ಹೆತ್ತ ಕರುಳಿನ ಮನಕಲುಕುವ ಘಟನೆ, ತೀವ್ರ ಚಳಿಗೆ ಹುತಾತ್ಮ ಯೋಧನ ಪುತ್ಥಳಿಗೆ ಕಂಬಳಿ ಹಾಸಿದ ತಾಯಿ

Published : Jan 10, 2026, 10:59 AM IST
martyred Gurnam Singh

ಸಾರಾಂಶ

ಹೆತ್ತ ಕರುಳಿನ ಮನಕಲುಕುವ ಘಟನೆ, ದೇಶಾದ್ಯಂದ ತೀವ್ರ ಚಳಿಗೆ ಜನರು ತತ್ತರಿಸಿದ್ದಾರೆ. ಇದೇ ವೇಳೆ ಹುತಾತ್ಮ ಯೋಧನ ಹೆತ್ತ ತಾಯಿ ಕರುಳು ಮಿಡಿಯದೇ ಇರುತ್ತಾ? ಮಗನ ಪತ್ಥಳಿಗೆ ಕಂಬಳಿ ಹಾಸಿದ ವಿದ್ರಾವ ಘಟನೆ ನಡೆದಿದೆ. 

ಜಮ್ಮು ಮತ್ತು ಕಾಶ್ಮೀರ (ಜ.10) ತಾಯಿ ಪ್ರೀತಿ-ಆರೈಕೆಗೆ ಮಿತಿ ಇಲ್ಲ. ಮಕ್ಕಳ ಯಶಸ್ಸು, ಆರೋಗ್ಯ, ಸಂತೋಷಕ್ಕಾಗಿ ಹೆತ್ತ ಕರಳು ಸದಾ ಮಿಡಿಯುತ್ತಲೇ ಇರುತ್ತೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ನೋವು ಬಿಡಿಸಿ ಹೇಳಲು ಅಸಾಧ್ಯ. ಇಲ್ಲೊಂದು ವಿಡಿಯೋ ಹೆತ್ತ ಕರಳಿನ ನೋವು, ಕಾಳಜಿ, ಪ್ರೀತಿ, ಆರೈಕೆ ಎಲ್ಲವನ್ನೂ ಸ್ಪಷ್ಟಪಡಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಗ, ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಗುರ್ನಾಮ್ ಸಿಂಗ್ ಹುತಾತ್ಮನಾಗಿದ್ದ. ಆದರೆ ಜಮ್ಮು ಮತ್ತು ಕಾಶ್ಮೀರದ ತೀವ್ರ ಚಳಿಗೆ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ನನ್ನ ಮಗನನ್ನು ಈ ತೀವ್ರ ಚಳಿಗೆ ಹೇಗೆ ಬಿಡಲಿ ಎಂದು ತಾಯಿ ಪುತ್ಥಳಿಗೆ ಕಂಬಳಿ ಹಾಸಿದ ಘಟನೆ ನಡೆದಿದೆ. ಮನಕಲುಕುವ ಘಟನೆಗೆ ಜನರು ಕಣ್ಣೀರಾಗಿದ್ದಾರೆ.

ಜಮ್ಮು ಕಾಶ್ಮೀರದ ಚಳಿಗೆ ನಾವೇ ತತ್ತರಿಸಿದ್ದೇವೆ, ಮಗನ ಹೇಗೆ ಬಿಡಲಿ

ಆರ್‌ಎಸ್‌ಪುರದಲ್ಲಿರುವ ಮಗನ ಪುತ್ಥಳಿ ಸಾರ್ವಜನಿಕ ಪ್ರದೇಶದಲ್ಲಿದೆ. ಗಾಜಿನ ಕೋಣೆ ರೀತಿ ಮಾಡಿ ಮಳೆ , ಧೂಳು ತಾಗದಂತೆ ಮಾಡಲಾಗಿದೆ. ತೀವ್ರ ಚಳಿ ವಾತಾವರಣದಲ್ಲಿ ನನ್ನ ಮಗ ಹೇಗೆ ಇರುತ್ತಾನೆ ಎಂದು ಹುತಾತ್ಮ ಮಗನ ಪುತ್ಥಳಿಗೆ ಕಂಬಳಿ ಹಾಸಿದ್ದಾರೆ. ನಾವೇ ಚಳಿಯಿಂದ ನಡುಗುತ್ತಿದ್ದೇವೆ. ಜಾಕೆಟ್, ಕಂಬಳಿ ಹಾಸಿದ್ದೇನೆ. ನನ್ನ ಮಗನನ್ನು ಹೇಗಿರುತ್ತಾನೆ, ಹೀಗಾಗಿ ಕಂಬಳಿ ಹಾಸಿದ್ದೇನೆ ತೀವ್ರ ಚಳಿಯನ್ನು ನನ್ನ ಮಗ ತಡೆದುಕೊಳ್ಳಲು ಕಂಬಳ ಹಾಸಿದ್ದೇನೆ ಎಂದು ಹುತಾತ್ಮ ಯೋಧ ಗುರ್ನಾಮ್ ಸಿಂಗ್ ತಾಯಿ ಜಸ್ವಂತ್ ಕೌರ್ ಹೇಳಿದ್ದಾರೆ.

