Amit shah interview :ಕುಟುಂಬ ರಾಜಕೀಯಕ್ಕೆ ಕರ್ನಾಟಕ ಗುಡ್‌ಬೈ: ಅಮಿತ್ ಶಾ

By Kannadaprabha News  |  First Published Feb 15, 2023, 1:45 AM IST

ಕಳೆದ 2 ತಿಂಗಳಲ್ಲಿ ನಾನು ಕರ್ನಾಟಕಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ಈ ವೇಳೆ ಅಲ್ಲಿಯ ಜನರ ನಾಡಿ ಮಿಡಿತ ಮತ್ತು ಪ್ರಧಾನಿ ನರೇಂದ್ರ ಮೋದಿಅವರ ಜನಪ್ರಿಯತೆಯನ್ನು ಕಂಡುಕೊಂಡಿದ್ದೇನೆ. ಇದೇ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಭಾರೀ ಬಹುಮತ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಅಮಿತ್‌ ಶಾ ಸಂದರ್ಶನ

ನವದೆಹಲಿ (ಫೆ.15): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕುಟುಂಬ ರಾಜಕೀಯಕ್ಕೆ ಜನ ಕೊನೆ ಹಾಡಲಿದ್ದಾರೆ ಎಂದಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ. ‘ಎಎನ್‌ಐ’ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅಮಿತ್‌ ಶಾ ಈ ವಿಚಾರಗಳನ್ನು ಮಾತನಾಡಿದ್ದು, ಅದರ ಆಯ್ದ ಭಾಗ ಇಲ್ಲಿದೆ.

Tap to resize

Latest Videos

ಕರ್ನಾಟಕ ಹಾಗೂ ಇತರ ಹಲವು ರಾಜ್ಯಗಳಲ್ಲಿ ಚುನಾವಣೆ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ?

ಕಳೆದ 2 ತಿಂಗಳಲ್ಲಿ ನಾನು ಕರ್ನಾಟಕಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ಈ ವೇಳೆ ಅಲ್ಲಿಯ ಜನರ ನಾಡಿ ಮಿಡಿತ ಮತ್ತು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಜನಪ್ರಿಯತೆಯನ್ನು ಕಂಡುಕೊಂಡಿದ್ದೇನೆ. ಇದೇ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಭಾರೀ ಬಹುಮತ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಕರ್ನಾಟಕದಲ್ಲಿ ಮಂಡ್ಯದ ಜನರು ಕೂಡ ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿಂದ ದೂರವಾಗಿ, ಬಿಜೆಪಿಯ ಅಭಿವೃದ್ಧಿ ರಾಜಕೀಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಪಾಲಿಗೆ ಒಳ್ಳೆಯ ಬೆಳವಣಿಗೆ. ಜೊತೆಗೆ ಈ ವರ್ಷ ಚುನಾವಣೆ ನಡೆಯಲಿರುವ ಇತರ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಆಳ್ವಿಕೆಯ ರಾಜಸ್ಥಾನದಲ್ಲೂ ಬಿಜೆಪಿಗೆ ಜಯ ಖಚಿತ.

Assembly election: ಹಾಸನ.. ಅರಸೀಕೆರೆ.. ಗೌಡರ ಕೋಟೆಯಲ್ಲಿ ಇದೆಂಥಾ ಯುದ್ಧ..?

ಎಲ್ಲೆಡೆ ಕುಟುಂಬ ರಾಜಕೀಯವಿದೆ. ಈ ಬಗ್ಗೆ ಏನಂತೀರಿ?

ಕುಟುಂಬ ರಾಜಕಾರಣ(Family politics)ದ ವಿಷಯದಲ್ಲೂ ವಿಪಕ್ಷಗಳಿಗೂ ನಮಗೂ ಹೋಲಿಕೆ ಮಾಡಲೇ ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಎಂದಿಗೂ 2 ಮತ್ತು 3ನೇ ತಲೆಮಾರಿನ ರಾಜಕಾರಣಿಗಳನ್ನು ಅಧ್ಯಕ್ಷ ಸ್ಥಾನಕ್ಕೆ ತರುವುದಿಲ್ಲ ಅಥವಾ ಯಾವುದೇ ನಿರ್ದಿಷ್ಟಕುಟುಂಬವೊಂದಕ್ಕೆ ಸೇರಿದ ವ್ಯಕ್ತಿಗೆ ಇತರೆ ಪಕ್ಷಗಳಂತೆ ಅಧಿಕಾರ ನೀಡುವುದಿಲ್ಲ.

