ್ದರೂ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್(Shah Rukh Khan) ಕುಟುಂಬದ ಸಂಕಷ್ಟ ಮುಗಿದಿಲ್ಲ. ಇದೀಗ ಬಾಂಬೆ ಹೈಕೋರ್ಟ್ ಜಾಮೀನಿನಲ್ಲಿ ವಿಧಿಸಿದ ಷರತ್ತು ಸಡಿಲಗೊಳಿಸುವಂತೆ ಆರ್ಯನ್ ಖಾನ್(Aryan Khan) ಪರ ವಕೀಲರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತ ಆರ್ಯನ್ ಖಾನ್ ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಶಾರುಖ್ ಖಾನ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆರ್ಯನ್ ಖಾನ್ ಪ್ರಕರಣದಿಂದ ನೊಂದಿರುವ ಶಾರುಖ್ ಖಾನ್ ಇದೀಗ ತಮ್ಮ ಐಷಾರಾಮಿ ಕಾರು(Luxury car) ಮಾರಾಟ ಮಾಡುತ್ತಿದ್ದಾರೆ.
Uttar Pradesh Elections: ಅಖಿಲೇಶ್ ರ್ಯಾಲಿಗೆ ಭರ್ಜರಿ ಯುವಕರ ದಂಡು, ಯೋಗಿಗೆ ಚಿಂತೆ ಶುರು
ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ (BS Yediyurappa) ಬೇಸರಗೊಂಡಿರಬಹುದು. ಈಗ ಅವರನ್ನು ಭೇಟಿ ಆದರೆ ಸಂಚಲನ ಸೃಷ್ಟಿಸಬಹುದು ಎಂದು ಮಮತಾ ಬ್ಯಾನರ್ಜಿ (Mamatha Banergee) ರಣನೀತಿಗಾರ ಪ್ರಶಾಂತ್ ಕಿಶೋರ್‌ರನ್ನು ಕಳುಹಿಸಿದ್ದಾರೆ.
Attack on Teacher: ಶಿಕ್ಷಕರಿಗೇ ಹೊಡೆದ ವಿದ್ಯಾರ್ಥಿಗಳಿಂದ ಗುರುವಿನ ಪಾದ ಮುಟ್ಟಿ ಕ್ಷಮೆ
ಬುದ್ಧಿ ಹೇಳುತ್ತಾರೆಂಬ ಕಾರಣಕ್ಕೆ ಶಿಕ್ಷಕರೊಬ್ಬರ (Teacher) ವಿರುದ್ಧ ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳ (Students) ಗುಂಪೊಂದು ಶಿಕ್ಷಕನ ತಲೆಗೆ ಕಸದ ಬುಟ್ಟಿಹಾಕಿ, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ(Chennagiri) ತಾಲೂಕಿನ ನಲ್ಲೂರು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ (High School) ವಿಭಾಗದಲ್ಲಿ ನಡೆದಿದೆ.