ಅಯೋಧ್ಯೆ ರಾಮಮಂದಿರದ ಬದಲು ರಾಮೇಶ್ವರಕ್ಕೆ ಸಬ್ಸಿಡಿ ಯಾತ್ರೆ ಆಯೋಜಿಸಿದ ಕಾಂಗ್ರೆಸ್‌ ಸರ್ಕಾರ!

Published : Jan 11, 2024, 07:48 PM ISTUpdated : Jan 11, 2024, 07:50 PM IST
ಅಯೋಧ್ಯೆ ರಾಮಮಂದಿರದ ಬದಲು ರಾಮೇಶ್ವರಕ್ಕೆ ಸಬ್ಸಿಡಿ ಯಾತ್ರೆ ಆಯೋಜಿಸಿದ ಕಾಂಗ್ರೆಸ್‌ ಸರ್ಕಾರ!

ಸಾರಾಂಶ

ಇಡೀ ದೇಶದ ಜನರೇ ರಾಮಮಂದಿರ ಉದ್ಘಾಟನೆ ಮತ್ತು ಅಯೋಧ್ಯೆ ಯಾತ್ರೆಗೆ ಹೋಗಲು ಮುಂದಾಗಿದ್ದರೆ, ಕಾಂಗ್ರೆಸ್‌ ಸರ್ಕಾರ ಮಾತ್ರ ರಾಮೇಶ್ವರದ ಕಡೆಗೆ ಯಾತ್ರೆಯನ್ನು ಆಯೋಜನೆ ಮಾಡಿದೆ.

ಬೆಂಗಳೂರು (ಜ.11): ಇಡೀ ದೇಶ ಮಾತ್ರವಲ್ಲ, ಜಗತ್ತಿನಲ್ಲಿರುವ ಎಲ್ಲ ಹಿಂದೂಗಳು ಭಾರತದ ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರ ಉದ್ಘಾಟನೆಗೆ ಹಾಗೂ ರಾಮಮಂದಿರಕ್ಕೆ ಯಾತ್ರೆ ಹೋಗಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಮಾತ್ರ ಧಾರ್ಮಿಕ ದತ್ತಿ ಇಲಾಖೆಯಿಂದ ರಾಮ ಮಂದಿರದ ಕಡೆಗೆ ಯಾತ್ರೆ ಆಯೋಜಿಸುವ ಬದಲು ರಾಮೇಶ್ವರದ ಕಡೆಗೆ ಯಾತ್ರೆಯನ್ನು ಆಯೋಜನೆ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಸುಮಾರು 100 ಕೋಟಿ ಹಿಂದೂಗಳ ಆರಾಧ್ಯ ದೈವವಾಗಿರುವ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಿಕ್ಕೆ 500 ವರ್ಷಗಳು ಸಂದಿವೆ. ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮ ಜನ್ಮಭೂಮಿ ಎಂದು ಹೇಳಲಾಗುವ ಅಯೋಧ್ಯೆಯಲ್ಲಿ ಬೃಹತ್‌ ರಾಮಮಂದಿರವನ್ನು ಜ.22ರಂದು ಉದ್ಘಾಟನೆ ಮಾಡಲಾಗುತ್ತಿದೆ. ಈಗಾಗಲೇ ಆಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ನಾವು ರಾಮಮಂದಿರ ನಿರ್ಮಾಣ ಅಪೂರ್ಣವಾಗಿದ್ದರೂ ಉದ್ಘಾಟನೆ ಮಾಡುವ ಮೂಲಕ ಬಿಜೆಪಿ ಕಾರ್ಯಕ್ರಮವನ್ನಾಗಿ ಆಯೋಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ರಾಮಮಂದಿರ ಉದ್ಘಾಟನೆಗೆ ಬರುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.

ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್, ರಾಮ ವಿರೋಧಿಗಳಿಗೆ ಜಾಗವಿಲ್ಲ ಎಂದ ಜನ!

