ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜಕರ ವಿರುದ್ಧ ಗರಂ

Published : Apr 18, 2026, 12:40 PM IST
Omar Abdullah Refuses to Cut Tricolor Ribbon | Shows Respect to National Flag

ಸಾರಾಂಶ

ಉದ್ಘಾಟನೆಗೆ ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ನಿರಾಕರಿಸಿದ ಸಿಎಂ ಒಮರ್, ಆಯೋಜಕರ ವಿರುದ್ಧ ಬಿಜೆಪಿ ಗರಂ ಆಗಿದೆ. ಕಟ್ಟಿದ ರಿಬ್ಬನ್ ತೆಗಿಸಿ ಸುರಕ್ಷಿತವಾಗಿಡುವಂತೆ ಓಮರ್ ಅಬ್ದುಲ್ಲಾ ಸೂಚಿಸಿದ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.

ಶ್ರೀನಗರ (ಏ.18) ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಶ್ರೀನಗರದಲ್ಲಿ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಮುಖ್ಯ ಕಾರಣ ಉದ್ಘಾಟನೆಗೆ ಕಟ್ ಮಾಡಲು ರಾಷ್ಟ್ರಧ್ವಜ ರಿಬ್ಬನ್ ಹಾಕಲಾಗಿತ್ತು. ರಾಷ್ಟ್ರಧ್ವಜದ ರಿಬ್ಬನ್ ಕಟ್ ಮಾಡಲು ಸಾಧ್ಯವಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದು ಮಾತ್ರವಲ್ಲ, ರಿಬ್ಬನ್ ಬಿಚ್ಚಿಸಿದ ಘಟನೆ ಶ್ರೀನಗರದಲ್ಲಿ ನಡೆದಿದೆ.

ರಿಬ್ಬನ್ ಬಿಚ್ಚಿಸಿ ಸುತ್ತಿಕೊಟ್ಟ ಸಿಎಂ

ಸ್ಥಳೀಯ ಕರಕುಶಲತೆಯನ್ನು ದೇಶಾದ್ಯಂತ ಪ್ರಚಾರ ಮಾಡಿ ವ್ಯಾಪಾರ ವಹಿವಾಟು ಹೆಚ್ಚಿಸುವುದು ಹಾಗೂ ಕಾಶ್ಮೀರದ ಕರಕುಶಲತೆ ಬೇಡಿಕೆಯನ್ನು ದೇಶವ್ಯಾಪಿ ಹೆಚ್ಚಿಸಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಆರಂಭಗೊಂಡ ನೋ ಯುವರ್ ಆರ್ಟಿಸಾನ್ ಉದ್ಘಾಟನೆಗೆ ಭಾರತದ ರಾಷ್ಟ್ರಧ್ವಜದ ರಿಬ್ಬನ್ ಬಳಸಲಾಗಿತ್ತು. ಇದು ಕೇವಲ ಕೇಸರಿ, ಬಿಳಿ, ಹಸಿರು ರಿಬ್ಬನ್ ಆಗಿರಲಿಲ್ಲ. ಅಕ್ಷರಶಃ ರಾಷ್ಟ್ರಧ್ವಜವೇ ಆಗಿತ್ತು, ಅಶೋಕ ಚಕ್ರ ಮುದ್ರಣಗೊಂಡಿತ್ತು. ಉದ್ಘಾಟನೆಗೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಗಮಿಸಿದ್ದರು.

