ತಪ್ಪು QR Code ಶೇರ್‌ ಮಾಡಿದ ಕಾಂಗ್ರೆಸ್‌, ಕೋಟಿ ಕೋಟಿ ಕಳೆದುಕೊಂಡ Donate for Desh ಅಭಿಯಾನ!

By Santosh Naik  |  First Published Jan 11, 2024, 7:41 PM IST


ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಪಕ್ಷ ಫೇಕ್‌ ಕ್ಯುಆರ್‌ ಕೋಡ್‌ಗಳನ್ನು ತನ್ನ ಪ್ರಚಾರ ಕರಪತ್ರಗಳಲ್ಲಿ ಪ್ರಿಂಟ್‌ ಮಾಡಿದ್ದ ಕಾರಣದಿಂದಾಗಿ ಡೊನೇಟ್‌ ಫಾರ್‌ ದೇಶ್‌ ಅಭಿಯಾನದಲ್ಲಿ ಲಕ್ಷಾಂತರ ರೂಪಾಯಿ ನಷ್ಟವನ್ನು ಅನುಭವಿಸಿದೆ.


ನವದೆಹಲಿ (ಜ.11): ದೇಶಕ್ಕಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ಹಾಗೂ ಲೋಕಸಭೆ ಚುನಾವಣೆಯಲ್ಲ ಸ್ಪರ್ಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ಕಳೆದ ತಿಂಗಳು Donate for Desh ಹೆಸರಿನ ಕ್ರೌಡ್‌ ಫಂಡಿಂಗ್ ಅಭಿಯಾನವನ್ನು ಆರಂಭ ಮಾಡಿತ್ತು. ಚುನಾವಣೆಗೆ ಸ್ಪರ್ಧಿಸಲು ಜನರಿಂದಲೇ ಹಣ ಪಡೆಯುವುದು ಮಾತ್ರವಲ್ಲದೆ, ಲೋಕಸಭೆ ಚುನಾವಣೆಗೆ ಪ್ರಚಾರವೂ ಆಗುತ್ತದೆ ಎನ್ನುವ ಯೋಚನೆ ಇದರಲ್ಲಿತ್ತು. ಆದರೆ, ತನ್ನ ಪ್ರಚಾರದ ಕರಪತ್ರಗಳಲ್ಲಿ ತಪ್ಪಾದ ಕ್ಯುಆರ್‌ ಕೋಡ್‌ ಪ್ರಿಂಟ್‌ ಮಾಡಿಸಿದ್ದರಿಂದ ಲೋಕಸಭೆ ಚುನಾವಣೆಗಗೂ ಮುನ್ನ ಕಾಂಗ್ರೆಸ್‌ ಪಕ್ಷ ಲಕ್ಷ ಲಕ್ಷ ಹಣವನ್ನು ಇದರಿಂದ ಕಳೆದುಕೊಂಡಿದೆ. ಡೊನೇಟ್‌ ಫಾರ್‌ ದೇಶ್‌ ಅಂದರೆ ದೇಶಕ್ಕಾಗಿ ದಾನ ಎನ್ನುವ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌, ಇದಕ್ಕಾಗಿ ಪ್ರಚಾರದ ಕರಪತ್ರಗಳನ್ನೂ ಪ್ರಿಂಟ್‌ ಮಾಡಿತ್ತು. ಆದರೆ, ಕರಪತ್ರದಲ್ಲಿರುವ ಕ್ಯುಆರ್‌ ಕೋಡ್‌ಅನ್ನು ಸ್ಕ್ಯಾನ್‌ ಮಾಡಿಸಿದರೆ, ಬೇರೆಯದೇ ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುವುದು ಮಾತ್ರವಲ್ಲದೆ ಅದು ಫೇಕ್‌ ಆಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಇದರಿಂದಾಗಿ ದಾನವಾಗಿ ಪಕ್ಷದ ಅಕೌಂಟ್‌ಗೆ ಬರಬೇಕಿದ್ದ ಹಣ, ಯಾವುದೋ ಫೇಕ್‌ ಅಕೌಂಟ್‌ನ ಪಾಲಾಗಿದೆ.

ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಆಗಿರುವ ತಪ್ಪಿನ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಕರಪತ್ರದ QR Code ನಲ್ಲಿ ಪಕ್ಷದ ತಪ್ಪಾದ ವೆಬ್‌ಸೈಟ್‌: ಕರಪತ್ರದಲ್ಲಿ ಪ್ರಿಂಟ್‌ ಮಾಡಿಸಿರುವ ಕ್ಯುಆರ್‌ ಕೋಡ್‌ಅನ್ನು ಸ್ಕ್ಯಾನ್‌ ಮಾಡಿದರೆ, “DonateINC.co.in ಎನ್ನುವ ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಆದರೆ, ಕಾಂಗ್ರೆಸ್‌ ಪಕ್ಷದ ಅಧಿಕೃತ ಡೊನೇಷನ್‌ ಲಿಂಕ್‌ DonateINC.in ಆಗಿದೆ. ಇದರಿಂದಾಗಿ ಕಾಂಗ್ರೆಸ್‌ ಪಕ್ಷ ಲಕ್ಷ ಲಕ್ಷ ದಾನವನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ. ಈ ಹಣ ಎಲ್ಲವೂ ತಪ್ಪಾದ ಅಕೌಂಟ್‌ಗೆ ಹೋಗಿದೆ ಎಂದು ವರದಿಯಾಗಿದೆ.

ತೆಲಂಗಾಣದಿಂದ ಭರ್ಜರಿ ದಾನ: ಮುಂಬರುವ ಲೋಕಸಭಾ ಚುನಾವನೆಯ ಕಾರಣಕ್ಕಾಗಿ ಡಿಸೆಂಬರ್‌ 28 ರಂದು ಕಾಂಗ್ರೆಸ್‌ ಡೊನೇಟ್‌ ಫಾರ್‌ ದೇಶ್‌ ಎನ್ನುವ ಕ್ರೌಡ್‌ ಫಂಡಿಂಗ್‌ ಅಭಿಯಾನವನ್ನು ಆರಂಭ ಮಾಡಿತ್ತು. ಆನ್‌ಲೈನ್‌ ಮೂಲಕ ಮಾತ್ರವೇ ದಾನವನ್ನು ಸ್ವೀಕಾರ ಮಾಡುವುದಾಗಿ ಘೋಷಣೆ ಮಾಡಿತ್ತು. ಕಾಂಗ್ರೆಸ್‌ ಸಂಸ್ಥಾಪನಾ ವರ್ಷದ ಕಾರಣಕ್ಕಾಗಿ ಈ ಅಭಿಯಾನ ಆರಂಭಿಸಲಾಗಿತ್ತು. ಇಲ್ಲಿಯವರೆಗೂ ಗರಿಷ್ಠ ದಾನ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ತೆಲಂಗಾಣ ಅಗ್ರಸ್ಥಾನ್ಲ್ಲಿದ್ದರೆ, ನಂತರದ ಸ್ಥಾನದಲ್ಲಿ ಹರ್ಯಾಣ ಹಾಗೂ ಮಹಾರಾಷ್ಟ್ರ ರಾಜ್ಯವಿದೆ.

ದೇಶಕ್ಕೆ ದೇಣಿಗೆ ಆರಂಭಿಸಿದ ಕಾಂಗ್ರೆಸ್, ಬಿಜೆಪಿ ಹೆಸರಿನಲ್ಲಿದೆ ಡೋನೇಶನ್ ವೆಬ್‌ಸೈಟ್!

Tap to resize

Latest Videos

ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ತೆಲಂಗಾಣವು ಅಗ್ರ ಸ್ಥಾನವನ್ನು ಹೊಂದಿದೆ, ಹರಿಯಾಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಮಹಾರಾಷ್ಟ್ರವು ನಂತರದ ಸ್ಥಾನದಲ್ಲಿದೆ. ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಕ್ರಮವಾಗಿ ನಾಲ್ಕು, ಐದನೇ ಮತ್ತು ಆರನೇ ಸ್ಥಾನಗಳನ್ನು ಪಡೆದುಕೊಂಡಿವೆ. ದೆಹಲಿ ಮತ್ತು ಪಂಜಾಬ್ ಏಳು ಮತ್ತು ಎಂಟನೇ ಸ್ಥಾನದಲ್ಲಿವೆ, ಕರ್ನಾಟಕ ಮತ್ತು ಬಿಹಾರ ಕೊನೇ ಎರಡು ಸ್ಥಾನಗಳನ್ನು ಹೊಂದಿದೆ.

'ಕಾಂಗ್ರೆಸ್‌ಗಾಗಿ ಕಾಸು ಕೊಡಿ..' ಲೋಕಸಭೆ ಚುನಾವಣೆಗೆ ಜನರಿಂದ ಹಣವೆತ್ತಲು ಮುಂದಾದ ಕಾಂಗ್ರೆಸ್‌!

click me!