ಈಗ ರಾಜ್ಯ ಕಾಂಗ್ರೆಸ್‌ ಸರ್ಕಾರದ ಧಾರ್ಮಿಕ  ದತ್ತಿ ಇಲಾಖೆಯಿಂದ ರಾಮಮಂದಿರ ಉದ್ಘಾಟನಾ ದಿನಕ್ಕೆ ಸೆಡ್ಡು ಹೊಡೆಯುವಂತೆ ರಾಜ್ಯದ ಅನೇಕ ಹಿಂದೂಗಳಿಗೆ ರಾಮಮಂದಿರ ಯಾತ್ರೆಯನ್ನು ಕಲ್ಪಿಸುವ ಬದಲು ದಕ್ಷಿಣದ ರಾಮೇಶ್ವರ ಯಾತ್ರೆಯನ್ನ ಆಯೋಜನೆ ಮಾಡಿದೆ. ರೈಲಿನ ಮೂಲಕ ಹೊರಡುವ ರಾಮೇಶ್ವರ ಯಾತ್ರೆಗೆ 15,000 ರೂ. ದರ ನಿಗದಿ ಮಾಡಲಾಗಿದ್ದು, ಇದರಲ್ಲಿ 5,000 ರೂ. ಸರ್ಕಾರದಿಂದ ಸಹಾಯಧನವನ್ನೂ ನೀಡಲಾಗುತ್ತಿದೆ.

ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ ಯೋಜನೆಯಡಿ ರಾಮೇಶ್ವರ- ಕನ್ಯಾಕುಮಾರಿ-ಮಧುರೈ-ತಿರುವನಂತಪುರಂ ಯಾತ್ರೆಯನ್ನು ಹಮ್ಮಿಕೊಂಡಿದೆ. ಇನ್ನು ಈ ಯಾತ್ರೆಯು ಅಯೋಧ್ಯೆ ರಾಮಮಂದಿರ ಉದ್ಘಾಟನಾ ಅವಧಿಯಲ್ಲಿಯೇ ಆಯೋಜನೆ ಮಾಡಲಾಗಿದೆ. ಜ.18ರಂದು ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಿಂದ ಯಾತ್ರೆ ಆರಂಭಿಸಿ ಮೊದಲ ತಾಣವಾಗಿ ರಾಮೇಶ್ವರವನ್ನು ತಲುಪಲಿದೆ. ನಂತರ ಉಳಿದ ಸ್ಥಳಗಳಿಗೆ ತೆರಳಲಿದೆ. ವಿಶೇಷ ರೈಲಿನಲ್ಲಿ ಹೊರಡುವ ಯಾತ್ರೆಯು ಜ.18ರಿಂದ ಆರಂಭವಾಗಿ ಜ.23ಕ್ಕೆ ಮುಕ್ತಾಯವಾಗಲಿದೆ. ಅಂದರೆ, ಸರ್ಕಾರ ಹಿಂದೂ ಯಾತ್ರಾರ್ಥಿಗಳನ್ನು ರಾಮಮಂದಿರದ ಬದಲು ರಾಮೇಶ್ವರದ ಕಡೆಗೆ ಕರೆದೊಯ್ಯುವ ಯೋಜನೆ ರೂಪಿಸಿದೆ.

ಬೆಂಗಳೂರು ನಮ್ಮ ಮೆಟ್ರೋಗೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಎಮ್.ಮಹೇಶ್ವರ ರಾವ್ ನೇಮಕ

ಇನ್ನು ಇದೇ ಹಾದಿಯಲ್ಲಿ ಪುನಃ ಜ.30ರಿಂದ ಫೆ.4ರವರೆಗೆ ರಾಮೇಶ್ವರ ಯಾತ್ರೆಯನ್ನು ಆಯೋಜನೆ ಮಾಡಲಾಗಿದೆ. ಒಟ್ಟು 6 ದಿನಗಳ ಯಾತ್ರೆಯಾಗಿದ್ದು, 3 ಟೈರ್‌ ಎಸಿ ರೈಲು ಪ್ರಯಾಣ, ತಿಂಡಿ-ಊಟ, ವಸತಿ ಮತ್ತು ದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ. ಜೊತೆಗೆ, ಯಾತ್ರಾರ್ಥಿಗಳ ಆರೋಗ್ಯಕ್ಕಾಗಿ ವೈದ್ಯರನ್ನೂ ನಿಯೋಜನೆ ಮಾಡಲಾಗಿರುತ್ತದೆ. ಆಸಕ್ತ ಯಾತ್ರಾರ್ಥಿಗಳು ಐಆರ್‌ಸಿಟಿಸಿ/ಐಟಿಎಂಎಸ್ ವೆಬ್‌ಸೈಟ್‌ ಮೂಲಕ ಬುಕಿಂಗ್‌ ಮಾಡಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್