ಡೆವಲಪ್ಪರ್ ಸಮುದಾಯ, AIನಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ, ವಿಶ್ವದ ಮನ್ನಣೆ!

By Chethan Kumar  |  First Published Oct 30, 2024, 4:38 PM IST

ಭಾರತ ಕಳೆದ ಕೆಲ ವರ್ಷಗಳಲ್ಲಿ ಮಹತ್ತರ ಬದಲಾವಣೆ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ದೈತ್ಯ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಇದೀಗ  ಭಾರತ ಡೆವಲಪ್ಪರ್ ಸಮುದಾಯ ಹಾಗೂ ಎಐ ಕ್ಷೇತ್ರದಲ್ಲಿ  ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂದು ಗಿಟ್‌ಹಬ್ ಸಿಇಒ ದಾಖಲೆ ಸಮೇತ ಪ್ರಶಂಸಿಸಿದ್ದಾರೆ.


ನವದೆಹಲಿ(ಅ.30) ಭಾರತ ತಂತ್ರಜ್ಞಾನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಬದಲಾವಣೆ ಹಾಗೂ ಅಭಿವೃದ್ಧಿಗೆ ಹಲವು ಮೆಚ್ಚುಗೆ, ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇದೀಗ ಮತ್ತೊಂದು ಕಿರೀಟ ಭಾರತದ ಮುಡಿಗೇರಿದೆ. ಡೆವಲಪ್ಪರ್ ಸಮುದಾಯ ಹಾಗೂ ಎಐ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂದು ಗಿಟ್‌ಹಬ್ ಸಿಇಒ ಥಾಮಸ್ ಡೋಹ್ಮಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ ಅಭಿವೃದ್ಧಿಯನ್ನು ಕೊಂಡಾಡಿದ ಥಾಮಸ್ ಡೋಹ್ಮಕೆ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಹೊಸತನ, ತಂತ್ರಜ್ಞಾನ, ಆವಿಷ್ಕಾರ ವಿಚಾರದಲ್ಲಿ ಭಾರತೀಯ ಯುವ ಸಮೂಹ ಅತ್ಯುತ್ತಮ ಎಂದು ಮೋದಿ ಹೇಳಿದ್ದಾರೆ.

ಡೆವಲಪ್ಪರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತ ಕಳೆದ ವರ್ಷದಿಂದ ಶೇಕಡಾ 28 ರಷ್ಟು ಪ್ರಗತಿ ಸಾಧಿಸಿದೆ.  ಇದು ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೆವಲಪ್ಪರ್ ಸಮುದಾಯ ಅನ್ನೋ ಕಿರೀಟ ತಂದೊಕೊಟ್ಟಿದೆ ಎಂದು ಥಾಮಸ್ ಹೇಳಿದ್ದಾರೆ.  ಇಷ್ಚೇ ಅಲ್ಲ ಸಾಫ್ಟ್‌ವೇರ್ ಡೆವಲಪ್ಪರ್ಸ್ ಹಾಗೂ ಎಐ ಕೊಡುಗೆಯಲ್ಲಿ ಜಾಗತಿಕ ಮಟ್ಟದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ವಿರಾಜಮಾನವಾಗಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ.

Tap to resize

Latest Videos

 

When it comes to innovation and technology, Indian youth are among the best! https://t.co/hpmsalotw4

— Narendra Modi (@narendramodi)

 

ಸಾರ್ವಜನಿಕ ಜನರೇಟೀವ್ ಎಐ ಪ್ರಾಜೆಕ್ಟ್‌ನಲ್ಲಿ ಎರಡನೇ ಸ್ಥಾನ, ಓಪನ್ ಸೋರ್ಸ್ ಪ್ರಾಜೆಕ್ಟ್ಸ್‌ನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಅಮೆರಿಕದ ನಂತರದ ಸ್ಥಾನದಲ್ಲಿದೆ. ಭಾರತ ಎಐ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಈ ಮೂಲಕ ಭಾರತದ ಡೆವಲಪ್ಪರ್ಸ್ ಕಮ್ಯೂನಿಟಿಯ ಪ್ರಗತಿ ಜಾಗತಿಕ ಮಟ್ಟದಲ್ಲೇ ಅಚ್ಚರಿ ಹುಟ್ಟಿಸುವಂತಿದೆ. ಅಮರಿಕೆ ಸೇರಿದಂತೆ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಗತಿ ಅತ್ಯಂತ ವೇಗವಾಗಿದೆ ಎಂದು ಥಾಮಸ್ ಹೇಳಿದ್ದಾರೆ.   

ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಆರೋಗ್ಯ ಭಾಗ್ಯ- ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಕೊಡುಗೆ

ಥಾಮಸ್ ಹಂಚಿಕೊಂಡಿರುವ ಟ್ವೀಟ್‌ನಲ್ಲಿ 2024ರಲ್ಲಿ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ. 108 ಮಿಲಿಯನ್ ಹೊಸ ರೆಪೋಸಿಟರಿ ಹೊಂದಿದ್ದು ಗಿಟ್‌ಹಬ್‌ನಲ್ಲಿ ಎಲ್ಲಾ ಯೋಜನೆಗಳಿಗೆ ಭಾರತ ನೀಡಿದ ಕೊಡುಗೆ 5.2 ಶತಕಕೋಟಿ ಎಂದು ಉಲ್ಲೇಖಿಸಿದೆ. ಈ ಪ್ರಗತಿ ಭಾರತವನ್ನು ವಿಶ್ವಮಟ್ಟದಲ್ಲಿ ಮೊದಲ ಸ್ಥಾನಕ್ಕೇರಿಸುವ ಎಲ್ಲಾ ಸಾಧ್ಯತೆಯನ್ನು ಥಾಮಸ್ ಹೇಳಿದ್ದಾರೆ.  

ಭಾರತದ ಸಾಧನೆಯ ಪಥದ ಕುರಿತು ಟ್ವೀಟ್ ಮಾಡಿರುವ ಥಾಮಸ್, ಭಾರತದ ಮೇಲೆ ಹೆಚ್ಚಿನ ಪ್ರೀತಿ ತೋರಿಸಬೇಕಾಗಿದೆ. ಇದಕ್ಕೆ ಕಾರಣ ಭಾರತದ ಅಭಿವೃದ್ಧಿ ಎಂದು ಹೇಳಿದ್ದಾರೆ.  ನಾನೀಗ ಭಾರತದ ಮೇಲೆ ಪ್ರೀತಿಯನ್ನು ತೋರಲೇಬೇಕಾಗಿದೆ. ಕಾರಣ ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡೆವಲಪ್ಪರ್ ಸಮುದಾಯವಾಗಿದೆ. ಜಾಗತಿಕ ಟೆಕ್ ಟೈಟಾನ್ ಆಗಿ ಭಾರತ ಪ್ರಗತಿ ಖಚಿತ ಎಂದು ಥಾಮಸ್ ಹೇಳಿದ್ದಾರೆ.  


 

India’s developers have gone a leap further: they’re increasingly using AI to build AI. India has the second-highest number of contributors to public generative AI projects.

This makes it evermore likely the next great AI multinational is borne on the continent. pic.twitter.com/Y8VpvNBc7X

— Thomas Dohmke (@ashtom)
click me!