ಬ್ಯೂಟಿ ಪಾರ್ಲರ್ ಮಹಿಳೆ ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದರು. ಪೊಲೀಸರು, ಕುಟುಂಬಸ್ಥರು ತೀವ್ರ ಹುಡುಕಾಟ ಆರಂಭಿಸಿದ್ದರು. ಇದೀಗ ಮಹಿಳೆ ಮೃತದೇಹ ಪತ್ತೆಯಾಗಿದೆ. ಆದರೆ ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ ಭೀಕರ ಘಟನೆ ವರದಿಯಾಗಿದೆ.
ಜೋಧಪುರ(ಅ.31) ಶ್ರದ್ಧಾ ವಾಕರ್ ಹತ್ಯೆ ಬಳಿಕ ದೇಶದಲ್ಲಿ ನಡೆದ ಹಲವು ಪ್ರಕರಣಗಳು ಈ ಹತ್ಯೆಗೆ ಹೋಲಿಕೆಯಾಗುತ್ತಿದೆ. ಹತ್ಯೆ ಮಾಡಿ ಮೃತದೇಹವನ್ನು ಕತ್ತರಿಸುವ ಘಟನೆಗಳು ಹೆಚ್ಚಾಗುತ್ತಿದೆ. ಈ ಸಾಲಿಗೆ ಇದೀಗ ಬ್ಯೂಟಿ ಪಾರ್ಲರ್ ಮಹಿಳೆ ಪ್ರಕರಣ ಸೇರಿಕೊಂಡಿದೆ. ಕತ್ತಲಾಗುತ್ತಿದ್ದಂತೆ ಬ್ಯೂಟಿ ಪಾರ್ಲರ್ ಶಾಪ್ ಮುಚ್ಚಿ ಮನೆಗೆ ತೆರಳಲು ಮಹಿಳೆ ಮುಂದಾಗಿದ್ದಾಳೆ. ಆದರೆ ಮಹಿಳೆ ಮನೆ ತಲುಪಿಲ್ಲ. ಕಳೆದೆರಡು ದಿನದಿಂದ ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಇದೀಗ ಪತ್ತೆಯಾಗಿದೆ. ಆದರೆ ಮಹಿಳೆ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.
ಜೋಧಪುರ ನಿವಾಸಿ ಅನಿತಾ ದೇವಿ(50) ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಮದುವೆ, ಇತರ ಕಾರ್ಯಕ್ರಮಗಳಿಗೂ ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅನಿತಾ ದೇವಿ ಕೆಲಸದಲ್ಲಿ ಪಕ್ವತೆ ಹಾಗೂ ಮಹಿಳಾ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದ ಅನಿತಾ ದೇವಿ ನೆಚ್ಚಿನ ಬ್ಯೂಟಿಶಿಯನ್ ಆಗಿದ್ದರು. ಹೀಗಾಗಿ ಪ್ರತಿ ದಿನ ಅನಿತಾ ದೇವಿ ಬ್ಯೂಟಿ ಪಾರ್ಲರ್‌ಗೆ ಗ್ರಾಹಕರು ಆಗಮಿಸುತ್ತಲೇ ಇದ್ದರು. ಅಕ್ಟೋಬರ್ 28 ರಂದು ಸಂಜೆಯಾಗುತ್ತಿದ್ದಂತೆ ಅನಿತಾ ದೇವಿ ಬ್ಯೂಟಿ ಪಾರ್ಲರ್ ಶಾಪ್ ಮುಚ್ಚಿದ್ದಾರೆ. ಬಳಿಕ ಮನೆಗೆ ಹೊರಟಿದ್ದಾರೆ. ಆದರೆ ಮನೆಗೆ ಮಾತ್ರ ತಲುಪಿಲ್ಲ.
ಉತ್ತರ ಭಾರತೀಯರಿಂದಾಗಿ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಳ: ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ
ರಾತ್ರಿಯಾದರೂ ಪತ್ನಿ ಅನಿತಾ ದೇವಿ ಮನಗೆ ಆಗಮಿಸಿದ ಕಾರಣ ಅನುಮಾನಗೊಂಡ ಪತಿ ಮನ್‌ಮೋಹನ್ ಚೌಧರಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾತ್ರಿಯೇ ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದಾರೆ. ಎರಡು ದಿನಗಳಲ್ಲಿ ಕೆಲ ಸುಳಿವು ಪತ್ತೆ ಹಚ್ಚಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನಿತಾ ದೇವಿ ಆಟೋ ರಿಕ್ಷಾ ಮೂಲಕ ಮನೆಗೆ ತೆರಳಲು ಮುಂದಾಗಿರುವುದು ಪತ್ತೆಯಾಗಿದೆ. ಆಟೋ ಚಾಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅನಿತಾ ದೇವಿಯನ್ನು ಗಂಗಾನಾ ವಲಯಕ್ಕೆ ಬಿಟ್ಟಿರುವುದಾಗಿ ಹೇಳಿದ್ದಾನೆ. ಇಷ್ಟೇ ಅಲ್ಲ ಈ ಹತ್ಯೆ ಹಿಂದಿನ ಮಹತ್ವದ ಸುಳಿವು ನೀಡಿದ್ದಾನೆ.
ಅನಿತಾ ದೇವಿ ಬ್ಯೂಟಿ ಪಾರ್ಲರ್ ಶಾಪ್ ಇದ್ದ ಕಟ್ಟಡದಲ್ಲೇ ಅಂಗಡಿ ಇಟ್ಟಿದ್ದ ಮೊಹಮ್ಮದ್ ಗುಲಾಮುದ್ದೀನ್ ಅಲಿಯಾಸ್ ಗುಲ್ ಮೊಹಮ್ಮದ್ ಪ್ರಮುಖ ಆರೋಪಿ.ಮೊಹಮ್ಮದ್ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮಹೊಮ್ಮದ್ ಕೃತ್ಯ ಕುರಿತು ಹಲವು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊಹಮ್ಮದ್‌ನ ಅರೆಸ್ಟ್ ಮಾಡಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಇತರ ಕೆಲ ಮಹಿಳೆಯರಿಗೂ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಮೊಹಮ್ಮದ್, ವಂಚಸುತ್ತಿದ್ದ.
ಅವಳಿಗೆ ಇಬ್ಬರು ಗಂಡಂದಿರು 3 ಬಾಯ್ಫ್ರೆಂಡ್ಸ್! ಲಕ್ಷ ಲಕ್ಷ ದುಡಿಯುತ್ತಿದ್ದ ಆಂಟಿ ಗಂಡನನ್ನೇ ಕೊಂದಳು!