ರಿಬ್ಬನ್ ಬಿಚ್ಚಿಸಿದ ಸಿಎಂ

ರಿಬ್ಬನ್ ಕಟ್ ಮಾಡಲು ಆಗಮಿಸುತ್ತಿದ್ದಂತೆ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ರಾಷ್ಟ್ರಧ್ವಜದ ರಿಬ್ಬನ್ ಕತ್ತರಿಸುವುದು ಹೇಗೆ? ಯಾಕೆ ಹೀಗೆ? ಇದು ಸಾಧ್ಯವಿಲ್ಲ. ಇದನ್ನು ಬಿಚ್ಚಿ ಎಂದಿದ್ದಾರೆ. ಸಿಎಂ ಸ್ಥಳದಲ್ಲೇ ಸೂಚನೆ ನೀಡಿದ ಕಾರಣ ತಕ್ಷಣವೇ ರಿಬ್ಬನ್ ಬಿಚ್ಚಲಾಗಿದೆ. ಸ್ವತಃ ಸಿಎಂ ಓಮರ್ ಅಬ್ದುಲ್ಲಾ ರಿಬ್ಬನ್ ಬಿಚ್ಚಿಸಿದ್ದಾರೆ. ಬಳಿಕ ರಿಬ್ಬನ್ ಸುತ್ತಿ ಆಯೋಜಕರಿಗೆ ನೀಡಿದ್ದಾರೆ. ಇಷ್ಟೇ ಅಲ್ಲ, ಈ ರಿಬ್ಬನ್ ಗೌರವಯುತವಾಗಿ ಎತ್ತಿಡಿ ಎಂದು ಸೂಚಿಸಿದ್ದಾರೆ.

ಸಿಎಂ ನಡೆ ಶ್ಲಾಘಿಸಿ ಆಯೋಜಕರ ವಿರುದ್ಧ ಕೆಂಡಕಾರಿದ ಬಿಜೆಪಿ

ಶ್ರೀಗನರದ ಕಾರ್ಯಕ್ರಮದಲ್ಲಿನ ಘಟನೆ ಕುರಿತು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಪ್ರತಿಕ್ರಿಯಿಸಿದೆ. ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರಧ್ವಜ ರಿಬ್ಬನ್ ಹಾಕಿ ದೇಶದ ಧ್ವಜಕ್ಕೆ ಅವಮಾನ ಮಾಡಲಾಗಿದೆ. ದೇಶದ ಧ್ವಜಕ್ಕೆ ಗೌರವ ನೀಡುವದನ್ನೇ ಮರೆತಿದ್ದಾರೆ, ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರ ನಡುವೆ ಓಮರ್ ಅಬ್ದುಲ್ಲಾ ನಡೆಯನ್ನು ಬಿಜೆಪಿ ಶ್ವಾಘಿಸುತ್ತಿದೆ. ರಾಷ್ಟ್ರಧ್ವಜ ರಿಬ್ಬನ್ ಕಟ್ ಮಾಡಲು ನಿರಾಕರಿಸುವ ಮೂಲಕ ದೇಶಪ್ರೇಮ ಮೆರೆದಿದ್ದು ಮಾತ್ರವಲ್ಲ, ಆಯೋಜಕರಿಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆದರೆ ಇದು ಅಚನಕ್ಕಾಗಿ ಆಗಿರುವ ತಪ್ಪಲ್ಲ, ಇದರ ಹಿಂದೆ ಷಡ್ಯಂತ್ರ ಇದೆ ಎಂದು ಬಿಜೆಪಿ ಹೇಳಿದೆ. ಹೀಗಾಗಿ ಆಯೋಜಕರ ವಿರುದ್ದ ಆಕ್ರೋಶ ಹೊರಹಾಕಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಣ್ಣ-ತಮ್ಮನ ಒಟ್ಟಿಗೇ ಮದ್ವೆಯಾದಾಕೆ ಈಗ ಮಗುವಿನ ಅಮ್ಮ- ಒಬ್ಬ ಅಪ್ಪ ಸ್ವದೇಶಿ, ಇನ್ನೊಬ್ಬ ವಿದೇಶಿ
ರಾಸಲೀಲೆ ಕೇಸ್ ನಾಸಿಕ್ ಗುರೂಜಿ ಆಪ್ತ,ಪತ್ನಿ ಅಪಘಾತದಲ್ಲಿ ಸಾವು, ಅನುಮಾನ ಹೆಚ್ಚಿಸಿದ ಆ್ಯಕ್ಸಿಡೆಂಟ್