ಸಡಿಲಿಕೆಯಾಯ್ತು ಕೋವಿಡ್ ರೂಲ್ಸ್, ಸುದೀಪ್ ಅಡ್ಡಾದಿಂದ ಶಾಕಿಂಗ್ ನ್ಯೂಸ್,ಜ.29ರ Top 10 News!

By Suvarna NewsFirst Published Jan 29, 2022, 4:43 PM IST
Highlights

ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ನೈಟ್ ಕರ್ಫ್ಯೂವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಜನವರಿ 31ರಿಂದ ಹೊಸ ರೂಲ್ಸ್ ಅನ್ವಯವಾಗಲಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಷ್ಟ್ರ ನಾಯಕನಾಗಲಿದ್ದಾರೆ ಎಂದು ಭವಿಷ್ಯ ಹೇಳುತ್ತಿದೆ. ದೇವರ ಕುರಿತ ಮಾತಿಗೆ ಕ್ಷಮೇ ಕೇಳಿದ ನಟಿ, ರಿಲೀಸ್ ಆಗುತ್ತಿಲ್ಲ ವಿಕ್ರಾಂತ್ ರೋಣ ಸೇರಿದಂತೆ ಜನವರಿ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 Night Curfew Lifts ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು, ಜ.31ರಿಂದ ಜನತೆಗೆ ರಿಲ್ಯಾಕ್ಸ್

ಕೊರೋನಾ ಸೋಂಕು(Coronavirus) ನಿಯಂತ್ರಣಕ್ಕೆ ಕರ್ನಾಟಕದಲ್ಲಿ(Karnataka) ಜಾರಿಗೆ ತರಲಾಗಿದ್ದ ನೈಟ್​ ಕರ್ಫ್ಯೂ (Night Curfew) ರದ್ದು ಮಾಡಲಾಗಿದೆ.  ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ಇರಲ್ಲ. ಈ ಬಗ್ಗೆ ಕಂದಾಯ ಸಚಿವ ಆರ್​.ಅಶೋಕ್ (R Ashok) ಮಾಹಿತಿ ನೀಡಿದ್ದಾರೆ.

Yogi Aditynath ಈ ದೇಶದ ಲೀಡರ್‌ ಆಗ್ತಾರಾ? ಫಲಜ್ಯೋತಿಷ್ಯ ಹೀಗೆ ಹೇಳುತ್ತೆ..

ಉತ್ತರಪ್ರದೇಶದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೋದಿಯವರ ನಂತರದ ರಾಷ್ಟ್ರನಾಯಕ ಎಂದೇ ಗುರುತಿಸಲಾಗ್ತಿರುವ ಯೋಗಿ ಆದಿತ್ಯನಾಥ್‌ ಅವರ ಜನ್ಮರಾಶಿ, ಜಾತಕ ಪ್ರಕಾರ ಅವರ ಭವಿಷ್ಯ ಹೇಗಿದೆ?

Brahmos Missiles: ಮೊದಲ ಬಾರಿ ವಿದೇಶಕ್ಕೆ ಭಾರತದ ಕ್ಷಿಪಣಿ ರಫ್ತು..!

 ಸೇನಾ ಪರಿಕರಗಳಿಗಾಗಿ ದಶಕಗಳಿಂದ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ(India) ಈಗ ರಕ್ಷಣಾ ಸಾಧನಗಳ ರಫ್ತುದಾರ ರಾಷ್ಟ್ರವಾಗುವತ್ತ ದಾಪುಗಾಲು ಇಟ್ಟಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶಿ ನಿರ್ಮಿತ ಕ್ಷಿಪಣಿಗಳನ್ನು ರಫ್ತು ಮಾಡಲು ಭಾರತ ಮುಂದಾಗಿದ್ದು, ಫಿಲಿಪ್ಪೀನ್ಸ್‌(Philippines) ಜತೆ ಶುಕ್ರವಾರ ಐತಿಹಾಸಿಕ ಒಪ್ಪಂದವೊಂದಕ್ಕೆ(Agreement) ಸಹಿ ಹಾಕಿದೆ.

IPL Auction 2022: 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿರುವ ಈ 3 ಇಂಗ್ಲೆಂಡ್ ಆಟಗಾರರು ಹರಾಜಾಗುವುದೇ ಡೌಟ್

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ತನ್ನದೇ ಆದ ಪಾತ್ರ ನಿಭಾಯಿಸುತ್ತಾ ಬಂದಿದ್ದಾರೆ. ಜಾನಿ ಬೇರ್‌ಸ್ಟೋವ್, ಸನ್‌ರೈಸರ್ಸ್‌ ಹೈದರಾಬಾದ್ ಪರ ಹಲವು ಸ್ಮರಣೀಯ ಇನಿಂಗ್ಸ್‌ ಆಡಿದ್ದಾರೆ. ಇನ್ನು ಬೆನ್ ಸ್ಟೋಕ್ಸ್‌(Ben Stokes), ಜೋಫ್ರಾ ಆರ್ಚರ್‌ ಕೂಡಾ ಏಕಾಂಗಿಯಾಗಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ ಹಲವಾರು ಉದಾಹರಣೆಗಳಿವೆ. 

