ಕೇವಲ 40 ನಿಮಿಷದಲ್ಲಿ ಅಚ್ಚರಿ, ವಂದೇ ಭಾರತ್ ರೈಲಿನ ಅನುಭವ ಹಂಚಿಕೊಂಡ ಡಾಕ್ಟರ್

Published : Oct 18, 2025, 06:43 PM IST
Vande Bharat

ಸಾರಾಂಶ

ಕೇವಲ 40 ನಿಮಿಷದಲ್ಲಿ ಅಚ್ಚರಿ, ವಂದೇ ಭಾರತ್ ರೈಲಿನ ಅನುಭವ ಹಂಚಿಕೊಂಡ ಡಾಕ್ಟರ್, ರೈಲು ಪ್ರಯಾಣದ ವೇಳೆ ವಾಶ್‌ರೂಂನಲ್ಲಿ ನಡೆದ ಘಟನೆ ಹಾಗೂ ಮನೆಗೆ ಬಂದ ಬಳಿಕ ನಡೆದ ಘಟನೆಯನ್ನು ಡಾಕ್ಟರ್ ವಿವರಿಸಿದ್ದಾರೆ. ಅಷ್ಟಕ್ಕೂ 40 ನಿಮಿಷದ ಘಟನೆ ಏನು?

ಚೆನ್ನೈ (ಅ.18) ವಂದೇ ಭಾರತ್ ರೈಲು ಪ್ರಯಾಣದ ವೇಳೆ ನಡೆದ ಘಟನೆ ಹಾಗೂ ಅದರ ಬಳಿಕ 40 ನಿಮಿಷದಲ್ಲಿ ನಡೆದ ಅಚ್ಚರಿ ಕುರಿತು ಡಾಕ್ಟರ್ ಬಹಿರಂಗಪಡಿಸಿದ್ದಾರೆ.ವೈದ್ಯರು ವಂದೇ ಭಾರತ್ ರೈಲು ಮೂಲಕ ಚೆನ್ನೈ ಸಮೀಪದ ಎಗಮೋರ್‌ಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ನಡುವೆ ವಾಶ್‌ರೂಂಗೆ ತೆರಳಿದ ವೈದ್ಯರು ತಮ್ಮ ವಾಚ್ ಬಿಚ್ಚಿಟ್ಟು ಮರೆತಿದ್ದಾರೆ. ವೈದ್ಯರು ರೈಲು ಇಳಿದು ಮನ ಸೇರಿದ ಬಳಿಕ ತಾವು ವಾಚ್ ಮರೆತಿರುವುದು ಗೊತ್ತಾಗಿದೆ. ತಕ್ಷಣವೇ ರೇಲ್ವೇ ವೆಬ್‌ಸೈಟ್ ಮೂಲಕ ದೂರು ದಾಖಲಿಸಿದ್ದಾರೆ. ಹೀಗೆ ದೂರು ದಾಖಲಿಸಿದ 40 ನಿಮಿಷಕ್ಕೆ ವೈದ್ಯರ ವಾಚ್ ಪತ್ತೆಯಾದ ರೋಚಕ ಘಟನೆಯನ್ನು ವೈದ್ಯರು ವಿವರಿಸಿದ್ದಾರೆ.

