ಕೋವಿಂದ್ ಬರೋ ದಿನವೇ ಈಕೆಯ ಮದುವೆ: ಮುಂದೇನಾಯ್ತು ಗುರುವೇ?

By Suvarna NewsFirst Published Jan 7, 2020, 1:09 PM IST
Highlights

ಭಾರತದ ರಾಷ್ಟ್ರಪತಿಗಳೆಂದರೆ ತಮಾಷೆಯಲ್ಲ| ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ದೇಶದ ಪ್ರಥಮ ಪ್ರಜೆ| ರಾಷ್ಟ್ರಪತಿ ರಾಮನಾಥ್ ಕೋವಿಂದ್ ಒಂದು ಕೇರಳದ ಕೊಚ್ಚಿಗೆ ಆಗಮನ| ಕೊಚ್ಚಿಯ ಮಲಬಾರ್ ತಾಜ್ ಹೋಟೆಲ್‌ನಲ್ಲಿ ರಾಷ್ಟ್ರಪತಿ ಕೋವಿಂದ್ ವಾಸ್ತವ್ಯ| ತಾಜ್ ಹೋಟೆಲ್‌ನಲ್ಲಿ ಮದುವೆಯಾಗಬೇಕಿದ್ದ ಅಮೆರಿಕದ ಪ್ರಜೆ ಆಶ್ಲೆ ಹಾಲ್‌| ಮದುವೆ ಸಮಾರಂಭ ಬೇರೆಡೆ ನಡೆಸುವಂತೆ ಭದ್ರತಾ ಸಿಬ್ಬಂಧಿ ಮನವಿ| ರಾಷ್ಟ್ರಪತಿ ಕಚೇರಿಗೆ ಟ್ವೀಟ್ ಮಾಡಿ ಮನವಿ ಮಾಡಿದ್ದ ಅಶ್ಲೆ| ಆಶ್ಲೆ ಮದುವೆಗೆ ಭಂಗ ತರದ ರಾಷ್ಟ್ರಪತಿ ರಾಮನಾಥ್ ಕೋವಿಂದ್|

ಕೊಚ್ಚಿ(ಜ.07): ಭಾರತದ ರಾಷ್ಟ್ರಪತಿಗಳೆಂದರೆ ಏನು ತಮಾಷೆನಾ? ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಗಳು, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ರಾಯಭಾರಿಯೂ ಹೌದು.

ಅದರಂತೆ ರಾಷ್ಟ್ರಪತಿಗಳಿಗೆ ನೀಡುವ ಭದ್ರತೆಯೂ ಕೂಡ ಅಷ್ಟೇ ಮಹತ್ವದ್ದು. ರಾಷ್ಟ್ರಪತಿಗಳು ಎಲ್ಲೇ ಹೋದರೂ ಅವರ ಭದ್ರತಾ ಸಿಬ್ಬಂದಿ ಅವರೊಂದಿಗೆ ಸದಾ ನೆರಳಾಗಿ ಇರುತ್ತಾರೆ.

ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೇರಳದ ಕೊಚ್ಚಿಗೆ ಅಧಿಕೃತ ಭೇಟಿ ನೀಡಿದ್ದಾರೆ. ಕೊಚ್ಚಿಯ ಮಲಬಾರ್ ತಾಜ್ ಹೋಟೆಲ್‌ನಲ್ಲಿ ರಾಷ್ಟ್ರಪತಿ ಕೋವಿಂದ್ ವಾಸ್ತವ್ಯ ಹೂಡಿದ್ದಾರೆ.

ಮೈಸೂರು: ಕಾಲಿಗೆ ಬೀಳಲು ಬಂದ ಶಾಸಕನನ್ನು ತಡೆದ ರಾಷ್ಟ್ರಪತಿ

ಈ ಕಾರಣಕ್ಕೆ ಮಲಬಾರ್ ತಾಜ್ ಹೋಟೆಲ್‌ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಇಡೀ ಹೋಟೆಲ್‌ನ್ನು ರಾಷ್ಟ್ರಪತಿ ಭದ್ರತಾ ಸಿಬ್ಬಂದಿ ಸುಪರ್ದಿಗೆ ತೆಗೆದುಕೊಂಡಿದೆ.

Hey - anything you can do to help us with your security team so that we don’t have to move our wedding from the in under 48 hours? https://t.co/0S5y9az9Hk

— Ashley Hall (@hall_ash)

ಇಷ್ಟೇ ಆಗಿದ್ದರೆ ಅದರಲ್ಲೇನು ವಿಶೇಷತೆ ಇರಲಿಲ್ಲ. ಆದರೆ ಇಂದು ಮಲಬಾರ್ ತಾಜ್ ಹೋಟೆಲ್‌ನಲ್ಲಿ ಮದುವೆಯಾಗಬೇಕಿದ್ದ ಅಮೆರಿಕದ ಮಿಚಗಿನ್ ಪ್ರಜೆ ಆಶ್ಲೇ ಹಾಲ್‌ಗೆ ರಾಷ್ಟ್ರಪತಿ ಕೋವಿಂದ್ ಆಗಮನದಿಂದ ತಮ್ಮ 8 ವರ್ಷಗಳ ಕನಿಸಿಗೆ ಭಂಗ ಬಂದಂತೆ ಭಾಸವಾಗಿತ್ತು.

ಕಾರಣ ಕೋವಿಂದ್ ಆಗಮನದ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ರದ್ದುಗೊಳಿಸುವಂತೆ ಭದ್ರತಾ ಸಿಬ್ಬಂದಿ ಆಶ್ಲೆಗೆ ಆದೇಶ ನೀಡಿದ್ದರು. 8 ವರ್ಷಗಳಿಂದ ಕೇರಳದಲ್ಲಿ ಮದುವೆಯಾಗುವ ಕನಸು ಕಂಡಿದ್ದ ಆಶ್ಲೆಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿಯಾಗಿತ್ತು.

ಆದರೆ ತಮ್ಮ ಮದುವೆ ಇದೇ ದಿನ ಮಲಬಾರ್ ತಾಜ್ ಹೋಟೆಲ್‌ನಲ್ಲಿ ನಡೆಯಬೇಕೆಂಬ ಆಸೆ ಹೊಂದಿದ್ದ ಆಶ್ಲೆ ನೇರವಾಗಿ ರಾಷ್ಟ್ರಪತಿ ಕಚೇರಿಗೆ ಟ್ವೀಟ್ ಮಾಡಿ, ತಮ್ಮ ಮದುವೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.

We are glad the issues have been resolved. President Kovind conveys his best wishes to you on this joyous occasion

— President of India (@rashtrapatibhvn)

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಮನಾಥ್ ಕೋವಿಂದ್, ಆಶ್ಲೆ ಮದುವೆಗೆ ಅಡ್ಡಿ ಮಾಡದಂತೆ ತಮ್ಮ ಭದ್ರತಾ ಸಿಬ್ಬಂದಿಗೆ ಆದೇಶ ನೀಡಿದರು. ಅದರಂತೆ ಇಂದು ಕೋವಿಂದ್ ಉಳಿದುಕೊಂಡಿರುವ ತಾಜ್ ಹೋಟೆಲ್‌ನಲ್ಲೇ ಆಶ್ಲೆ ಮದುವೆ ಕೂಡ ನಡೆಯುತ್ತಿದೆ.

click me!