'ಟೈಗರ್ ಪರ್ವತದ ಮೇಲೆ ಧ್ವಜ ಹಾರಿಸಿ 21 ವರ್ಷ'  ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ

Published : Jul 26, 2020, 03:37 PM ISTUpdated : Jul 26, 2020, 03:46 PM IST
'ಟೈಗರ್ ಪರ್ವತದ ಮೇಲೆ ಧ್ವಜ ಹಾರಿಸಿ 21 ವರ್ಷ'  ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ

ಸಾರಾಂಶ

ಕಾರ್ಗಿಲ್ ವಿಜಯ ದಿವಸ/ ಸೈನಿಕರ ಬಲಿದಾನ ಸ್ಮರಿಸಿದ ದೇಶ/ ರಾಜನಾಥ್ ಸಿಂಗ್ ರಿಂದ ವಂದೆನೆ/ ಸಂಘಟಿತ ಹೋರಾಟ ಸ್ಮರಿಸಿದ ಅಮಿತ್ ಶಾ/ ಟೈಗರ್ ಬೆಟ್ಟದ ಮೇಲೆ ಧ್ವಜ ಹಾರಿಸಿದ ದಿನ

ನವದೆಹಲಿ(ಜು.  26)  ಕಾರ್ಗಿಲ್ ವಿಜಯದ ದಿನಕ್ಕೆ 21 ವರ್ಷ. ನಾಗರಿಕರ ಆದಿಯಾಗಿ ನಾಯಕರು, ಸಚಿವರು ಯೋಧರ ಬಲಿದಾನವನ್ನು ಸ್ಮರಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್,  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ದೇಶಕ್ಕೆ  ಸೈನಿಕರ ಶೌರ್ಯ ಸ್ಮರಿಸಿದ್ದಾರೆ. ಕಾರ್ಗಿಲ್ ಯುದ್ಧದ ವಿಜಯ ಭಾರತದ ಸ್ವಾಭಿಮಾನ, ಅದ್ಭುತ ಪರಾಕ್ರಮ ಹಾಗೂ ಸಂಘಟಿತ ಹೋರಾಟದ ದ್ಯೋತಕ ಎಂದು ಅಮಿತ್ ಶಾ ಹೇಳಿದ್ದಾರೆ.

ಕಾರ್ಗಿಲ್ ಗೆಲುವು ಭಾರತದ ಶಕ್ತಿ ಮತ್ತು ಸಾಮರ್ಥ್ಯದ ಸಂಕೇತವಾಗಿತ್ತು ಎಂದು ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ತಮ್ಮ ಸರ್ವಸ್ವವನ್ನು ದೇಶಕ್ಕಾಗಿ ನೀಡಿದ ಸೈನಿಕರ ಬಲಿದಾನ ಎಂದೆಂದಿಗೂ ಸ್ಮರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಶಾಲಾ ದಿನದಲ್ಲೇ ಸೇನೆಗೆ ಸೇರಲು ಉತ್ಸುಕನಾಗಿದ್ದ; ಹುತಾತ್ಮ ಯೋಧನ ತಂದೆಯ ಮಾತು

ಕಾಲು ಕೆದರಿಕೊಂಡು ಬಂದಿದ್ದ ಪಾಕಿಸ್ತಾನವನ್ನು  1999ರಲ್ಲಿ ಹಡೆ ಮುರಿ ಕಟ್ಟಲಾಗಿತ್ತು. ಜುಲೈ  26, 1999 ರಲ್ಲಿ ಭಾರತೀಯ ಸೇನೆ ವಿಜಯದ ಪತಾಕೆ ಹಾರಿಸಿತ್ತು.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮತ್ತು ಮೂರು ಸೇನೆಗಳ ಮುಖ್ಯಸ್ಥರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ  ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ನಮನ ಸಲ್ಲಿಸದರು

ಟೈಗರ್ ಬೆಟ್ಟದಲ್ಲಿ ಭಾರತದ ಮುನ್ನಡೆ ಜೂನ್ 24 ರಂದು ಪ್ರಾರಂಭವಾಯಿತು. ಜುಲೈ 26 ರಂದು ಭಾರತವು ಶಿಖರವನ್ನು ವಶಪಡಿಸಿಕೊಳ್ಳುವ ಮೂಲಕ ಆಪರೇಷನ್ ವಿಜಯ್ ಪೂರ್ಣಗೊಂಡಿದ್ದು ಈಗ ಇತಿಹಾಸ.   ಕುತಂತ್ರಿ ಪಾಕಿಸ್ತಾನದ ಬಾಲ ಕತ್ತರಿಸಿದ ದಿನ. 

 

ಕಾರ್ಗಿಲ್ ವಿಜಯ್ ದಿವಸ್ ಜಾರಿಗೆ ಬಂದಿದ್ದು ಹೀಗೆ

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್