BBC ಅಂದ್ರೆ ಭ್ರಷ್ಟ ಬಕ್ವಾಸ್ ಕಾರ್ಪೋರೇಶನ್, ಐಟಿ ದಾಳಿ ಬೆನ್ನಲ್ಲೇ ಬಿಜೆಪಿ ನಾಯಕನ ಹೇಳಿಕೆ ವೈರಲ್!

By Suvarna News  |  First Published Feb 14, 2023, 4:17 PM IST

ಬಿಬಿಸಿ ವಾಹಿನಿಗೆ ಇಂದು ಕೇಂದ್ರ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ದೆಹಲಿ ಹಾಗೂ ಮುಂಬೈ ಕಚೇರಿಗೆ ದಾಳಿ ಮಾಡಿ ಸರ್ವೆ ಮಾಡಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಬಿಬಿಸಿ ಎಂದರೆ ಭ್ರಷ್ಟ ಬಕ್ವಾಸ್ ಕಾರ್ಪೋರೇಶನ್ ಅನ್ನೋ ಹೇಳಿಕೆ ನೀಡಿದ್ದಾರೆ. ಇದು ವೈರಲ್ ಆಗಿದೆ.
 


ನವದೆಹಲಿ(ಫೆ.14): ಪ್ರೇಮಿಗಳ ದಿನಾಚರಣೆಗೆ ಬಿಬಿಸಿ ವಾಹನಿ ಆಘಾತ ಎದುರಾಗಿದೆ. ಏಕಾಏಕಿ ದೆಹಲಿ ಹಾಗೂ ಮುಂಬೈ ಕಚೇರಿಗೆ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಇಟ್ಟಿದ್ದರು. ಆದಾಯ ತೆರಿಗೆ ಪಾವತಿಯಲ್ಲಿನ ಅಕ್ರಮ ಕುರಿತು ಐಟಿ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯ ಚಿತ್ರ ಪ್ರಸಾರ ಮಾಡಿದ ಬಳಿಕ ಇದೀಗ ಈ ಐಟಿ ದಾಳಿ ನಡೆದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಈ ದಾಳಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ಬಿಬಿಸಿ ವಾಹನಿ ಇಂದು ಭ್ರಷ್ಟ ಬಕ್ವಾಸ್ ಕಾರ್ಪೋರೇಶನ್ ಆಗಿದೆ. ಬಿಬಿಸಿ ನಡೆಸುತ್ತಿರುವ ಪಿತೂರಿ ಹಾಗೂ ಕಾಂಗ್ರೆಸ್ ಅಜೆಂಡಾ ಎರಡೂ ಒಂದೇ ಆಗಿದೆ. ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವದು ಹಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ರೀತಿಯ ಷ್ಯಡ್ಯಂತ್ರಗಳು ನಡೆಯುತ್ತಿದೆ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಮಾಧ್ಯಮ ಭಾರತದ ನಿಯಮ ಪಾಲಿಸಬೇಕು. ಈ ನೆಲದ ಕಾನೂನಿಗೆ ಗೌರವ ನೀಡಬೇಕು. ಬಿಬಿಸಿ ಮೇಲಿನ ದಾಳಿಯನ್ನು ಕೆಲವರು ರಾಜಕೀಯ ಪ್ರೇರಿತ ಎಂದು ಬಿಂಬಿಸುತ್ತಿದ್ದಾರೆ. ಆದರೆ ಈ ದಾಳಿ ಕಾನೂನಾತ್ಮಕವಾಗಿ ನಡೆದಿದೆ. ಈಗಿನ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಕಾಲದಲ್ಲಿದ್ದ ಪಂಜರದ ಗಿಳಿಯಲ್ಲ ಎಂದು ಗೌರವ್ ಭಾಟಿಯಾ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.

Tap to resize

Latest Videos

ಮೋದಿ ಸಾಕ್ಷ್ಯಚಿತ್ರ ವಿವಾದ ಬೆನ್ನಲ್ಲೇ ಬಿಬಿಸಿಯ ದೆಹಲಿ, ಮುಂಬೈ ಕಚೇರಿಗೆ ಐಟಿ ಶಾಕ್..!

ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರತಿ ವರ್ಗಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರದ ಸವಲತ್ತಗಳನ್ನು, ಸೌಲಭ್ಯಗಳು ಯಾವುದೇ ಅಡೆ ತಡೆ ಇಲ್ಲದ ಜನರನ್ನು ತಲುಪುತ್ತಿದೆ. ಇದನ್ನು ಬಿಬಿಸಿ ಸೇರಿದಂತೆ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ವಿರುದ್ಧ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ಭಾರತ ವಿರೋಧಿ ನಡೆ ಇದೇ ಮೊದಲಲ್ಲ. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಮೂಲಕ ಭಾರತೀಯ ಸೇನೆಯ ಮೋಸ್ಟ್ ವಾಂಟೆಡ್ ಆಗಿದ್ದ ಬುರ್ಹಾನ್ ವಾನಿಯನ್ನು ಕ್ರಾಂತಿಕಾರಿ ಎಂದು ಇದೇ ಬಿಬಿಸಿ ವಾಹನಿ ಬಿಂಬಿಸಿತ್ತು. ಇಷ್ಟೇ ಅಲ್ಲ ಭಾರತದ ಹೋಳಿ ಹಬ್ಬವನ್ನು ಕೊಳಕು ಹಾಗೂ ಕೆಟ್ಟ ಹಬ್ಬ ಎಂದು ಕರೆದಿತ್ತು. ಇದು ಯಾವ ರೀತಿಯ ಪತ್ರಿಕೋದ್ಯಮ ಎಂದು ಗೌರವ್ ಭಾಟಿಯಾ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಬಿಬಿಸಿಯನ್ನು ನಿಷೇಧಿಸಿದ್ದರು. ಭಾರತದಲ್ಲಿರುವ  ಪ್ರತಿಯೊಂದು ಸಂಸ್ಥೆಗೆ ಯಾವುದೇ ಅಡೆ ತಡೆ ಇಲ್ಲದೆ, ಯಾರ ಒತ್ತಡವೂ ಇಲ್ಲದೆ ಕಾರ್ಯನಿರ್ವಹಿಸುವ ವಾತಾವರಣ ಒದಗಿಸಿದೆ. ಇದರ ಅರ್ಥ ಭಾರತದ ಕಾನೂನು ಗಾಳಿಗೆ ತೂರಬೇಕು ಎಂದಲ್ಲ. ಇಲ್ಲಿನ ಕಾನೂನಿಗೆ ಗೌರವ ನೀಡಲೇಬೇಕು ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಚೀನಾ ಕೈವಾಡ: ಬಿಜೆಪಿ ಸಂಸದ ಜೇಠ್ಮಲಾನಿ

ಬಿಬಿಸಿ ಮೇಲಿನ ಐಟಿ ಅಧಿಕಾರಿಗಳ ದಾಳಿಯನ್ನು ಬಿಬಿಸಿಗಿಂತ ಮೊದಲು ಕಾಂಗ್ರೆಸ್ ವಿರೋಧಿಸಿದೆ. ದೇಶದ ವಿರುದ್ಧ ನಿಲ್ಲುವ ವಾಹಿನಿ ಜೊತೆ ಕಾಂಗ್ರೆಸ್ ಹೇಗೆ ಕೈಜೋಡಿಸಲು ಸಾಧ್ಯ? ದೇಶದ ಹಿತ ನೋಡುವ ಕನಿಷ್ಠ ಪರಿಜ್ಞಾನ ಕಾಂಗ್ರೆಸ್‌ಗೆ ಇಲ್ಲ. ತನ್ನ ಸಿದ್ದಾಂತಕ್ಕೆ ನೇರವಾಗಿದ್ದರೆ, ತನಗೆ ರಾಜಕೀಯವಾಗಿ ಲಾಭವಾಗುತ್ತಿದ್ದರೆ, ಕಾಂಗ್ರೆಸ್ ಯಾರ ಜೊತೆಗೂ ಕೈಜೋಡಿಸುತ್ತದೆ. ಉಗ್ರರ ಕೈಕುಲುಕಿ ಔತಣ ಕೂಟವನ್ನೂ ಆಯೋಜಿಸಿದೆ ಎಂದು ಗೌರವ್ ಭಾಟಿಯಾ ಹೇಳಿದ್ದಾರೆ.
 

click me!