2024ರ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ?

ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ತಳಮಟ್ಟದ ಜನರ ಜೀವನದಲ್ಲಿ ಗುರುತಿಸಬಹುದಾದ ಬದಲಾವಣೆ ಕಂಡುಬಂದಿದೆ. ಹಿಂದಿನ ಸಾಧನೆಗಳ ಫಲವಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪರ್ಧಿಯೇ ಇಲ್ಲ. ದೇಶದ ಜನತೆ ತುಂಬು ಹೃದಯದಿಂದ ಮತ್ತೆ ಮೋದಿ ಅವರೊಂದಿಗೆ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಇನ್ನು ಈಗ ಚುನಾವಣೆ ನಡೆಯುತ್ತಿರುವ ತ್ರಿಪುರದಲ್ಲಿ ಮತ ಎಣಿಕೆ ದಿನ ಮಧ್ಯಾಹ್ನ 12 ಗಂಟೆಗೆ ಮೊದಲೇ ಬಿಜೆಪಿ ಬಹುಮತ ಸಾಧಿಸಲಿದೆ.

ಅದಾನಿ ಕಂಪನಿ ನಡೆಸಿದ ಎನ್ನಲಾದ ಅಕ್ರಮ ವ್ಯವಹಾರದ ವಿಷಯದಲ್ಲಿ ಬಿಜೆಪಿ ಹಾಗೂ ಮೋದಿ ಮೇಲೆ ವಿಪಕ್ಷಗಳು ಆರೋಪ ಮಾಡುತ್ತಿವೆಯಲ್ಲ?

ಈ ವಿಷಯದಲ್ಲಿ ಬಿಜೆಪಿ ಮುಚ್ಚಿಡುವಂಥದ್ದಾಗಲೀ ಅಥವಾ ಹೆದರುವಂಥದ್ದಾಗಲೀ ಏನೂ ಇಲ್ಲ. ಸಾಕ್ಷ್ಯ ಇದ್ದರೆ ಕಾಂಗ್ರೆಸ್‌ ಕೋರ್ಟ್‌ಗೆ ಹೋಗಲಿ. ಆರೋಪಗಳ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್(Supreme court) ಗಮನ ಹರಿಸಿದೆ. ಹೀಗಾಗಿ ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದು ಸೂಕ್ತವಾಗದು.

ಲೋಕಸಭೆಯಲ್ಲಿ ಅದಾನಿ ಕುರಿತಂತೆ ಮೋದಿ ಮೇಲೆ ರಾಹುಲ್‌ ಅನೇಕ ಆರೋಪ ಮಾಡಿದರಲ್ಲ?

ಅಲ್ಲಿ ಏನು ಮಾತನಾಡಬೇಕು ಎಂಬುದು ಕಾಂಗ್ರೆಸ್‌ ನಾಯಕ ಅಥವಾ ಅವರಿಗೆ ಭಾಷಣ ಬರೆದುಕೊಡುವವರಿಗೆ ಬಿಟ್ಟವಿಷಯ. ಆದರೆ ಅವರ ಮಾತನ್ನು ಕಡತದಿಂದ ತೆಗೆದು ಹಾಕಿದ್ದು ನಿಯಮಾನುಸಾರವೇ ಇದೆ. ಈ ವಿಷಯದಲ್ಲಿ ಮೋದಿ ನಿಷ್ಕಳಂಕರು. ಆದರೆ, ಅವರ (ಕಾಂಗ್ರೆಸ್‌) ಅವಧಿಯಲ್ಲೇ ಸಿಬಿಐ ಅಥವಾ ಸಿಎಜಿ 12 ಲಕ್ಷ ಕೋಟಿ ರು. ಮೊತ್ತದ ಹಗರಣದ ಬಗ್ಗೆ ಕೇಸು ದಾಖಲಿಸಿದ್ದವು.

