* ರಾಜಸ್ಥಾನ ಆಡಳಿತಾತ್ಮಕ ಸೇವೆ (ಆರ್‌ಎಎಸ್) 2018ರ ಫಲಿತಾಂಶ ಪ್ರಕಟ
* ಕಸ ಗುಡಿಸುವ ಮಹಿಳೆ ಈಗ ಆರ್‌ಎಎಸ್ ಅಧಿಕಾರಿ
* ಜೋಧ್‌ಪುರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು
ಜೋಧ್‌ಪುರ(ಜು.16): ರಾಜಸ್ಥಾನ ಆಡಳಿತಾತ್ಮಕ ಸೇವೆ (ಆರ್‌ಎಎಸ್) 2018ರ ಫಲಿತಾಂಶ ಹೊರಬಿದ್ದಿದ್ದು, ಇಲ್ಲಿ ಕಸಗುಡಿಸುವ ಮಹಿಳೆ ಆಶಾ ಕಂದರಾ ಆರ್‌ಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
UPSC ಪಾಸ್ ಮಾಡೋಕೆ 6 ತಿಂಗಳು ರೂಂನಲ್ಲಿ ಲಾಕ್ ಆಗಿದ್ದಾಕೆ ಈಗ IAS ಆಫೀಸರ್ ..!
8 ವರ್ಷದ ಹಿಂದೆ ಸಾಂಸಾರಿಕ ಜೀವನದಲ್ಲಿ ಬಿರುಕು ಉಂಟಾಗಿ ಆಶಾ ಗಂಡನನ್ನು ತ್ಯಜಿಸಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಎರಡು ಮಕ್ಕಳ ಜವಾಬ್ದಾರಿಯೂ ಈಕೆಯ ಮೇಲಿತ್ತು. ಹೀಗಾಗಿ ಜೋಧ್‌ಪುರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು.
ಈ ನಡುವೆಯೂ ಸಾಧಿಸುವ ಛಲ ಬಿಡದೆ ಹಗಲಿನಲ್ಲಿ ಜೋಧ್‌ಪುರ ರಸ್ತೆ ಸ್ವಚ್ಛಗೊಳಿಸುತ್ತಾ, ರಾತ್ರಿ ಅಭ್ಯಾಸ ನಡೆಸಿ ಅಂತೂ ಅತ್ಯುನ್ನತ ಹುದ್ದೆಗೇರಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ರೈತನ ಐವರು ಪುತ್ರಿಯರೂ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣ!
ಇನ್ನು ಈ ಬಗ್ಗೆ ಮಾತನಾಡಿರುವ ಆಶಾ 'ತಾನು ಕಸ ಗುಡಿಸುವಾಗ ಮಹಾನಗರ ಪಾಲಿಕೆಯಲ್ಲಿ ಕುಳಿತ ಅಧಿಕಾರಿಗಳನ್ನು ನೋಡುತ್ತಿದ್ದೆ. ಅವರಂತೆ ಅಧಿಕಾರಿಯಾಗಬೇಕು ಅನ್ನೋ ಹಂಬಲ ನನ್ನ ಮನಸ್ಸಿನಲ್ಲಿ ಹುಟ್ಟಿತ್ತು. ಪದವಿ ಪಡೆದೆ. ನಂತ್ರ ಆರ್‌ಎಎಸ್ ತಯಾರಿಯಲ್ಲಿ ತೋಡಗಿ, ಅಂತಿಮವಾಗಿ ನನ್ನ ಕಠಿಣ ಪರಿಶ್ರಮ ಫಲ ನೀಡಿತು. ನನ್ನ ಕನಸು ಇಂದು ನನಸಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.