ಒಳ ಉಡುಪು-ದೇವರ ಬಗ್ಗೆ ಉಡಾಫೆ ಮಾತು; ಕ್ಷಮೆ ಕೇಳಿದ ನಟಿ ಶ್ವೇತಾ!

ದೇವರ ಬಗ್ಗೆ ಅವಮಾನ ಆಗುವಂಥ ಹೇಳಿಕೆ ನೀಡಿದ್ದಕ್ಕೆ ನಟಿ ಶ್ವೇತಾ ವಿರುದ್ಧ ದೂರು. ಅನಗತ್ಯ ಉತ್ಪೇಕ್ಷೆಗೆ ಕ್ಷಮೆ ಕೇಳಿದ ನಟಿ. 

ಈ ಅಪಾಯಕಾರಿ ಕೊರಿಯರ್ ಡೆಲಿವರಿ ಮೇಸೆಜ್‌ಗಳನ್ನು ಅಪ್ಪಿತಪ್ಪಿಯೂ ಓಪನ್‌ ಮಾಡ್ಬೇಡಿ!

ಫೆಡ್‌ಎಕ್ಸ್ (FedEx) ಮತ್ತು ಇತರ ಕಂಪನಿಗಳಿಂದ ಕೊರಿಯರ್ ಡೆಲಿವರಿ ಟ್ರ್ಯಾಕಿಂಗ್ ವಿನಂತಿಯಂತೆ ಕಂಡುಬರುವ ನಕಲಿ ಎಸ್‌ಎಮ್‌ಎಸ್ (SMS) ಮತ್ತು ಇಮೇಲ್‌ಗಳನ್ನು ಕಳುಹಿಸಿ ವಂಚಿಸುವ ಹೊಸ ಸ್ಕ್ಯಾಮ್‌ ಈಗ ಬೆಳಕಿಗೆ ಬಂದಿದೆ.

Altroz Test Drive ಟೆಸ್ಟ್ ಡ್ರೈವ್ ನೆಪದಲ್ಲಿ ಟಾಟಾ ಅಲ್ಟ್ರೋಜ್ ಕಳ್ಳತನ, ತಂತ್ರಜ್ಞಾನದಿಂದ ಕಾರು ಸುರಕ್ಷಿತವಾಗಿ ವಾಪಸ್!

 ವಾಹನ ಕಳ್ಳತನ ಮಾಡಲು ಖದೀಮರು ಕಾಲಕ್ಕೆ ತಕ್ಕಂತೆ ತಮ್ಮ ಪ್ಲಾನ್ ಬದಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಟೆಸ್ಟ್ ಡ್ರೈವ್(Test Drive) ನೆಪದಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಹೊಸ ತಂತ್ರಜ್ಞಾನ, ಆ್ಯಂಟಿ ಥೆಫ್ಟ್ ಫೀಚರ್ಸ್ ಸೇರಿದಂತೆ ಹಲವು ಕಾರಣಗಳಿಂದ ಹೊಸ ಕಾರುಗಳ ಕಳ್ಳತನ ಅಷ್ಟು ಸುಲಭವಲ್ಲ. ಹೀಗೆ ಟಾಟಾ ಅಲ್ಟ್ರೋಜ್(Tata Altroz) ಕಾರು ಕಳ್ಳತನ(Stolen) ಮಾಡಿದ ಖದೀಮರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

Covid-19 ಮಾರಿಯನ್ನು ಮೊದಲೇ ಸೂಚಿಸಿದ್ದ 'ಚೀನಾದ ನಾಸ್ಟ್ರಾಡಾಮಸ್'!

2019ರಿಂದಲೇ ನಾಲ್ಕಾರು ವರ್ಷ ಇಡೀ ಜಗತ್ತಿಗೆ ಮಹಾಮಾರಿಯೊಂದು ಆವರಿಸಿಕೊಳ್ಳಲಿದೆ ಎಂದು ಭವಿಷ್ಯ ಹೇಳಿದ್ದನೇ ಚೀನಾದ ನಾಸ್ಟ್ರಾಡಾಮಸ್ ಎಂದು ಕರೆಸಿಕೊಳ್ಳುವ ಈ ಭವಿಷ್ಯವಾದಿ?

ವಿಕ್ರಾಂತ್ ರೋಣ ರಿಲೀಸ್ ಆಗುತ್ತಿಲ್ಲ; Kiccha Sudeep ಅಡ್ಡದಿಂದ ಶಾಕಿಂಗ್ ನ್ಯೂಸ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಇದೇ ಫೆಬ್ರವರಿ 24ರಂದು ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್‌ ರೂಲ್ಸ್‌ನಿಂದ ದಿನಾಂಕವನ್ನು ಮುಂದೂಡಲಾಗಿದೆ. 

click me!