ಸಾಂವಿಧಾನಿಕ ಹುದ್ದೆಗಳನ್ನು ಕೇಂದ್ರ ವಶಕ್ಕೆ ಪಡೆಯುವ ಹುನ್ನಾರ ನಡೆಸಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಏನಂತೀರಿ?

ಅಂಥ ಕೆಲಸ ಮಾಡಿದ್ದರೆ ಅವರು ಕೋರ್ಟಿಗೆ ಹೋಗಲಿ. ಕೋರ್ಟುಗಳೇನೂ ಬಿಜೆಪಿಯ ಪ್ರಭಾವದಲ್ಲಿ ಇಲ್ಲ. ಪೆಗಾಸಸ್‌ ವಿಷಯದ ಬಗ್ಗೆ ಆರೋಪ ಮಾಡಿದಾಗಲೂ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದಿದ್ದೆ. ಅವರಿಗೆ ಗದ್ದಲ ಮಾಡುವುದು ಬಿಟ್ಟುಬೇರೇನೂ ಬೇಕಿಲ್ಲ. ಪೆಗಾಸಸ್‌ ವಿಚಾರದಲ್ಲಿ ಕೋರ್ಟು ತೀರ್ಪು ನೀಡಿ ಆಗಿದೆ. 

ಜೆಡಿಎಸ್‌, ಕಾಂಗ್ರೆಸ್‌ನಿಂದ ರಾಜ್ಯ ಲೂಟಿ: ಕೇಂದ್ರ ಸಚಿವ ಅಮಿತ್‌ ಶಾ

ಕರ್ನಾಟಕ ಜನರ ನಾಡಿಮಿಡಿತ ಗೊತ್ತು

ಕಳೆದ 2 ತಿಂಗಳಲ್ಲಿ ನಾನು ಕರ್ನಾಟಕಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ಈ ವೇಳೆ ಅಲ್ಲಿಯ ಜನರ ನಾಡಿ ಮಿಡಿತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕಂಡುಕೊಂಡಿದ್ದೇನೆ. ಇದೇ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಭಾರೀ ಬಹುಮತ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ?

ಜೆಡಿಎಸ್‌ನಲ್ಲಿ ಮಾತ್ರ ಕುಟುಂಬ ರಾಜಕೀಯ ಇದೆಯೇ? ಬಿಜೆಪಿಯಲ್ಲಿ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲವೇ? ನಾವು ಜನರ ಆಶೀರ್ವಾದ ಪಡೆದು ಜನಪ್ರತಿನಿಧಿ ಆಗಿದ್ದೇವೆಯೇ ವಿನಃ ಹಿಂಬಾಗಿಲಿನಿಂದ ಪ್ರವೇಶಿಸಿಲ್ಲ. ನಾವು ಹೋರಾಟದಿಂದ ಜನಪ್ರತಿನಿಧಿಗಳಾಗಿದ್ದೇವೆ. ಚುನಾವಣೆಗೆ ಯಾರು ಬೇಕಾದರೂ ನಿಲ್ಲಬಹುದು. ಯಾವ ವೃತ್ತಿ ಬೇಕಾದರೂ ಆಯ್ದುಕೊಳ್ಳಬಹುದು. ಬಿಜೆಪಿಗರ ಸರ್ಟಿಫಿಕೇಟ್‌ ನಮಗೆ ಬೇಡ. ಚುನಾವಣೆಗೆ ನಿಲ್ಲಲು ಅಮಿತ್‌ ಶಾ ಅವರ ಪರವಾನಗಿ ಪಡೆಯಬೇಕೇ? ಕರ್ನಾಟಕಕ್ಕೆ ಅಮಿತ್‌ ಶಾ ಹಾಗೂ ಬಿಜೆಪಿ ಕೊಡುಗೆ ಏನು?

- ಎಚ್‌.ಡಿ. ಕುಮಾರಸ್ವಾಮಿ ಮಾಜಿ ಸಿಎಂ

click me!