ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತುರ್ತು ಬಳಕೆ ಅನುಮತಿ ಕೇಳಿದ ಸೀರಂ!

By Suvarna NewsFirst Published Dec 7, 2020, 1:04 PM IST
Highlights

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಕೋವಿಶೀಲ್ಡ್‌| ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿ ಸೀರಂ ಇನ್‌ಸ್ಟಿಟ್ಯೂಟ್‌ ಭಾರತ ಸರ್ಕಾರಕ್ಕೆ ಮನವಿ 

ನವದೆಹಲಿ(ಡಿ.07): ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನಕಾ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಕೋವಿಶೀಲ್ಡ್‌ ಅನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಕೋರಿ ಸೀರಂ ಇನ್‌ಸ್ಟಿಟ್ಯೂಟ್‌ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ತನ್ಮೂಲಕ ಇಂಥ ಕೋರಿಕೆ ಸಲ್ಲಿಸಿದ ದೇಶೀಯ ಲಸಿಕೆ ಉತ್ಪಾದಕ ಕಂಪನಿ ಎಂಬ ಹೆಗ್ಗಳಿಕೆಗೆ ಸೀರಂ ಪಾತ್ರವಾಗಿದೆ.

ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್‌, ಬುಷ್‌!

ಭಾರತದಲ್ಲಿ ಬಳಕೆಗೆ ಅಮೆರಿಕ ಮೂಲದ ಫೈಝರ್‌ ಲಸಿಕೆ ಅನುಮತಿ ಕೋರಿದ ಬೆನ್ನಲ್ಲೇ, ತನ್ನ ಲಸಿಕೆ ಬಳಸಲು ಅನುಮತಿ ನೀಡಬೇಕೆಂದು ಕೋರಿ ಸೀರಂ ಸಂಸ್ಥೆಯು ಭಾರತೀಯ ಔಷಧ ನಿಯಂತ್ರಣ(ಡಿಸಿಜಿಐ)ಕ್ಕೆ ಮನವಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಆಕ್ಸ್‌ಫರ್ಡ್‌ ವಿವಿ ಇನ್ನೂ ಬ್ರಿಟನ್‌ ಸರ್ಕಾರದ ಬಳಿಯೇ ಇಂಥ ಅನುಮತಿ ಕೋರಿಲ್ಲ.

ಕೊರೋನಾ ಇಲ್ಲ, ಆಂಧ್ರದಲ್ಲಿ ನಿಗೂಢ ರೋಗದ ಕಾಟ!

ಭಾರತದಲ್ಲಿ ಲಸಿಕೆ ತುರ್ತು ಬಳಕೆ ಅನುಮತಿ ಕೋರಿದ ಫೈಝರ್‌!

ಇತ್ತೀಚೆಗಷ್ಟೇ ಬ್ರಿಟನ್‌ನಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿದ್ದ ಅಮೆರಿಕ ಮೂಲದ ಫೈಝರ್‌ ಕಂಪನಿ ಇದೀಗ ತನ್ನ ಕೊರೋನಾ ಲಸಿಕೆಯನ್ನು ಭಾರತದಲ್ಲೂ ಬಳಸಲು ಅನುಮತಿ ಕೋರಿದೆ. ಈ ಕುರಿತು ಅದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ. ಇದು ಭಾರತದಲ್ಲಿ ಯಾವುದೇ ಔಷಧ ಕಂಪನಿಯೊಂದು ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ ಮೊದಲ ಪ್ರಕರಣವಾಗಿದೆ.

ವಿದೇಶದಿಂದ ಲಸಿಕೆ ಆಮದು ಮಾಡಿಕೊಂಡು ಅದನ್ನು ಭಾರತದಲ್ಲಿ ವಿತರಿಸಲು ಕಂಪನಿ ಅನುಮತಿ ಕೋರಿದೆ. ಇದುವರೆಗೆ ಫೈಝರ್‌ ಭಾರತದಲ್ಲಿ ಯಾವುದೇ ಪ್ರಾಯೋಗಿಕ ಪರೀಕ್ಷೆ ನಡೆಸಿಲ್ಲ.

click me!