ಮಧ್ಯರಾತ್ರಿ 12.49ಕ್ಕೆ ಫೋನ್ ಕಾಲ್

ವೈದ್ಯರು ರಾತ್ರಿ 11 ಗಂಡೆಗೆ ಎಗಮೋರ್ ರೈಲು ನಿಲ್ದಾಣ ತಲುಪಿದ್ದಾರೆ. ರೈಲು ಇಳಿದು ಮನೆ ಸೇರಿದಾಗ ತಾವು ಪ್ರಯಾಣ ಮಾಡುತ್ತಿರುವಾಗ ವಾಶ್‌ರೂಂಗೆ ಹೋದ ಸಂದರ್ಭದಲ್ಲಿ ವಾಚ್ ಅಲ್ಲೆ ಬಿಟ್ಟಿರುವುದು ನೆನಪಿಗೆ ಬಂದಿದೆ. ಮನೆಗೆ ಬಂದಾಗಿದೆ. ಏನು ಮಾಡೋದು ಎಂದು ಮಧ್ಯ ರಾತ್ರಿ 12.28ರ ಹೊತ್ತಿಗೆ ಭಾರತೀಯ ರೈಲ್ವೇ ವೆಬ್‌ಸೈಟ್‌ನಲ್ಲಿ ತಮ್ಮ ರೈಲು ಪಿಎನ್ಆರ್ ಸಂಖ್ಯೆ, ಆಧಾರ್ ಸಂಖ್ಯೆ ಸೇರಿದಂತೆ ಇತರ ದಾಖಲೆ ನಮೂದಿಸಿ ದೂರು ದಾಖಲಿಸಿದ್ದಾರೆ. ದೂರು ಖಚಿತಪಡಿಸಿದ ಬಳಿಕ ವಾಚ್ ಕಳೆದುಕೊಂಡ ನೋವಿನಲ್ಲಿ ಯೋಚಿಸುತ್ತಾ ಕುಳಿತಿದ್ದಾರೆ. 12.49ರ ವೇಳೆಗೆ ರೈಲ್ವೇ ಇಲಾಖೆಯ ಆರ್‌ಪಿಎಫ್‌ನಿಂದ ಕರೆಯೊಂದು ಬಂದಿದೆ. ನೀವು ಪ್ರಯಾಣಿಸಿದ ವಂದೇ ಭಾರತ್ ರೈಲು ಯಾರ್ಡ್‌ಗೆ ತೆರಳಿದ.ಪರಿಶೀಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮಧ್ಯರಾತ್ರಿ 1.21ಕ್ಕೆ ವ್ಯಾಟ್ಸಾಪ್ ಮೆಸೇಜ್

ಮಧ್ಯರಾತ್ರಿ 1.21ಕ್ಕೆ ವ್ಯಾಟ್ಸಾಪ್ ಮೂಲಕ ವಾಚ್ ಫೋಟೋ ಬಂದಿದೆ. ಬಳಿಕ ಆರ್‌ಪಿಎಫ್‌ ಅಧಿಕಾರಿ ಕರೆ ಮಾಡಿ ವಾಚ್ ಪತ್ತೆಯಾಗಿದೆ. ಖಚಿತಪಡಿಸಿ ನಿಮ್ಮ ವಾಚ್ ಪಡೆದುಕೊಳ್ಳಿ ಎಂದು ಸೂಚಿಸಿದ್ದಾರೆ. ದೂರು ದಾಖಲಿಸಿ ವಾಚ್ ಪತ್ತೆಯಾದ ಸಮಯ, ಕರೆ ಎಲ್ಲವೂ ಸೇರಿ ಒಟ್ಟು 40 ನಿಮಿಷ ತೆಗೆದುಕೊಂಡಿದ್ದಾರೆ. 40 ನಿಮಿಷದಲ್ಲಿ ಕಳೆದುಹೋದ ವಾಚ್ ಪತ್ತೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

 

 

ಮರು ದಿನ ಸ್ಟೇಶನ್‌ಗೆ ತರಳಿ ದಾಖಲೆ ನೀಡಿ ವಾಚ್ ಪಡೆದುಕೊಂಡು ಬಂದದ್ದೇನೆ. ವಾಚ್‌ಗಾಗಿ ಶ್ರಮಿಸಿದ ರೈಲ್ವೇ ಇಲಾಖೆಯ ಎಲ್ಲಾ ಸಿಬ್ಬಂಧಿಗಳಿಗೆ ದೊಡ್ಡ ಸಲ್ಯೂಟ್. ಇದರ ನೀತಿ ಪಾಠ ಎಂದರೆ ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ, ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದು ವೈದ್ಯರು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು, ಮೈಸೂರು- ಚೆನ್ನೈ ನಡುವಿನ 42 ರೈಲುಗಳು 2 ತಿಂಗಳು ರದ್ದು: ಫುಲ್​ ಡಿಟೇಲ್ಸ್​ ಇಲ್ಲಿದೆ
'ಇನ್ಮುಂದೆ ನಾನು ಕಾಣಿಸಲ್ಲ': ಟ್ರೋಲ್‌ಗಳಿಂದ ಬೇಸತ್ತು ಲೈವ್‌ನಲ್ಲೇ ವಿಷ ಕುಡಿದ ರಾಜಸ್ಥಾನದ ಇನ್‌ಫ್ಲುಯೆನ್ಸರ್‌!