ಜಸ್ವಂತ್ ಕೌರ್ ಪ್ರತಿ ದಿನ ಬೆಳಗ್ಗೆ ಹುತಾತ್ಮ ಮಗನ ಪುತ್ಥಳಿ ಬಳಿ ತೆರಳಿ ಹೂವುಗಳನ್ನು ಅರ್ಪಿಸುತ್ತಾರೆ. ಪುತ್ಥಳಿ ಸ್ವಚ್ಚಗೊಳಿಸಿ ಪೂಜೆ ಸಲ್ಲಸಿ ಕೆಲ ಹೊತ್ತು ಪುತ್ಥಳಿ ಜೊತೆ ಮಾತನಾಡುತ್ತಾರೆ. ತನ್ನ ಮಗನೆ ನಿಂತಿದ್ದಾನೆ ಎಂದು ಪ್ರತಿ ದಿನ ಮಾತನಾಡುತ್ತಾರೆ. ಇದೀಗ ತೀವ್ರ ಚಳಿ ಎಂದು ಹಾಸಿಗೆ ಹೊದಿಸಿದ್ದಾರೆ. ತಾಯಿ ಪ್ರೀತಿಗೆ ಮಿತಿ ಎಲ್ಲಿದೆ ಎಂದು ಸ್ಥಳೀಯರು ಕಣ್ಮೀರಿಟ್ಟಿದ್ದಾರೆ.

ಆರ್‌ಎಸ್ ಪುರದಲ್ಲಿರುವ ಹುತಾತ್ಮ ಮಗನ ಪುತ್ಥಳಿ

ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ ನಿವಾಸಿಯಾಗಿದ್ದ ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಗುರ್ನಾಮ್ ಸಿಂಗ್ ಧೈರ್ಯ ಹಾಗೂ ಸಾಹಸಿಯಾಗಿ ಗಮನಸೆಳೆದಿದ್ದರು. ಉಗ್ರರ ಕಾರ್ಯಾಚರಣೆಯಲ್ಲಿ ಮುಂದಾಳತ್ವ ವಹಿಸಿ ಹೋರಾಡುತ್ತಿದ್ದ ಗುರ್ನಾಮ್ ಸಿಂಗ್ 2016ರ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಗುರ್ನಾಮ್ ಹೋರಾಟದ ಕತೆ ಎಂತವರ ಎದೆ ಝಲ್ಲೆನೆಸುವಂತೆ ಮಾಡತ್ತೆ.

2016ರ ಅಕ್ಟೋಬರ್ 21ರಂದು ಗುರ್ನಾಮ್ ಸಿಂಗ್ ಭಾರತ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆ ಹರಿ ನಗರ ಸೆಕ್ಟರ್‌ನಲ್ಲಿ ಕಾವಲಿದ್ದರು. ಅಕ್ಟೋಬರ್ 20 ರಂದು ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ತಕ್ಕ ಉತ್ತರ ನೀಡಲಾಗಿತ್ತು. ಆದರೆ ಪಾಕಿಸ್ತಾನದ ದಾಳಿ ಹಿಂದೆ ಷಡ್ಯಂತ್ರವಿತ್ತ. ಒಂದೆಡೆ ಗುಂಡಿನ ದಾಳಿ ನಡೆಸಿ ಮತ್ತೊಂದೆಡೆಯಿಂದ ಉಗ್ರರನ್ನು ಒಳ ನುಸುಳಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಗುರ್ನಾಮ್ ಸಿಂಗ್ ಒಬ್ಬನೇ ಒಬ್ಬನನ್ನು ಒಳ ನುಸುಳಲು ಅವಕಾಶ ಮಾಡಿಕೊಟ್ಟಿಲ್ಲ. ಪ್ರತಿಯೊಬ್ಬರನ್ನು ಗುಂಡಿಕ್ಕೆ ಹತ್ಯೆ ಮಾಡಿ ದೇಶವನ್ನುರಕ್ಷಿಸಿಸಿದ್ದ.

ಮರುದಿನ ಅಂದರೆ ಅಕ್ಟೋಬರ್ 21ರಂದು ಬೆಳಗ್ಗೆ ಪಾಕಿಸ್ತಾನ ಮಾಸ್ಟರ್ ಪ್ಲಾನ್ ಹಾಗೂ ಹೆಚ್ಚಿನ ಸೇನೆಯೊಂದಿಗೆ ಭಾರತದ ಗಡಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಮುಂದಾಗಿತ್ತು. ಇದಕ್ಕೆ ಪಾಕಿಸ್ತಾನದ ಉಗ್ರರು ನೆರವು ನೀಡಿದ್ದರು. ಬೆಳ್ಳಂಬೆಳಗ್ಗೆ ಪಾಕಿಸ್ತಾನ ಸ್ನೈಪರ್ ಸಿಡಿಸಿದ ಗುಂಡು ನೇರವಾಗಿ ಗುರ್ನಾಮ್ ಸಿಂಗ್ ತಲೆಗೆ ಹೊಕ್ಕಿತ್ತು. ಆದರೆ ಪ್ರತಿ ದಾಳಿ ನಡೆಸಿ ಸ್ನೈಪರ್ ಹತ್ಯೆ ಮಾಡಿದ್ದ ಗುರ್ನಾಮ್ ಸಿಂಗ್‌ನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಗುಂಡು ಬಿದ್ದಿತ್ತು. ಆದರೆ ಸಾಹಸಿ, ವೀರ ಗುರ್ನಾಮ್ ಸಿಂಗ್ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡಿ ಹುತಾತ್ಮನಾಗಿದ್ದ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋ ದಿನ ದೂರವಿಲ್ಲ, ಅಸಾದುದ್ದೀನ್ ಓವೈಸಿ ಭವಿಷ್ಯ
ಹೆತ್ತ ಕರಳಿನ ಮನಕಲುಕುವ ಘಟನೆ, ತೀವ್ರ ಚಳಿಗೆ ಹುತಾತ್ಮ ಯೋಧನ ಪುತ್ಥಳಿಗೆ ಕಂಬಳಿ ಹಾಸಿದ ತಾಯಿ