ಯುವಕನೊಬ್ಬ ತನ್ನ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಸಿಡಿಸಿ ಅಪಾಯಕಾರಿ ಸಾಹಸ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಬೈಕ್‌ನ ಗತಿ ಏನಾಗಿದೆ ಎಂಬುದನ್ನು ನೀವೊಮ್ಮೆ ನೋಡಿ..
ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಯುವಜನರು ಹೆಚ್ಚಾಗಿ ವಿಭಿನ್ನವಾದುದನ್ನು ಮಾಡಲು ಹಾಗೂ ತಾವು ಬಹುಬೇಗ ಪ್ರಸಿದ್ಧಿಯಾಗಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಆದರೆ, ಈ ಪ್ರಯತ್ನ ಕೆಟ್ಟದ್ದೆಂದು ನಾವು ಹೇಳಲಾಗುವುದಿಲ್ಲ. ಆದರೆ, ಹುಚ್ಚಾಟ ಮಾಡಬಾರದು ಎನ್ನುವುದು ಈ ವೀಡಿಯೋದಿಂದ ನಿಮಗೆ ತಿಳಿಸಬಯಸುತ್ತೇವೆ.
ಸಾಮಾನ್ಯವಾಗಿ ಯುವಜನರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದು, ವಿಭಿನ್ನವಾದುದನ್ನು ಮಾಡಲು ಪ್ರಯತ್ನ ಮಾಡುತ್ತಾರೆ. ಸ್ಮಾರ್ಟ್ ಫೋನ್ ಬಳಸುವ ಎಲ್ಲರೂ ಇಂತಹ ವಿಚಿತ್ರ ಪ್ರಯತ್ನಗಳನ್ನು ನೋಡಿ ನಕ್ಕಿದ್ದೂ ಉಂಟು. ಇದೀಗ ನಾವು ತೋರಿಸುತ್ತಿರುವ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಸಿಡಿಸಿದ್ದಾನೆ. ಮೊದಲೇ ಪೆಟ್ರೋಲ್‌ಗೂ ಬೆಂಕಿಗೂ ಆಗಿ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೂ, ಈ ಯುವಕ ಪೆಟ್ರೋಲ್ ಟ್ಯಾಂಕ್ ಒಳಗೆ ಪಟಾಕಿ ಇಟ್ಟು ಬೆಂಕಿ ಹಚ್ಚಿ ಮುಂದೇನಾಗುತ್ತೋ ಎಂಬುದನ್ನು ನೋಡುವ ಸಾಹಸ ಮಾಡಿದ್ದಾನೆ.
ಇದನ್ನೂ ಓದಿ: ಕರ್ನಾಟಕಕ್ಕೆ ಅವಮಾನಿಸಿ, ಕನ್ನಡಿಗರನ್ನು ಕೆಣಕಿದ ಉತ್ತರ ಭಾರತೀಯನಿಗೆ ಕಾಲಿಗೆ ಬೀಳುವ ಪರಿಸ್ಥಿತಿ!
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಎಲ್ಲೆಲ್ಲಿಯೂ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅನಾಹುತಗಳ ಕುರಿತ ವಿಡಿಯೋಗಳದ್ದೇ ಸದ್ದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಪಟಾಕಿ ಹಾಕುತ್ತಿರುವುದು ಕಂಡು ಬರುತ್ತಿದೆ. ಪಟಾಕಿಯನ್ನು ಪೆಟ್ರೋಲ್ ಟ್ಯಾಂಕ್‌ಗೆ ಹಾಕಿದ ನಂತರ ಅದರ ತುದಿಗೆ ಬೆಂಕಿ ಹಚ್ಚಿ ದೂರದಲ್ಲಿ ನಿಂತಿದ್ದಾನೆ. ಸ್ವಲ್ಪ ಸಮಯದ ನಂತರ ಪಟಾಕಿ ಸ್ಫೋಟಗೊಂಡಿದೆ. ಇದರ ಪರಿಣಾಮ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಹಾಗೂ ಸೀಟು ಗಾಳಿಗೆ ತೂರಿಕೊಂಡು ದೂರ ಬಿದ್ದಿದೆ. ಇನ್ನು ಈ ವಿಡಿಯೋ ಯಾವಾಗ ಮಾಡಿದ್ದು ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ಸದ್ಯ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
शाबाश बेटा 😆 😂
अपनी बाइक की पेट्रोल की टंकी में सुतली बम डालकर जला दिया, आगे देखो अब क्या हुआ pic.twitter.com/cD3tx6ooII
ನೀವು ವೀಕ್ಷಿಸಿದ ವೀಡಿಯೊವನ್ನು @y_iamcrazyy ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ಪೋಸ್ಟ್ ಮಾಡುವಾಗ, 'ಒಳ್ಳೆಯದು ಮಗನೇ, ನೀನು ನಿನ್ನ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಬಾಂಬ್ ಇಟ್ಟು ಸುಟ್ಟು ಹಾಕಿದ್ದೀಯ, ಮುಂದೇನಾಯಿತು ನೋಡಿ' ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಸುದ್ದಿ ಬರೆಯುವವರೆಗೂ ವಿಡಿಯೋವನ್ನು 5.15 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ವೀಡಿಯೊವನ್ನು ನೋಡಿದ ನಂತರ, ಎಕ್ಸ್ ಖಾತೆ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ಈ ಹುಡುಗನಿಗೆ ಹುಚ್ಚು ಹಿಡಿದಿದೆ, ಏಕೆ ಹೀಗೆ ಮಾಡುತ್ತಿದ್ದಾನೆ. ಮತ್ತೊಬ್ಬ ಬಳಕೆದಾರರು ನಾನು ನನ್ನ ಸಹೋದರನ ಪ್ರತಿಭೆಯನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾನೆ. ಮತ್ತೊಬ್ಬರು ಬೈಕ್‌ನ ಟ್ಯಾಂಕ್ ಅನ್ನು ತೆಗೆದುಹಾಕಲು ಉತ್ತಮ ಮಾರ್ಗ ಕಂಡುಕೊಂಡಿದ್ದಾರೆ. ಮತ್ತೊಬ್ಬರು ಹಾಹಾ.. ಇಂಥಾ ಜನರು ಎಲ್ಲಿಂದ ಬರುತ್ತಾರೋ.? ಎಂದು ಕಾಮೆಂಟ್ ಮಾಡಿದ್ದಾರೆ.