ಕಾಂಗ್ರೆಸ್ ನಾಯಕ, ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಮಹಿಳೆಯೊಬ್ಬರೊಂದಿಗೆ ನಡೆಸಿದ್ದರು ಎನ್ನಲಾದ ಅಶ್ಲೀಲ ವಿಡಿಯೋ ಚಾಟೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಸಚಿವನ ಬಗ್ಗೆ ಆಕ್ರೋಶ ಕೇಳಿ ಬಂದಿದೆ.
ರಾಂಚಿ: ಕಾಂಗ್ರೆಸ್ ನಾಯಕ, ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರು ಮಹಿಳೆಯೊಬ್ಬರೊಂದಿಗೆ ನಡೆಸಿದ್ದರು ಎನ್ನಲಾದ ಅಶ್ಲೀಲ ವಿಡಿಯೋ ಚಾಟೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಸಚಿವನ ಬಗ್ಗೆ ಆಕ್ರೋಶ ಕೇಳಿ ಬಂದಿದೆ. ಆದರೆ ಆರೋಗ್ಯ ಸಚಿವರು ಈ ವಿಡಿಯೋ ನನ್ನದಲ್ಲ ಇದೊಂದು ನಕಲಿ ಹಾಗೂ ಎಡಿಟ್ ಮಾಡಲಾದ ವೀಡಿಯೋ ಎಂದು ಅಳಲು ತೋಡಿಕೊಂಡಿದ್ದಾರೆ.
ತನ್ನ ರಾಜಕೀಯ ಜೀವನವನ್ನು ಮುಗಿಸಲು ಯಾರೋ ವಿರೋಧಿಗಳು ನಡೆಸಿರುವ ಷಡ್ಯಂತ್ರ ಎಂದು ಸಚಿವ ಬನ್ನಾ ಗುಪ್ತಾ ಹೇಳಿದ್ದಾರೆ. 19 ಸೆಕೆಂಡ್‌ಗಳ ಈ ವಿಡಿಯೋವನ್ನು ಜಾರ್ಖಂಡ್‌ನ (Jharkhand) ಬಿಜೆಪಿ ಸಂಸದ ಎಂಪಿ ನಿಶಿಕಾಂತ್ ದುಬೆ ಅವರ ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಕಾಂಗ್ರೆಸ್‌ನ ನಿಜಬಣ್ಣವನ್ನು ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದು @INCIndia ಕಾಂಗ್ರೆಸ್‌ನ ಗುಣ, ಇದು ಜಾರ್ಖಂಡ್ ಆರೋಗ್ಯ ಸಚಿವರಾಗಿರುವ ಬನ್ನಾ ಗುಪ್ತಾ ಅವರು ಮಹಿಳೆಯ ಘನತೆಯೊಂದಿಗೆ ವರ್ತಿಸುತ್ತಿರುವ ರೀತಿ, ಕಾಮಗ್ರೆಸ್ ಕಾರ್ಯಕರ್ತ ಸುಶೀಲ್ ಶರ್ಮಾ ತನ್ನ ಪತ್ನಿಯನ್ನು ಒವೆನ್‌ನಲ್ಲಿಟ್ಟು ಸುಟ್ಟ, ಗಾಂಧಿ ಕುಟುಂಬ ಇದನ್ನು ಅರ್ಥಮಾಡಿಕೊಳ್ಳಬೇಕು. ಇದು ನಿಜವಾದಲ್ಲಿ ಕಾಂಗ್ರೆಸ್ ನಾಚಿಕೆಯಿಂದ ತಲೆಕೆಳಗೆ ಹಾಕಬೇಕು. ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಟ್ವಿಟ್ ಮಾಡಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುವಾಗ ಯಾರೂ ನೋಡ್ತಿಲ್ಲಾಂತ ಹೀಗೆಲ್ಲಾ ಮಾಡಿದ್ರೆ ಜೈಲೂಟ ಗ್ಯಾರಂಟಿ!
