*ರೈತ ಹೋರಾಟದ ಬಗ್ಗೆ ಕಂಗನಾ ವಿವಾದಿತ ಬರಹ : ದೂರು ದಾಖಲು!
*ಖಲಿಸ್ತಾನಿ ಉಗ್ರರು ಇಂದು ಸರ್ಕಾರವನ್ನು ತಿರುಚಬಹುದು : ರಣಾವತ್
*ಇದು ಸಿಖ್ ರೈತರನ್ನು ಉದ್ದೇಶಿಸಿದ ಬರಹ: ಅಕಾಲಿದಳ ದೂರು
ನವದೆಹಲಿ(ನ.22): ನಟಿ ಕಂಗಾನಾ ರಣಾವತ್ (Kangana Ranaut) ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ (Instagram story) ರೈತ ಹೋರಾಟದ (Farmers Protest) ಬಗ್ಗೆ ಬರೆದ ಬರಹ ವಿವಾದಕ್ಕೀಡಾಗಿದೆ. ಈ ಬರಹದಲ್ಲಿ ಅವರು ಸಿಖ್ (Sikh Farmers) ರೈತರ ಹೋರಾಟವನ್ನು ಸಿಖ್ ಖಲಿಸ್ತಾನಿ ಚಳವಳಿಗೆ ಪರೋಕ್ಷವಾಗಿ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕಾಲಿದಳ ನಾಯಕ (Akali Dal) ಮನ್‌ಜಿಂದರ್ ಸಿಂಗ್ ಸಿರ್ಸಾ ಈ ಬಗ್ಗೆ ನಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಖಲಿಸ್ತಾನಿಗಳನ್ನು ತಮ್ಮ ಚಪ್ಪಲಿಯ ಕೆಳಗೆ ಸೊಳ್ಳೆಯಂತೆ ಹೊಸಕಿ ಹಾಕಿದ್ದರು’ ಎಂಬುದೇ ಕಂಗನಾ ಅವರ ವಿವಾದಿತ ಬರಹವಾಗಿದೆ.
Pragya Thakur: 2014ರ ನಂತರ ಭಾರತಕ್ಕಷ್ಟೇ ಅಲ್ಲ, ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ!
undefined
ಕಂಗನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ‘ಖಲಿಸ್ತಾನಿ ಉಗ್ರರು (Terrorists) ಇಂದು ಸರ್ಕಾರವನ್ನು ತಿರುಚಬಹುದು. ಆದರೆ ಒಬ್ಬ ಮಹಿಳೆಯನ್ನು (Women) ನಾವು ಮರೆಯಬಾರದು. ಏಕೈಕ ಮಹಿಳಾ ಪ್ರಧಾನಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಇವರನ್ನು ಸೊಳ್ಳೆಗಳಂತೆ ತಮ್ಮ ಶೂ ಕೆಳಗೆ ಹೊಸಕಿ ಹಾಕಿದ್ದರು. ಆದರೆ ದೇಶವನ್ನು ಒಡೆಯಲು ಬಿಟ್ಟಿಲ್ಲ. ದಶಕಗಳ ನಂತರವೂ ಅವರ ಹೆಸರನ್ನು ಕೇಳಿದರೆ ಖಲಿಸ್ತಾನಿ ಉಗ್ರರು ಹೆದರಿ ನಡುಗುತ್ತಾರೆ. ಇವರಿಗೆ ಅಂತಹ ಗುರು ಬೇಕು’ ಎಂದು ಬರೆದಿದ್ದಾರೆ̤ ಇನ್ನೊಂದು ಸ್ಟೋರಿಯಲ್ಲಿ, ಇಂದಿರಾ ಗಾಂಧಿಯವರ (Indira Gadhi) ಚಿತ್ರದೊಂದಿಗೆ, ‘ಖಲಿಸ್ತಾನಿ ಚಳವಳಿಯ ಉಗಮದೊಂದಿಗೆ ಇವರ ಕಥೆಯು ಇನ್ನಷ್ಟುಮಹತ್ವ ಪಡೆದುಕೊಳ್ಳುತ್ತದೆ. ಶೀಘ್ರದಲ್ಲೇ ನಿಮ್ಮ ಮುಂದೆ ಎಮರ್ಜೆನ್ಸಿ’ ಎಂದು ಬರೆದಿದ್ದಾರೆ. ಕಂಗನಾ ನಟಿಸಲಿರುವ ಖಲಿಸ್ತಾನಿ ಚಳವಳಿಯ ಕಥೆ ಹೊಂದಿದ ಎಮರ್ಜೆನ್ಸಿ (Emergency) ಚಿತ್ರವನ್ನು ಈ ಮೂಲಕ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Filed a Police Complaint agnst for her disrespectful, contemptuous & insulting post on Instagram for calling whole Sikh Community as Khalistani terrorists & by saying that PM Indira Gandhi had crushed them as mosquitoes pic.twitter.com/fZ50gxGcjS
