'ಹಿಂದೂ ಜಿನ್ನಾ' ಆಗಿದ್ದಾರೆ ಪ್ರಧಾನಿ ಮೋದಿ: ಗೊಗೋಯ್

By Suvarna NewsFirst Published Jan 7, 2020, 11:56 AM IST
Highlights

ಪೌರತ್ವ ಕಾಯ್ದೆಗೆ ದೇಶದಾದ್ಯಂತ ತೀವ್ರ ವಿರೋಧ| ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಗೊಗೋಯ್ ತೀವ್ರ ವಾಗ್ದಾಳಿ| ಮೋದಿ 'ಹಿಂದೂ ಜಿನ್ನಾ' ಎಂದ ಗೊಗೋಯ್

ಗುವಾಹಟಿ[ಜ.07]: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪೌರತ್ವ ಕಾಯ್ದೆ ಸಂಬಂಧ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿಯನ್ನು 'ಹಿಂದೂ ಜಿನ್ನಾ' ಎಂದು ಸಂಬೋಧಿಸಿರುವ ಗೊಗೋಯ್, ಮೋದಿ ಭಾರತವನ್ನು ಧರ್ಮಾಧಾರಿತವಾಗಿ ಇಬ್ಭಾಗ ಮಾಡಿದ್ದ ಮೊಹಮ್ಮದ್ ಅಲಿ ಜಿನ್ನಾರ 'ಟು ನೇಷನ್ ಥಿಯರಿ'ಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಾವು ಭಾರತೀಯ ಮುಸಲ್ಮಾನರು ಎನ್ನಲು ಹೆಮ್ಮೆಯಾಗುತ್ತೆ: ಪಾಕ್ ಪಿಎಂಗೆ ಓವೈಸಿ ಛಾಟಿ!

ಇನ್ನು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಹಿಂಸಾಚಾರವನ್ನು ನಿಂದಿಸಿರುವ ಗೊಗೋಯ್ 'ಪ್ರಧಾನ ಮಂತ್ರಿ ನಾವು ಪಾಕಿಸ್ತಾನದ ಭಾಷೆ ಮಾತನಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಅವರು ಖುದ್ದು ನೆರೆ ರಾಷ್ಟ್ರದಷ್ಟು ಕೆಳಗಿನ ಮಟ್ಟಕ್ಕಿಳಿದಿದ್ದಾರೆ. ಅವರು ಜಿನ್ನಾರ 'ಎರಡು ರಾಷ್ಟ್ರ ಸಿದ್ಧಾಂತ' ಅನುಸರಿಸುತ್ತಿದ್ದಾರೆ ಹಾಗೂ 'ಹಿಂದೂ ಜಿನ್ನಾ'ರಾಗಿ ಮಾರ್ಪಾಡಾಗುತ್ತಿದ್ದಾರೆ' ಎಂದಿದ್ದಾರೆ.

ನಾವು ಹಿಂದೂಗಳು ಆದರೆ ಭಾರತವನ್ನು ಹಿಂದೂ ರಾಷ್ಟ್ರವಾಗಿ ನೋಡಲು ಇಚ್ಛಿಸುವುದಿಲ್ಲ

'ಪೌರತ್ವ ಕಾಯ್ದೆ ಹಾಗೂ NCRಗೆ ದೇಶದೆಲ್ಲೆಡೆ ವ್ಯಕ್ತವಾಗುತ್ತಿರುವ ವಿರೋಧ ಕಾಣುತ್ತಿದೆ. ಈ ವಿರೋಧದಿಂದ ಜನರು ಬಿಜೆಪಿ ಹಾಗೂ ಅದದ ಸಹ ಸಂಘನೆಯ 'ಹಿಂದುತ್ವ' ವಿಚಾರಧಾರೆಯನ್ನು ತಳ್ಳಿ ಹಾಕುತ್ತಿರುವುದು ಸ್ಪಷ್ಟವಾಗಿದೆ. ಇದನ್ನು ವಿರೋಧಿಸುತ್ತಿರುವವರಲ್ಲಿ ಬಹುತೇಕರು ಹಿಂದೂಗಳು. ಇವರೆಲ್ಲರೂ RSS ಹಾಗೂ ಬಿಜೆಪಿಯ ಹಿಂದುತ್ವ ವಾದವನ್ನು ತಳ್ಳಿ ಹಾಕಿದ್ದಾರೆ' ಎಂದು ಗೊಗೋಯ್ ತಿಳಿಸಿದ್ದಾರೆ.

ಪೌರತ್ವ ಕಾಯ್ದೆ, NCRಗೆ ಪರ ವಿರೋಧ: ಈವರೆಗೆ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ತಿಳ್ಕೊಳ್ಳಿ

ತರುಣ್ ಗೊಗೋಯ್ ಮೂರು ಅವಧಿಯಲ್ಲಿ ಅಸ್ಸಾಂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗಾಘಲೇ ಜಾರಿಗೊಳಿಸಿರುವ NRC ಹಾಘೂ ಪೌರತ್ವ ಕಾಯ್ದೆ ವಿರುದ್ಧ ಗೊಗೋಯ್ ಕೇಂದ್ರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. 

click me!