
ಭೋಪಾಲ್(ಜು. 26) ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ದೂರ ಮಾಡಲು ಪ್ರಪಂಚದಲ್ಲಿ ಲಸಿಕೆಗಾಗಿ ಹುಡುಕಾಟ ಮುಂದುವರಿದೆ ಇದೆ. ಇದೆಲ್ಲದರ ನಡುವೆ ಬಿಜೆಪಿ ಸಂಸದರೊಬ್ಬರು ಹನುಮಾನ್ ಚಾಲೀಸಾ ಪಠಣದ ಸಲಹೆ ನೀಡಿದ್ದಾರೆ.
ವೈರಸ್ ಸೋಂಕು ತಗುಲದಿರಲು ದಿನಕ್ಕೆ 5 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡಬೇಕು ಎಂದು ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಧ್ಯಾತ್ಮವೇ ಉತ್ತಮ ಮಾರ್ಗ. ಆಗಸ್ಟ್ 5ರವರೆಗೆ ದಿನಕ್ಕೆ 5 ಬಾರಿ ತಪ್ಪದೇ ಹುನುಮಾನ್ ಚಾಲೀಸಾ ಪಠಣ ಮಾಡಿದರೆ ಕೊರೋನಾ ದೂರವಾಗುತ್ತದೆ ಎಂದು ಹೇಳಿದ್ದಾರೆ.
ಹನುಮಾನ್ ಚಾಲೀಸಾದ ಮೊರೆ ಹೋದ ಕಾಂಗ್ರೆಸ್ ಮುಖಂಡ
ಆಗಸ್ಟ್ 5 ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಉತ್ತಮ ಆರೋಗ್ಯಕ್ಕೆ ಪ್ರಾರ್ಥನೆ ಮಾಡೋಣ ಎಂದಿದ್ದಾರೆ.
ಜುಲೈ 25 ರಿಂದ ಆರಂಭಿಸಿ ಆಗಸ್ಟ್ 5 ರವರೆಗೆ ಪಠಣ ಮಾಡೋಣ. ಆಗಸ್ಟ್ 5 ರಂದು ಶ್ರೀರಾಮನಿಗೆ ಆರತಿ ಕಾರ್ಯಕ್ರಮದ ಮೂಲಕ ಈ ಪಠಣ ಸಮಾಪ್ತಿ ಮಾಡೋಣ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು ಮಧ್ಯಪ್ರದೇಶ ಬಿಜೆಪಿ ಸರ್ಕಾರ ಕೊರೋನಾ ತಡೆಗೆ ಹೇಗೆ ಯತ್ನ ಮಾಡುತ್ತಿದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮೂರು ಸಾವಿರ ಕೊರೋನಾ ಸೋಂಕಿತರ ಮೂಲವೇ ಗೊತ್ತಿಲ್ಲ
ಈಗ ಜಾರಿಯಲ್ಲಿರುವ ಲಾಕ್ ಡೌನ್ ಆಗಸ್ಟ್ 4ಕ್ಕೆ ಕೊನೆಯಾಗಲಿದೆ. ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿವ ಕಾರ್ಯಕ್ರಮವನ್ನು ನಾವೆಲ್ಲರೂ ದೀಪಾವಳಿಯಂತೆ ಆಚರಣೆ ಮಾಡೋಣ ಎಂದಿದ್ದಾರೆ.
ದೇಶದ ಎಲ್ಲ ಹಿಂದೂಗಳು ಹನುಮಾನ್ ಚಾಲೀಸಾ ಪಠಣ ಮಾಡಬೇಕು ಎಂದು ಪ್ರಗ್ಯಾ ಕೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಪ್ರತಿಕ್ರಿಯೆಗಳು ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