
ಪಿಟಿಐ ನವದೆಹಲಿ (ಏ.18): ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು.
ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದ್ದೇವೆ. ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್‌ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ’ ಹಾಸ್ಯ ಮಾಡಿದರು.
ಸದನದಲ್ಲಿ ಮಾತನಾಡುವಾಗ ಎಂಥ ಭಾಷೆ ಬಳಸುತ್ತೀರಿ. ಆಡಳಿತ ಸದಸ್ಯರನ್ನು ಹೇಡಿ ಎನ್ನುತ್ತೀರಿ. ಇಂಥ ಪದ ಬಳಕೆ ಸರಿಯೇ? ಪ್ರಿಯಾಂಕಾರನ್ನು ನೋಡಿ ಕಲಿಯಿರಿ ಎಂದು ಅಮಿತ್ ಶಾ ರಾಹುಲ್ ಗಾಂಧಿಗೆ ತಿವಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