ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ಹಯ್ಯಾ ಕುಮಾರ್: ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್!

By Suvarna NewsFirst Published Jan 7, 2020, 1:42 PM IST
Highlights

2020ರ ವಿಶ್ವದ 20 ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ ಫೋರ್ಬ್ಸ್ ಇಂಡಿಯಾ| ಫೋರ್ಬ್ಸ್ ಪಟ್ಟಿಯಲ್ಲಿ ಕನ್ಹಯ್ಯಾ ಕುಮಾರ್, ಪ್ರಶಾಂತ್ ಕಿಶೋರ್'ಗೆ ಸ್ಥಾನ| ಭಾರತದ ಭವಿಷ್ಯದ ಮುಖಗಳು ಎಂದು ಶೀರ್ಷಿಕೆ ನೀಡಿರುವ ಫೋರ್ಬ್ಸ್ ಇಂಡಿಯಾ| ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡದ ದುಶ್ಯಂತ್ ಚೌಟಾಲಾ, ಮುವಾ ಮೊಹಿತ್ರಾ|

ಪಾಟ್ನಾ(ಜ.05): ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 2020ರ ವಿಶ್ವದ 20 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಜೆಎನ್'ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್ ಹಾಗೂ ಪ್ರಖ್ಯಾತ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಸ್ಥಾನ ಪಡೆದಿದ್ದಾರೆ.

ಭಾರತದ ಭವಿಷ್ಯದ ಮುಖಗಳು ಎಂದು ಶೀರ್ಷಿಕೆ ನೀಡಿರುವ ಫೋರ್ಬ್ಸ್ ಇಂಡಿಯಾ, ಭಾರತದ ರಾಜಕಾರಣದಲ್ಲಿ ಕನ್ಹಯ್ಯಾ ಕುಮಾರ್ ಹಾಗೂ ಪ್ರಶಾಂತ್ ಕಿಶೋರ್ ಪ್ರಮುಖ ಸ್ಥಾನ ಹೊಂದಿದ್ದಾರೆ ಎಂದು ಹೇಳಿದೆ.

ಕಲಬುರಗಿಯಲ್ಲಿ ಮೋದಿ ವಿರುದ್ಧ ಗುಡುಗಿದ ಕನ್ಹಯ್ಯ ಕುಮಾರ್

ವಿಶೇಷವೆಂದರೆ ಪ್ರಶಾಂತ್ ಕಿಶೋರ್ ಹಾಗೂ ಕನ್ಹಯ್ಯಾ ಕುಮಾರ್ ಇಬ್ಬರೂ ಬಿಹಾರ್ ಮೂಲದವರಾಗಿದ್ದು, ಕನ್ಹಯ್ಯಾ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸದಸ್ಯರಾದರೆ, ಪ್ರಶಾಂತ್ ಕಿಶೋರ್ ಜೆಡಿಯು ನಾಯಕರಾಗಿದ್ದಾರೆ.

| 20 people who could be the defining faces of this next decade: https://t.co/U4MDHYkKbG pic.twitter.com/QV0MPwGlZS

— Forbes India (@forbes_india)

ಇನ್ನುಳಿಂದಂತೆ ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋತಭಯಾ ರಾಜಪಕ್ಸಾ, ಸೌದಿ ಅರೇಬಿಯಾದ ಯುವ ರಾಜ ಮೊಹ್ಮದ್ ಬಿನ್ ಸಲ್ಮಾನ್, ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಆರ್ಡೆನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಫಿನ್'ಲ್ಯಾಂಡ್ ಪ್ರಧಾನಿ ಸನ್ನಾ ಮಾರಿನ್, ಹವಾಮಾನ ಸಂರಕ್ಷಣಾ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಸ್ಥಾನ ಪಡೆದಿದ್ದಾರೆ.

NRC, CAA ತಡೆಯಲು 2 ದಾರಿ ತೋರಿಸಿದ ಚುನಾವಣಾ ಚಾಣಕ್ಯ

ಅಲ್ಲದೇ ಹರಿಯಾಣದ ಉಪ ಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ, ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ, ಗರಿಮಾ ಅರೋರಾ ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

click me!