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಬನ್ನಾ ಗುಪ್ತ ಪ್ರತಿಕ್ರಿಯಿಸಿದ್ದು, ಇದು ನನ್ನ ವಿರುದ್ಧ ರೂಪಿಸಲಾದ ಷಡ್ಯಂತ್ರವಾಗಿದೆ. ಈ ವಿಡಿಯೋ ಎಡಿಟ್ ಮಾಡಿರುವುದು ಎಂಬುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಿಸಿದ್ದೇನೆ. ಈ ಬಗ್ಗೆ ಶೀಘ್ರದಲ್ಲೇ ಪೊಲೀಸರು ತನಿಖೆ ಮಾಡಲಿದ್ದಾರೆ. ನನ್ನ ಮಾನಹಾನಿ ಮಾಡಿದ ಆರೋಪಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಗುಪ್ತಾ ಹೇಳಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ತಮ್ಮ ಸಂಪುಟದ ಸಚಿವರ ಈ ವಿಡಿಯೋ ನಿಜವೋ ಸುಳ್ಳೋ ಎಂಬ ಬಗ್ಗೆ ತನಿಖೆ ಮಾಡಬೇಕು ಎಂದು ಜಾರ್ಖಂಡ್ ಬಿಜೆಪಿ ಆಗ್ರಹಿಸಿದೆ.
ಆರೋಗ್ಯ ಸಚಿವರನ್ನು (Health minister) ಒಳಗೊಂಡಿರುವ ಈ ವಿಡಿಯೋ ಆಕ್ಷೇಪಾರ್ಹವಾಗಿದೆ. ಆದರೆ ಈ ವಿಡಿಯೋದ ಸತ್ಯಾಂಶದ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಈ ವಿಡಿಯೋ ನಿಜವೋ ಸುಳ್ಳೋ ಎಂಬುದು ಗೊತ್ತಾಗಬೇಕಿದೆ. ಇವರು ಮುಖ್ಯಮಂತ್ರಿ (Chief Minister) ಸೊರೆನ್ (Hemant Soren) ಸಂಪುಟದಲ್ಲಿ ಸಚಿವರೂ ಆಗಿರುವುದರಿಂದ ಈ ವಿಡಿಯೋ ನಿಜವೋ ಸುಳ್ಳೋ ಎಂದು ತನಿಖೆಗೆ ನಡೆಸುವುದು ಸಿಎಂ ಜವಾಬ್ದಾರಿಯಾಗಿದೆ ಎಂದು ಬಿಜೆಪಿ ನಾಯಕ ಪ್ರತುಲ್ ಶಾ ಡಿಯೋ (Pratul Shah Deo) ಅವರು ಹೇಳಿದ್ದಾರೆ. ಒಂದು ವೇಳೆ ವಿಡಿಯೋ ನಿಜವಾಗಿದ್ದಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸುಳ್ಳಾಗಿದ್ದಲ್ಲಿ ಇದರ ಹಿಂದಿರುವವರು ಯಾರು ಎಂಬುದು ಬಯಲಾಗಬೇಕು. ಹಾಗೂ ಈ ಬಗ್ಗೆ ಕೂಡಲೇ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಪಾಟ್ನಾ ಬಳಿಕ ಭಾಗಲಪುರ ರೈಲು ನಿಲ್ದಾಣ ಟಿವಿಯಲ್ಲಿ ಅಶ್ಲೀಲ ಸಂದೇಶ, ಹೌಹಾರಿದ ಜನ!
यह है का चरित्र,झारखंड के स्वास्थ्य मंत्री बन्ना गुप्ता जी का यह तथाकथित माजरा है।महिलाओं के इज़्ज़त से खेलना,कॉंग्रेस कार्यकर्ता सुशील शर्मा का अपने पत्नी को तंदूर में जलाना,काश गॉंधी परिवार समझ पाता,यदि यह सही है तो कॉंग्रेस के लिए डूब मरने वाली बात है pic.twitter.com/5Wg3EOcivu
— Dr Nishikant Dubey (@nishikant_dubey)