— Manjinder Singh Sirsa (@mssirsa)
ಇನ್ನೊಂದು ಕೆನ್ನೆ ತೋರಿಸಿದರೆ ಸಿಗೋದು ಭಿಕ್ಷೆ, ಸ್ವಾತಂತ್ರ್ಯವಲ್ಲ
ಗಾಂಧೀಜಿಯವರ ಅಹಿಂಸಾ (Gandhi and Ahimsa) ಮಂತ್ರವನ್ನು ಲೇವಡಿ ಮಾಡಿದ ನಟಿ ಕಂಗನಾ ರಣಾವತ್(Kangana Ranaut) ಹೊಸ ವಿವಾದ ಸೃಷ್ಟಿಸಿದ್ದಾರೆ. ‘ಕಳೆದ ವಾರ ಭಾರತ ಸ್ವಾತಂತ್ರ್ಯ ಪಡೆದಿದ್ದು ಭಿಕ್ಷೆಯಿಂದ ಎಂಬ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ತನ್ನ ಹೇಳಿಕೆಯನ್ನು ಸಮರ್ಥಿಸಿರುವ ಕಂಗನಾ, ‘ಗಾಂಧೀಜಿ ಅವರು ಸುಭಾಷ ಚಂದ್ರ ಬೋಸ್, ಭಗತ ಸಿಂಗ್‌ರಿಗೆ ಯಾವುದೇ ಬೆಂಬಲ ನೀಡಿಲ್ಲ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ಮುಂದಿಡುವುದರಿಂದ ಭಿಕ್ಷೆ ಸಿಗುವುದೇ ಹೊರತು ಸ್ವಾತಂತ್ರ್ಯವಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ಕುರಿತು ವಿವಾದಾತ್ಮಕ ಹೇಳಿಕೆ: ಕಂಗನಾ ವಿರುದ್ಧ 7 ಪುಟಗಳ ದೂರು ದಾಖಲು!
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ’ಗಾಂಧಿ, ಇತರರು ನೇತಾಜಿಯನ್ನು ಹಸ್ತಾಂತರಿಸಲು ಒಪ್ಪಿದರು’ ಎಂಬ ಶೀರ್ಷಿಕೆಯುಳ್ಳ ಹಳೆಯ ಸುದ್ದಿಯನ್ನು ಹಂಚಿಕೊಂಡ ನಟಿ, ‘ನೀವು ಒಂದೇ ಗಾಂಧಿ ಇಲ್ಲದಿದ್ದರೆ ನೇತಾಜಿಯನ್ನು ಬೆಂಬಲಿಸಬಹುದು. ಇಬ್ಬರನ್ನೂ ಒಟ್ಟಿಗೆ ಬೆಂಬಲಿಸಲು ಸಾಧ್ಯವಿಲ್ಲ, ಆಯ್ಕೆಮಾಡಿ, ನಿರ್ಧರಿಸಿ ಎಂದು ಬರೆದಿದ್ದಾರೆ.ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕಂಗನಾ, ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಟ ನಡೆಸುವ ಧೈರ್ಯವಿಲ್ಲದವರು ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಯಜಮಾನರಿಗೆ ಹಸ್ತಾಂತರಿಸಿದ್ದು ಕುತಂತ್ರ ಹಾಗೂ ಅಧಿಕಾರ ದಾಹವನ್ನು ತೋರಿಸುತ್ತದೆ. ಜಾಣ್ಮೆಯಿಂದ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ. ಜನರು ತಮ್ಮ ದೇಶದ ಇತಿಹಾಸ, ನಾಯಕರ ಬಗ್ಗೆ ತಿಳಿದುಕೊಳ್ಳಲು ಇದು ಸುಸಮಯ’ ಎಂದು ಬರೆದಿದ್ದಾರೆ.
ಭಾರತಕ್ಕೆ (india) ನೈಜ ಸ್ವಾತಂತ್ರ್ಯ ದೊರಕಿದ್ದು 2014ರಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ. 1947ರಲ್ಲಿ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಭಿಕ್ಷೆ ಎಂದು ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟಿ (bollywood actress) ಕಂಗನಾ ರಾಣಾವತ್ (Kangana ranaut) ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ.