ಕಲ್ಲಕುರಿಚಿ ವಿದ್ಯಾರ್ಥಿನಿ ಅನುಮಾನಸ್ಪದ ಸಾವು, ಹೊಸದಾಗಿ ಪೋಸ್ಟ್ ಮೊರ್ಟಂಗೆ ಹೈಕೋರ್ಟ್ ಸೂಚನೆ!

By Suvarna NewsFirst Published Jul 18, 2022, 2:16 PM IST
Highlights

ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವುದು ಪಡೆದುಕೊಂಡಿದೆ. ಸಾವಿಗೂ ಮುನ್ನ ವಿದ್ಯಾರ್ಥಿನಿಯ ದೇಹದಲ್ಲಿ ಗಾಯಗಳಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಹೊರಬಿದ್ದಿದೆ. ಇತ್ತ ಮದ್ರಾಸ್ ಹೈಕೋರ್ಟ್ ಹೊಸದಾಗಿ ಪೋಸ್ಟ್ ಮಾರ್ಟಂ ಮಾಡಲು ಸೂಚಿಸಿದೆ.

ಕಲ್ಲಾಕುರುಚಿ(ಜು.18): ತಮಿಳುನಾಡು  ಶಾಲಾ ವಿದ್ಯಾರ್ಥಿನಿಯ ಅನುಮಾನಸ್ಪದ ಸಾವು ಪ್ರಕರಣ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆಯಾಗಿದೆ. ಕಲ್ಲಕುರಿಚಿ ಜಿಲ್ಲೆಯಲ್ಲಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಮೃತದೇಹವನ್ನು ಹೊಸದಾಗಿ ಮರಣೋತ್ತರ ಪರೀಕ್ಷೆ ಮಾಡಲು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ನ್ಯಾಯ ಕೇಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿ ಕುಟುಂಬಕ್ಕೆ ಹೊಸ ಆಶ್ವಾಸಸನೇ ಸಿಕ್ಕಿದೆ. ಪ್ರಕರಣದ ಕುರಿತು ಆತಂಕ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ ಶಕ್ತಿ ಇಂಟರ್‌ನ್ಯಾಷನಲ್ ಸ್ಕೂಲ್  ಶಿಕ್ಷಣ ಸಂಸ್ಥೆಯಲ್ಲಿ ಆಗಿರುವ ಸಾವುಗಳ ಕುರಿತು ಸಿಬಿ- ಸಿಐಡಿ ತನಿಖೆ ನಡೆಸಲು ಹೈಕೋರ್ಟ್ ಸೂಚಿಸಿದೆ. 

ಶಕ್ತಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 12ನೇ ತರಗತಿ ವಿದ್ಯಾರ್ಥಿನಿ ಶ್ರೀಮತಿ ಸಾವೀಗೀಡಾಗಿದ್ದಳು. ಮಹಡಿ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿತ್ತು. ಇತ್ತ ಶ್ರೀಮತಿ ಡೆತ್ ನೋಟ್ ಕೂಡ ಪೊಲೀಸರಿಗೆ ಲಭ್ಯವಾಗಿತ್ತು. ಈ ಡೆತ್‌ನಲ್ಲಿ ಇಬ್ಬರು ಶಿಕ್ಷಕರ ಹೆಸರು ಉಲ್ಲೇಖಿಸಲಾಗಿದೆ. ಈ ಶಿಕ್ಷಕರ ಕಿರುಕುಳಕ್ಕೆ ಬೇಸತ್ತಿರುವುದಾಗಿ ಬರೆದುಕೊಂಡಿದ್ದಾಳೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೂ ಮುನ್ನವೇ ವಿದ್ಯಾರ್ಥಿನಿ ದೇಹದಲ್ಲಿ ಗಾಯಗಳಾಗಿದೆ ಎಂಬ ವರದಿ ಬಂದಿದೆ. ಇದು ಅನುಮಾನಕ್ಕೆ ಕಾರಣಾಗಿದೆ. ಇದರಿಂದ ನ್ಯಾಯ ಕೇಳಿ ಪ್ರೋಷಕರ ನಡುಸೆದ ಪ್ರತಿಭಟನೆಗೆ ಸಾರ್ವಜನಿಕರು ಸೇರಿಕೊಂಡಿದ್ದಾರೆ. ಸ್ಥಳೀಯರು ಹಾಗೂ ಸಾರ್ವಜನಿಕರ ಆಕ್ರೋಷಕ್ಕೆ ನಿನ್ನೆ(ಜು.17) ಶಕ್ತಿ ಶಾಲೆ ಧ್ವಂಸಗೊಂಡಿತ್ತು. 13 ಶಾಲಾ ಬಸ್ , 2 ಪೊಲೀಸ್  ವಾಹನ ಸೇರಿದಂತೆ 15 ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರತಿಭಟನೆ ಬೆನ್ನಲ್ಲೇ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಮದ್ರಾಸ್ ಹೈಕೋರ್ಟ್ ಮರಣೋತ್ತರ ಪರೀಕ್ಷೆ ಹೊಸದಾಗಿ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ. 

