
ಭೋಪಾಲ್: ದೇಶದಲ್ಲಿ ಎಷ್ಟೇ ನೇಮಕಾತಿ ಪರ್ವಗಳನ್ನು ನಡೆಸಿದರೂ ಕೇಂದ್ರ ಸರ್ಕಾರದಲ್ಲಿ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಇವೆ ಎಂಬ ಉತ್ತರ ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಯಿಂದ ಲಭಿಸಿದೆ. ರೈಲ್ವೆ, ರಕ್ಷಣಾ ಮತ್ತು ಗೃಹ ಇಲಾಖೆಯಿಂದ ಹಿಡಿದು ರಾಷ್ಟ್ರಪತಿಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯವರೆಗೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳವರೆಗೆ ಇಷ್ಟು ಹುದ್ದೆಗಳು ಖಾಲಿ ಇವೆ. ಆದರೆ ಈ ಅಂಕಿ ಅಂಶವು ಸಾರ್ವಜನಿಕ ವಲಯದ ಬ್ಯಾಂಕುಗಳು ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ಖಾಲಿ ಹುದ್ದೆಗಳನ್ನು ಒಳಗೊಂಡಿಲ್ಲ.
ಮಾರ್ಚ್ 1, 2024ರ ವೇಳೆಗೆ ಒಟ್ಟು 39,23,212 ಮಂಜೂರಾದ ಹುದ್ದೆಗಳಿದ್ದವು. ಇದಕ್ಕೆ ಪ್ರತಿಯಾಗಿ ಕೇವಲ 30,99,556 ಉದ್ಯೋಗಿಗಳು ಮಾತ್ರ ಕೆಲಸದಲ್ಲಿ ಇದ್ದರು. ಅಂದರೆ, 8,23,656 ಹುದ್ದೆಗಳು ಅಥವಾ ಶೇ.21ರಷ್ಟು ಹುದ್ದೆಗಳು ಖಾಲಿಯಾಗಿ ಉಳಿದಿವೆ ಎಂದು ಮಧ್ಯಪ್ರದೇಶದ ನೀಮಚ್ ಮೂಲದ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಸಲ್ಲಿಸಿದ ಆರ್‌ಟಿಐ ಅರ್ಜಿಯಿಂದ ಗೊತ್ತಾಗಿದೆ,
ಅರ್ಥಾತ್ ಸರ್ಕಾರ ಮಂಜೂರು ಮಾಡಿದ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಇದೆ.
ಆರ್‌ಟಿಐ ಮಾಹಿತಿಯ ಪ್ರಕಾರ, ರಾಷ್ಟ್ರಪತಿಗಳ ಸಚಿವಾಲಯ 803 ಅನುಮೋದಿತ ಹುದ್ದೆ ಹೊಂದಿತ್ತು ಆದರೆ ಕೇವಲ 516 ಜನರು ಮಾತ್ರ ಹುದ್ದೆಯಲ್ಲಿದ್ದರು, ಇದರಿಂದಾಗಿ 287 ಹುದ್ದೆಗಳು ಖಾಲಿಯಾಗಿವೆ. ಪ್ರಧಾನ ಮಂತ್ರಿ ಕಚೇರಿಯ 315 ಹುದ್ದೆಗಳಲ್ಲಿ 126 ಖಾಲಿ ಇದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