ಒಂದೇ ದಿನ 51 ಮಂದಿ ಕೋವಿಡ್‌ಗೆ ಬಲಿ, ಪ್ರಕರಣ ಇಳಿಕೆಯಾದರೂ ತಗ್ಗದ ಆತಂಕ!

Published : Jul 18, 2022, 01:45 PM IST
ಒಂದೇ ದಿನ 51 ಮಂದಿ ಕೋವಿಡ್‌ಗೆ ಬಲಿ, ಪ್ರಕರಣ ಇಳಿಕೆಯಾದರೂ ತಗ್ಗದ ಆತಂಕ!

ಸಾರಾಂಶ

ಕಳೆದ 24 ಗಂಟೆಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಇಳಿಕೆ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ, ಆತಂಕ ತಂದ ವರದಿ ದೈನಂದಿನ ಪಾಸಿಟಿವಿಟಿ ರೇಟ್ ಶೇಕಡಾ 6ಕ್ಕೆ ಏರಿಕೆ

ನವದೆಹಲಿ(ಜು.18): ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹಾವು ಏಣಿ ಆಟವಾಡುತ್ತಿದೆ. ಸತತ ಏರಿಕೆ ಕಾಣುತ್ತಿದ್ದ ಹೊಸ ಕೋವಿಡ್ ಪ್ರಕರಣ ಸಂಖ್ಯೆ ಕಳೆದ 24 ಗಂಟೆಯಲ್ಲಿ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಒಂದೇ ದಿನ 51 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇನ್ನು ದೇಶದಲ್ಲಿ 16,935 ಕೋವಿಡ್ ಪ್ರಕರಣಗಳು ದಾಖಲಾಗಿದೆ. ದೈನಂದಿನ ಪಾಸಿಟಿವಿಟಿ ರೇಟ್ ಬರೋಬ್ಬರಿ 161 ದಿನಗಳ ಬಳಿಕ ಮತ್ತೆ ಶೇಕಡಾ 6ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 4,37,67,534ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನ ಸರಾಸರಿ 20 ಸಾವಿರ ಹೋಸ ಕೋವಿಡ್ ಪ್ರಕರಣ ದಾಖಲಾಗಿದೆ. ಆದರೆ ಇದೀಗ 16 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಮತ್ತೆ ಆತಂಕ ಹೆಚ್ಚಿಸಿದೆ.  ಭಾರತದಲ್ಲಿ ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ 1,44,264ಕ್ಕೆ ಏರಿಕೆಯಾಗಿದೆ. 

ಎರಡನೇ ಅಲೆ ಬಳಿಕ ಭಾರತದಲ್ಲಿ ಕೋವಿಡ್ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದರೂ ಸಕ್ರೀಯ ಪ್ರಕರಣ ಸಂಖ್ಯೆ 1.44 ಲಕ್ಷದಲ್ಲಿದೆ. ಆದರೆ ಎರಡನೇ ಅಲೆ ಬಳಿಕ ಇದೀಗ ಮತ್ತೆ ಭಾರತದಲ್ಲಿ ಪ್ರತಿ ದಿನ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಲೇ ಸಾಗಿದೆ. ಕಳೆದ ಎಪ್ರಿಲ್‌ನಿಂದ ಕೋವಿಡ್ ಪ್ರಕರಣ ಏರಿಕೆಯಾಗುತ್ತಿದೆ. ಎರಡನೇ ಅಲೆ ಬಳಿಕ ಭಾರತದಲ್ಲಿ ದೀರ್ಘ ಅವಧಿ ವರೆಗೆ ಕೋವಿಡ್ ಏರಿಕೆಯಾಗಿಲ್ಲ. ಓಮಿಕ್ರಾನ್ ಪ್ರಕರಣಗಳು ಒಂದು ತಿಂಗಳಲ್ಲಿ ಏರಿಕೆಯಾಗಿ ಅಷ್ಟೇ ವೇಗವಾಗಿ ಇಳಿಕೆಯಾಗಿದೆ. ಆದರೆ ಈ ಬಾರಿ 3 ತಿಂಗಳ ಕಳೆದರೂ ಕೋವಿಡ್ ಪ್ರಕರಣ ಏರಿಕೆಯತ್ತ ಸಾಗಿದೆ. ಇದು ಆತಂಕ ತಂದಿದೆ.

 

200 ಕೋಟಿ ಕೋವಿಡ್‌ ಲಸಿಕೆ ಮೈಲಿಗಲ್ಲು ಸಾಧಿಸಿದ ಭಾರತ!

ಭಾರತದ ಬಹುತೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗಿದೆ. ಆದರೆ ಪ್ರಕರಣ ಸಂಖ್ಯೆ ಕಡಿಮೆ ಇದೆ. ಅಂಡಮಾನ್‌ನಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದ್ದ ಕೋವಿಡ್ ಇದೀಗ ಪ್ರತಿ ದಿನ 8 ರಿಂದ 10 ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಹೊಸ 12 ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸಕ್ರೀಯ ಕೇಸ್ 57ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ 2,601 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕೇರಳಕ್ಕೀಗ ಕೋವಿಡ್‌ಗಿಂತ ಮಂಕಿಪಾಕ್ಸ್ ಪ್ರಕರಣ ಭೀತಿ ಹೆಚ್ಚಾಗಿದೆ. ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ. ಮತ್ತೊರ್ವ ಯುವಕ ಮಂಕಿಪಾಕ್ಸ್ ರೋಗಲಕ್ಷಣಗಳಿಂದ ಆಸ್ಪತ್ರೆ ದಾಖಲಾಗಿದ್ದಾನೆ. ಹೀಗಾಗಿ ಕೇರಳದಲ್ಲಿ ತೀವ್ರ ನಿಘಾವಹಿಸಲು ಸೂಚಿಸಲಾಗಿದೆ. ಕೋವಿಡ್ ಮೊದಲ ಪ್ರಕರಣ ಕೇರಳದಲ್ಲೇ ಪತ್ತೆಯಾಗಿತ್ತು. ಇದೀಗ ಮಂಕಿಪಾಕ್ಸ್ ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.

ಮಕ್ಕಳಿಗೆ ಕೋವಿಡ್ ವೈರಸ್‌ಗಿಂತ ಮಂಕಿಪಾಕ್ಸ್ ಮಾರಕವಾಗಬಹುದು, ಏಮ್ಸ್ ಎಚ್ಚರಿಕೆ! 

ಬೆಂಗಳೂರು ನಗರದಲ್ಲಿ ಭಾನುವಾರ 799 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.5.45 ರಷ್ಟಿದೆ. 625 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 6878 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 26 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 27 508ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2592 ಮಂದಿ ಮೊದಲ ಡೋಸ್‌, 5796 ಮಂದಿ ಎರಡನೇ ಡೋಸ್‌ ಮತ್ತು 19120 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

ದೇಶದ ಬಹುತೇಕರು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯಲ್ಲಿ ಭಾರತ 200 ಕೋಟಿ ಡೋಸ್ ಮೈಲಿಗಲ್ಲು ಸ್ಥಾಪಿಸಿದೆ. ಈ ಮೂಲಕ ಭಾರತದ ಕೋವಿಡ್ ವಿರುದ್ದ ಶಕ್ತವಾಗಿ ಹೋರಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?