ತಮಿಳುನಾಡು ಬಾಲಕಿ ನಿಗೂಢ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಹಿಂಸಾಚಾರ

ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೇಳಿ ಶ್ರೀಮತಿ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಶಿಕ್ಷಕರ ವಿರದ್ದ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ. ಇಷ್ಟೇ ಅಲ್ಲ ಪೋಷಕರನ್ನು ಶಾಲಾ ಆವರಣದಿಂದ ಹೊರಕ್ಕೆ ಕಳುಹಿಸುವ ಪ್ರಯತ್ನ ಮಾಡಿದೆ. ಇದರಿಂದ ರೊಚ್ಚಿಗದ್ದ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಸ್ಥಳೀಯರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಪ್ರತಿಭಟನೆ ಸ್ವರೂಪ ಬದಲಾಯಿತು. ಉದ್ರಿಕ್ತರು ಶಾಲೆಗೆ ನುಗ್ಗಿ ಕಟ್ಟದ ಧ್ವಂಸಗೊಳಿಸಿದ್ದಾರೆ. ಶಾಲೆಯ ಬೆಂಚು ಡೆಸ್ಕ್ ಹೊರತಂದು ಬೆಂಕಿ ಹಚ್ಚಿದ್ದಾರೆ. ಇನ್ನು ಭಾನುವಾರ ಆಗಿದ್ದ ಕಾರಣ ಎಲ್ಲಾ ಶಾಲಾ ಬಸ್ ಆವರಣದಲ್ಲಿ ನಿಂತಿತ್ತು. 13 ಶಾಲಾ ಬಸ್‌ಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಇತ್ತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. 

ಶಿಕ್ಷಕರ ಕಿರುಕುಳ ಆರೋಪ, ವಿದ್ಯಾರ್ಥಿನಿ ಆತ್ಮಹತ್ಯೆಗೆ ಭಾರಿ ಪ್ರತಿಭಟನೆ, 13 ಬಸ್‌ಗೆ ಬೆಂಕಿ!

ಭಾರಿ ಪ್ರತಿಭಟನೆಯಿಂದ ಶಕ್ತಿ ಇಂಟರ್ನ್ಯಾಷನಲ್ ಸ್ಕೂಲ್‌ಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ.  2,000 ಪ್ರತಿಭಟನಕಾರರಿಂದ ಗಲಭೆ ಸೃಷ್ಟಿಯಾದ ಕಾರಣ ಕಲ್ಲಕುರಿಚಿ ಶಾಲಾ ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ.  ಉದ್ರಿಕ್ತರನ್ನು ಪತ್ತೆ ಹೆಚ್ಚಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. 

click me!